ಮಡಿಕೇರಿ, ಜು. 20: ಮಡಿಕೇರಿ ಆಟೋ ಮಾಲೀಕ ಮತ್ತು ಚಾಲಕರ ಸಂಘದ ಮಹಾಸಭೆ ತಾ. 25 ರಂದು ನಗರದಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಡಿ.ಹೆಚ್. ಮೇದಪ್ಪ, ಅಂದು ಬೆಳಿಗ್ಗೆ 10.30 ಗಂಟೆಗೆ ಸ್ಥಳೀಯ ಸಮುದ್ರ ಹೊಟೇಲ್ ಸಭಾಂಗಣದಲ್ಲಿ ಸಂಘದ ನಗರಾಧ್ಯಕ್ಷ ಎ. ಅರುಣ್ ಕುಮಾರ್ ಅಧ್ಯಕ್ಷತೆಯಲ್ಲಿ ಸಭೆÉಯನ್ನು ಆಯೋಜಿಸಲಾಗಿದೆ ಎಂದರು.

ಸಭೆಯಲ್ಲಿ ವರ್ಷದ ಕನಿಷ್ಟ ಹತ್ತು ತಿಂಗಳ ಕಾಲ ಸಂಘಕ್ಕೆ ಮಾಸಿಕ ರೂ. 30 ಪಾವತಿಸಿರುವ ಸದಸ್ಯರು ತಮ್ಮ ಸಮಸ್ಯೆಗಳನ್ನು ಮಂಡಿಸಿ ಚರ್ಚಿಸಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದರು. ಸಂಘದ ಚುನಾವಣೆಯಲ್ಲಿ ಪಾಲ್ಗೊಳ್ಳುವ ಸದಸ್ಯರು ಕನಿಷ್ಟ 5 ವರ್ಷಗಳ ಕಾಲ ಆಟೋ ಚಾಲಕರಾಗಿ ನಗರದಲ್ಲಿ ಕಾರ್ಯ ನಿರ್ವಹಿಸಿ ರುವದು ಕಡ್ಡಾಯ. ಇವರು ಸಂಘಕ್ಕೆ ಮಾಸಿಕ ಶುಲ್ಕವನ್ನು ನಿರಂತರವಾಗಿ ಪಾವತಿಸಿರಬೇಕೆಂದು ಸ್ಪಷ್ಟಪಡಿಸಿ, ಸಭೆಯಲ್ಲಿ ನಗರದ ಎಲ್ಲಾ ಆಟೋ ಚಾಲಕ ಸದಸ್ಯರು ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಪ್ರೋತ್ಸಾಹ ಧನ

ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಶೇ. 85 ರಷ್ಟು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಸಭೆಯಲ್ಲಿ ಪ್ರೋತ್ಸಾಹ ಧನ ಮತ್ತು ಕಿರುಕಾಣಿಕೆಯನ್ನು ನೀಡಲಾಗುತ್ತದೆ.

ಕಳೆದ ಮೂರು ವರ್ಷಗಳಿಂದ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಪ್ರೋತ್ಸಾಹ ಧನ ಪಡೆಯಲು ಆಸಕ್ತರಾಗಿರುವವರು ತಾ. 22 ರೊಳಗಾಗಿ ಅಂಕಪಟ್ಟಿಯೊಂದಿಗೆ ಅರ್ಜಿಯನ್ನು ಸಂಘಕ್ಕೆ ಸಲ್ಲಿಸ ಬೇಕೆಂದು ಮೇದಪ್ಪ ತಿಳಿಸಿದರು. ಪ್ರೋತ್ಸಾಹ ಧನಕ್ಕೆ ಅರ್ಜಿ ಸಲ್ಲಿಸುವವರು ಮೊ.ಸಂ. 7349319725, 9686300738, 9483840637, 9449886534 ನ್ನು ಸಂಪರ್ಕಿಸಬಹುದು.

ಗೋಷ್ಠಿಯಲ್ಲಿ ಸಂಘದ ನಗರಾಧ್ಯಕ್ಷ ಎ. ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಬಿ.ಸಿ. ದಿನೇಶ್, ಖಜಾಂಚಿ ಪಿ.ವಿ. ಆನಂದ ಕುಮಾರ್ ಹಾಗೂ ಸಂಘಟನಾ ಕಾರ್ಯದರ್ಶಿ ಬಿ.ಟಿ. ಸುಂದರ ಉಪಸ್ಥಿತರಿದ್ದರು.