ಮಡಿಕೇರಿ, ಜು. 20: ಪ್ರವಾಸಿಗರ ಕಾರೊಂದು ರಾಜ್ಯ ಹೆದ್ದಾರಿಯ ಸುಂಟಿಕೊಪ್ಪ ಬಳಿಯ ಬಾಳೆಕಾಡು ಬಳಿ ಮ್ಯಾಕ್ಸಿಮಾ ವ್ಯಾನ್‍ಗೆ ಡಿಕ್ಕಿಯಾದ ಪರಿಣಾಮ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಬೆಂಗಳೂರಿನಿಂದ ಆಗಮಿಸಿದ್ದ ಇಂಜಿನಿಯರ್ ವಿದ್ಯಾರ್ಥಿಗಳಿದ್ದ ಹುಂಡೈ ಐಟೆನ್ ಕಾರು ಬಾಳೆಕಾಡು ಬಳಿ ಮಡಿಕೇರಿ ಕಡೆಗೆ ಅಗಮಿಸುತ್ತಿದ್ದ ಮ್ಯಾಕ್ಸಿಮ ವಾಹನಕ್ಕೆ ಡಿಕ್ಕಿಯಾಗಿದೆ. ಸಾರಿಗೆ ಸಂಸ್ಥೆ ಬಸ್ ಅನ್ನು ಹಿಂದಿಕ್ಕುವ ರಭಸದಲ್ಲಿ ಕಾರು ವ್ಯಾನ್‍ಗೆ ಅಪ್ಪಳಿಸಿದೆ. ವ್ಯಾನ್‍ನಲ್ಲಿದ್ದ ರಾಣಿ, ಲಕ್ಷ್ಮಣ, ರಮೇಶ್ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.