ಚೆಟ್ಟಳ್ಳಿ, ಜು. 20: ದಾವಣಗೆರೆ ಯಲ್ಲಿ ನಡೆಯಲಿರುವ ಮೂರನೇ ವಿಶ್ವ ಕನ್ನಡ ಸಮ್ಮೇಳನಕ್ಕೆ ಸಂಬಂಧಿಸಿದಂತೆ, ವಿಧಾನ ಸೌಧದ ಸಮ್ಮೇಳನದ ಸಭಾಂಗಣ ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಾಡಿನ ಗಣ್ಯರು, ಸಾಹಿತಿಗಳು ಮತ್ತು ಕಲಾವಿದರುಗಳ ಸಮ್ಮುಖದಲ್ಲಿ ಸಭೆ ನಡೆಯಿತು.ಸಭೆಗೆ ಕೊಡಗಿನಿಂದ ಕೊಡವ ಸಾಹಿತ್ಯ ಅಕ್ಯಾಡೆಮಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ಅರೆಭಾಷೆ ಅಕಾಡೆಮಿ ಅಧ್ಯಕ್ಷÀ ಕೊಲ್ಯದ ಗಿರೀಶ್, ಚೆಟ್ಟಳ್ಳಿಯ ವನ್ಯಜೀವಿ ಛಾಯಾಚಿತ್ರ ಗ್ರಾಹಕ ಪುತ್ತರಿರ ಪಪ್ಪು ತಿಮ್ಮಯ್ಯ, ಬೆಂಗಳೂರಿನಲ್ಲಿರುವ ಹರ್ಷಿತ್ ಸೋಮಯ್ಯ ಅವರುಗಳು ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ವಿಶ್ವ ಕನ್ನಡ ಸಮ್ಮೇಳನವು ಕನ್ನಡ ಭಾಷಿಕ ಜನರನ್ನು ತಮ್ಮ ರಾಜ್ಯ, ದೇಶಗಳ ಗಡಿ ಮೀರಿ ಭಾವೈಕ್ಯತೆಯ ಹಾದಿಯಲ್ಲಿ ಒಂದಾಗಿಸುವ ದಿಸೆಯಲ್ಲಿ ಸಹಾಯವಾಗಿದೆ. ನಾಡಿನ ನೆಲ, ಜಲ, ಭಾಷೆ , ಸಂಸ್ಕೃತಿ, ಬಗ್ಗೆ ಜನತೆಯಲ್ಲಿ ಅಭಿಮಾನ ಮೂಡಿಸಲು ಪ್ರೇರಣೆ ಯಾಗುತ್ತದೆ. ಪ್ರಪಂಚದಾದ್ಯಂತ ನೆಲೆಸಿರುವ ನಾಡಿನ ಹೆಮ್ಮೆಯ ಪ್ರತಿಭಾನಿತ್ವ ಸಾಧಕರು ಒಂದೇ ವೇದಿಕೆಯಲ್ಲಿ ತಮ್ಮ ವಿಚಾರಧಾರೆ ಯನ್ನು ಅಭಿವ್ಯಕ್ತಿಸಲು ಸೂಕ್ತ ವೇದಿಕೆಯನ್ನು ಕಲ್ಪಿಸಲಾಗುತ್ತದೆ. ಈ ಸಂಬಂಧ ಎಲ್ಲಾ ರೀತಿಯ ಸಹಕಾರ ನೀಡುವದಾಗಿ ಅಭಿಪ್ರಾಯಿಸಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀ, ಸಚಿವ ಪ್ರಿಯಾಂಕಾ ಖರ್ಗೆ, ಮಾಜಿ ಸಚಿವ ಮುಖ್ಯಮಂತ್ರಿ ಚಂದ್ರು, ಧಾರವಾಹಿ ನಿರ್ದೇಶಕÀ ಟಿ.ಎನ್. ಸೀತಾರಾಂ, ಎಸ್.ಎಸ್. ಮಂಜುನಾಥ, ಎಸ್.ಆರ್. ಪಾಟೀಲ್, ದಾವಣಗೆರೆಯ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾಧಿಕಾರಿ ಮತ್ತು ಹಿರಿಯ ಕವಿಗಳು, ಸಾಹಿತಿಗಳು, ಕಲಾವಿದರು ಪಾಲ್ಗೊಂಡಿದ್ದರು.