ಸುಂಟಿಕೊಪ್ಪ, ಜು. 20: ಕೆದಕಲ್ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿಜೆಪಿಯನ್ನು ಇನ್ನಷ್ಟು ಭದ್ರಪಡಿಸಲು ಎಲ್ಲಾ ಕಾರ್ಯಕರ್ತರು ಪಣ ತೊಡಬೇಕು ಎಂದು ಸೋಮವಾರಪೇಟೆ ಕ್ಷೇತ್ರ ಬಿಜೆಪಿ ಅಧ್ಯಕ್ಷ ಕೊಮಾರಪ್ಪ ಹೇಳಿದರು.
ಸಮೀಪದ ಕೆದಕಲ್ ಪಿ.ಸಿ. ಆವರಣದಲ್ಲಿ ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆಗಳು, ಬಿಜೆಪಿ ಸಾಧನೆ ಯನ್ನು ಮನೆಮನೆಗೆ ತೆರಳಿ ಜನರಿಗೆ ಅರ್ಥವಾಗುವಂತೆ ತಿಳಿಸಿ ಕೊಡಬೇಕು ಎಂದು ಅವರು ಕಾರ್ಯಕರ್ತರಿಗೆ ಹೇಳಿದರು. ಇದೇ ಸಂದರ್ಭ ಕೆದಕಲ್ ವ್ಯಾಪ್ತಿಯ ವಿವಿಧ ಬಿಜೆಪಿ ಘಟಕದ ಪದಾಧಿಕಾರಿಗಳ ಆಯ್ಕೆ ನಡೆಯಿತು. ಕೆದಕಲ್ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷರಾಗಿ ಬಿ.ಬಿ. ರಮೇಶ್ ರೈ ಅವರನ್ನು ಅವಿರೋಧವಾಗಿ ನೇಮಕ ಮಾಡಲಾಯಿತು. ಉಪಾಧ್ಯಕ್ಷರಾಗಿ ಪಿ.ಸಿ. ಮಣಿ, ಪ್ರದಾನ ಕಾರ್ಯದರ್ಶಿಯಾಗಿ ಪಿ.ಯು. ನಂದಕುಮಾರ್.
ಯುವ ಮೋರ್ಚಾ ಘಟಕ; ಕೆ. ಕನಿಸ್ (ಅಧ್ಯಕ್ಷ), ಎನ್.ಆರ್. ದಿನೇಶ್, ಬಿ.ಆರ್. ಸುಜಿತ್ (ಉಪಾಧ್ಯಕ್ಷರು), ಕಮಲಾಸನ್ (ಪ್ರಧಾನ ಕಾರ್ಯದರ್ಶಿ).
ಹಿಂದುಳಿದ ವರ್ಗಗಳ ಘಟಕ; ಬಿ.ಎಸ್. ಜಯನಂದ (ಅಧ್ಯಕ್ಷ), ಕೆ.ಕೆ. ಪ್ರಕಾಶ್ (ಉಪಾಧ್ಯಕ್ಷ), ಬಿ.ಆರ್. ಪುನೀತ್ (ಕಾರ್ಯದರ್ಶಿ).
ಮಹಿಳಾ ಮೋರ್ಚಾ ಘಟಕ; ಹೆಚ್.ಎ. ಸರೋಜ (ಅಧ್ಯಕ್ಷೆ).
ಅಲ್ಪಸಂಖ್ಯಾತ ಘಟಕ; ಶರೀಫ್ (ಅಧ್ಯಕ್ಷ), ಅಶ್ರಫ್ (ಉಪಾಧ್ಯಕ್ಷ) ಇವರುಗಳು ನೇಮಕಗೊಂಡರು.