ಗೋಣಿಕೊಪ್ಪಲು, ಜು. 20: ಕೊಡಗು ಜಿಲ್ಲೆಯಲ್ಲಿ ಏಪ್ರೀಲ್ ತಿಂಗಳಿ ನಿಂದ ಪೆÇಲೀಸ್-ಸಾರ್ವಜನಿಕರ ಸಂಬಂಧ ಮೂಲಕ ಕಾನೂನು ಬಾಹಿರ ಚಟುವಟಿಕೆಗಳನ್ನು ಹತ್ತಿಕ್ಕಲು ಹಾಗೂ ಸ್ನೇಹಮಯ ವಾತಾವರಣದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಪ್ರತಿ ಗ್ರಾಮದಲ್ಲಿ ‘ಸಶಕ್ತ ಪೆÇಲೀಸ್ ಸಶಕ್ತ ಸಮುದಾಯ’ ಎಂಬ ಧ್ಯೇಯವಾಕ್ಯದೊಂದಿಗೆ ಸುಧಾರಿತ ಗಸ್ತು ವ್ಯವಸ್ಥೆಯನ್ನು ಕೊಡಗು ಪೆÇಲೀಸ್ ಅಧೀಕ್ಷಕ ರಾಜೇಂದ್ರ ಪ್ರಸಾದ್ ನೇತ್ರತ್ವದಲ್ಲಿ ಜಾರಿಗೆ ತರಲಾಗಿದ್ದು ಇಂದು ಅಪರಾಹ್ನ ಪೆÇನ್ನಂಪೇಟೆ ಕೊಡವ ಸಮಾಜ ಆವರಣದಲ್ಲಿ ಬೀಟ್ ಸದಸ್ಯರ ಸಭೆ ನಡೆದು ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಯಿತು.
ಮಾಜಿ ಜಿಲ್ಲಾ ಪರಿಷತ್ ಅಧ್ಯಕ್ಷ ಜೆ.ಎ. ಕರುಂಬಯ್ಯ ಅವರು ಪೆÇಲೀಸ್ ವಸತಿ ಗ್ರಹ ನಿರ್ಮಾಣಕ್ಕೆ ಗೋಣಿಕೊಪ್ಪಲಿನಲ್ಲಿ ಒಂದೂವರೆ ಎಕರೆ ನಿವೇಶನವನ್ನು ಉದಾರವಾಗಿ ನೀಡಿದ್ದು, ಕಾರ್ಯಕ್ರಮ ಉದ್ಘಾಟಿಸಿದರು.
ಗೋಣಿಕೊಪ್ಪಲು ಪೆÇಲೀಸ್ ವೃತ್ತ ಮಟ್ಟದ ಬೀಟ್ ಸದಸ್ಯರ ಸಭೆಯಲ್ಲಿ ಜಿಲ್ಲಾ ಪೆÇಲೀಸ್ ಅಧೀಕ್ಷಕ ರಾಜೇಂದ್ರ ಪ್ರಸಾದ್ ಮಾತನಾಡಿ, ಕೇವಲ ಕಾನೂನು ಪಾಲನೆ ಮಾಡದವರಿಗೆ ದಂಡ ವಿಧಿಸುವ ಮೂಲಕ ಸುಧಾರಣೆ ಅಸಾಧ್ಯ. ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಬಗ್ಗೆ ನಿರಂತರ ಜಾಗೃತಿ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಹಲವು ಕಡೆ ಸೂಚನಾ ಫಲಕ, ಸಿಗ್ನಲ್, ಸಿಸಿ ಟಿವಿಯನ್ನು ಅಳವಡಿಸಲಾಗಿದ್ದು, ಏಪ್ರಿಲ್ 17, 2017 ರಿಂದ ಸುಧಾರಿತ ಗಸ್ತು ವ್ಯವಸ್ಥೆಯನ್ನೂ ಜಾರಿಗೊಳಿಸಲಾಗಿದೆ ಎಂದು ನುಡಿದರು.
ಸಭೆಯಲ್ಲಿ ಪೆÇನ್ನಂಪೇಟೆ ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕಂದಾ ಸುಬ್ಬಯ್ಯ, ಗ್ರಾಮಗಳಲ್ಲಿ ಅಧಿಕಗೊಳ್ಳುತ್ತಿರುವ ಗಾಂಜಾ ಮಾರಾಟದ ಬಗ್ಗೆ ಗಮನ ಸೆಳೆದರೆ, ಜಿ.ಪಂ. ಮಾಜಿ ಸದಸ್ಯ ಬಾಂಡ್ ಗಣಪತಿ ಕೊಡಗು ಜಿಲ್ಲೆಯಲ್ಲಿ ಗೋ ಹತ್ಯೆ ನಿಷೇಧ ಜಾರಿಯಲ್ಲಿದ್ದರೂ ಆನೆಚೌಕೂರು ಹಾಗೂ ಮಾಕುಟ್ಟ ಗೇಟ್‍ಗಳಲ್ಲಿ ಪೆÇಲೀಸರ ಕಣ್ಣು ತಪ್ಪಿಸಿ ದನ ಸಾಗಾಟ ಹೇಗೆ ಸಾಧ್ಯ? ಇದನ್ನು ಸಂಘಟನೆಗಳ ಕಾರ್ಯಕರ್ತರೇ ಬಯಲಿಗೆಳೆಯಬೇಕಾಗಿದೆಯೇ ಎಂದು ಗಮನ ಸೆಳೆದರು. ವೀರಾಜಪೇಟೆ ಮತ್ತು ಗೋಣಿಕೊಪ್ಪಲು ನಡುವೆ ಸುಮಾರು 25ಕ್ಕೂ ಅಧಿಕ ಪೆÇಲೀಸ್ ಬ್ಯಾರಿಕೇಡ್‍ಗಳನ್ನು ಅಳವಡಿಸಿದ್ದು ಹೆದ್ದಾರಿಯಲ್ಲಿ ಸಾಲು ಸಾಲು ವಾಹನಗಳು ನಿಂತು ಸಾರ್ವಜನಿಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಯಾಗುತ್ತಿದೆ. ಅವಶ್ಯವಿಲ್ಲದೆಡೆ ಬ್ಯಾರಿಕೇಡ್ ತೆರವುಗೊಳಿಸಲು ಮನವಿ ಮಾಡಿದರು. ‘ಶಕ್ತಿ’ ಪತ್ರಿಕೆಯಲ್ಲಿ ಪ್ರಕಟವಾದ ಕಂಡಂಗಾಲದಲ್ಲಿ ಕೃತಕ ಮರಳು ಮಾಫಿಯಾ ವರದಿಯನ್ನು ಇದೇ ಸಂದರ್ಭ ಉಲ್ಲೇಖಿಸಿದರು.
ಪೆÇನ್ನಂಪೇಟೆ ವರ್ತಕರ ಸಂಘದ ಮೂಲಕ ಸಿಸಿ ಕ್ಯಾಮೆರಾವನ್ನು ನೀಡಲಾಗುತ್ತಿದೆ ಎಂದು ಮಾಜಿ ತಾ.ಪಂ.ಸದಸ್ಯ ಕೋಳೇರ ದಯಾ ಚಂಗಪ್ಪ ಪ್ರಕಟಿಸಿದರು. ಸುಳ್ಳಿಮಾಡ ವಸಂತ್ ಅವರು ಅಕ್ರಮ ಮರಳು ಸಾಗಾಟ ಹಾಗೂ ಆನೆ, ಹುಲಿಗಳು ರೈತರ ತೋಟಗಳಿಗೆ ನುಸುಳುತ್ತಿರುವ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ನಿವೃತ್ತ ಪೆÇಲೀಸ್ ಉಪನಿರೀಕ್ಷಕ ಕೆ.ಬಿ. ದೇವಯ್ಯ ಅವರು ಬೀಟ್ ಪೆÇಲೀಸ್ ವ್ಯವಸ್ಥೆ ಬಗ್ಗೆ ಮಾಹಿತಿ ಹಂಚಿಕೊಂಡರು. ಮಾಯಮುಡಿ ಮಾಜಿ ಗ್ರಾ.ಪಂ. ಅಧ್ಯಕ್ಷ ಮಣಿಕಂಠ ಅವರು ಮದ್ಯದಂಗಡಿಗಳು ಮುಚ್ಚಲ್ಪಟ್ಟ ನಂತರ ಅಂಗಡಿಗಳಲ್ಲಿ, ಕಾಳಸಂತೆಯಲ್ಲಿ ಮದ್ಯಗಳನ್ನು ದುಪ್ಪಟ್ಟು ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಪೆÇಲೀಸರು ಈ ಬಗ್ಗೆ ಕ್ರಮ ಜರುಗಿಸಲು ಮನವಿ ಮಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಜಿಲ್ಲಾ ಪರಿಷತ್ ಅಧ್ಯಕ್ಷ ಜೆ.ಎ. ಕರುಂಬಯ್ಯ ಅವರು ಪೆÇಲೀಸರ ಉತ್ತಮ ಕಾರ್ಯವನ್ನು ಶ್ಲಾಘಿಸಿದರು. ಜಿ.ಪಂ. ಸದಸ್ಯೆ ಪಿ.ಆರ್. ಪಂಕಜ, ಜಿಲ್ಲಾ ಡಿಎಸ್‍ಎಸ್ ಸಂಚಾಲಕ ಪರಶುರಾಮ್, ಪಿ.ಬಿ. ನಟೇಶ್, ಮಚ್ಚಮಾಡ ಮಾಚಯ್ಯ, ಕೋದೇಂಗಡ ವಿಠಲ, ಟಾಟು ಮೊಣ್ಣಪ್ಪ ಮುಂತಾದವರು ಮಾತನಾಡಿದರು. ವೀರಾಜಪೇಟೆ ಡಿವೈಎಸ್‍ಪಿ ನಾಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವದು ಅತಿಮುಖ್ಯ. ಈ ನಿಟ್ಟಿನಲ್ಲಿ ಮಾಹಿತಿ ಕಲೆಹಾಕಲು ಬೀಟ್ ಸದಸ್ಯರ ಸಹಕಾರ ಹೊಂದಲಾಗುತ್ತದೆ ಎಂದು ಹೇಳಿದರು. ಗೋಣಿಕೊಪ್ಪಲು ಪೆÇಲೀಸ್ ವೃತ್ತ ನಿರೀಕ್ಷಕ ಪಿ.ಕೆ. ರಾಜು ಸ್ವಾಗತ ಹಾಗೂ ಕಾರ್ಯಕ್ರಮ ನಿರೂಪಿಸಿದರೆ, ಮಹಿಳಾ ಪೆÇಲೀಸ್ ಶೋಭಾ ಪ್ರಾರ್ಥನೆ, ಪೆÇನ್ನಂಪೇಟೆ ಪೆÇಲೀಸ್ ಉಪ ನಿರೀಕ್ಷಕ ಜಯರಾಮ್ ವಂದನಾರ್ಪಣೆ ಮಾಡಿದರು.
- ಟಿ.ಎಲ್. ಶ್ರೀನಿವಾಸ್