ನಾಪೆÇೀಕ್ಲು, ಜು. 22: ಚಿಟಿ ಪಿಟಿ ಮಳೆ. ಪಿಚಿ ಪಿಚಿ ಕೆಸರು. ನಡುವೆ ನಾಟಿ ಗದ್ದೆ, ಸುತ್ತಲೂ ಶಾಲಾ ವಿದ್ಯಾರ್ಥಿಗಳು, ಪೈರು ತೆಗೆಯುವ, ನಾಟಿ ನೆಡುವ ತರಬೇತಿ, ಪೈಪೆÇೀಟಿ. ನಾಟಿ ಓಟ, ಹಗ್ಗ ಜಗ್ಗಾಟ,ಶಿಕ್ಷಕರು, ಸಾರ್ವಜನಿಕರು. ರಂಗು ರಂಗಿನ ಉಡುಗೆ ತೊಡುಗೆಯಲ್ಲಿ ಮಹಿಳೆಯರು, ಮಧ್ಯಾಹ್ನಕ್ಕೆ ಕುರ್ಚಿ ಮೀನು ಊಟ, ಇದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ನಾಪೆÀÇೀಕ್ಲು ಕೊಡವ ಸಮಾಜದ ಸಾಂಸ್ಶøತಿಕ ಮನರಂಜನಾ ಕೂಟ ಮತ್ತು ಬಿದ್ದಾಟಂಡ ಕುಟುಂಬಸ್ಥರ ಸಹಯೋಗದೊಂದಿಗೆ ಬಿದ್ದಾಟಂಡ ಬೋಪಯ್ಯ ಅವರ ಭತ್ತದ ಗದ್ದೆಯಲ್ಲಿ ನಡೆದ ನಾಲ್ಕನೇ ವರ್ಷದ ಬೇಲ್ ನಮ್ಮೆಯ ಕ್ಷಣ.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಸಭಾ ಸದಸ್ಯ ಕೆ.ಜಿ. ಬೋಪಯ್ಯ ಕೊಡಗಿನ ಎಲ್ಲಾ ಹಬ್ಬಗಳಿಗೂ ತನ್ನದೇ ಆದ ಚಾರಿತ್ರಿಕ ಹಿನ್ನಲೆಯಿದೆ. ಕೊಡಗು ಕೃಷಿ ಪ್ರಧಾನ ಜಿಲ್ಲೆಯಾಗಿದೆ.

(ಮೊದಲ ಪುಟದಿಂದ) ಇಂದು ಕೊಡಗಿನಲ್ಲಿ ಜನರು ಭತ್ತದ ಕೃಷಿಗೆ ಹೆಚ್ಚಿನ ಮಹತ್ವ ನೀಡುತ್ತಿಲ್ಲ ಎಂದು ವಿಷಾದ ವ್ಯಕ್ಷಪಡಿಸಿದರು. ಭತ್ತದ ಗದ್ದೆಗಳನ್ನು ಪಾಳು ಬಿಡದೆ ಪ್ರತಿಯೊಬ್ಬರು ಮುಂದಿನ ದಿಗಳಲ್ಲಿ ಭತ್ತದ ಕೃಷಿ ಮಾಡುವದದರೊಂದಿಗೆ ಅಂತರ್ಜಲ ಕಾಪಾಡಲು ಸಹಕರಿಸಬೇಕಿದೆ. ಜಿಲ್ಲೆಯ ಎಲ್ಲಾ ಹಬ್ಬ ಹರಿದಿನಗಳು ಕೃಷಿಯಿಂದಲೇ ಆರಂಭಗೊಳ್ಳುತ್ತಿದೆ ಎಂಬದನ್ನು ಮರೆಯಬಾರದು. ಸಂಸ್ಕøತಿ ಮರೆತರೆ ಕೊಡಗು ಉಳಿಯಲು ಸಾಧ್ಯವಿಲ್ಲ ಆದುದರಿಂದ ತಮ್ಮ ಸಂಸ್ಕøತಿಯನ್ನು ಉಳಿಸಿ ಬೆಳೆಸುವಲ್ಲಿ ಎಲ್ಲರೂ ಮುಂದಾಗಬೇಕು ಎಂದರು.

ನಾಪೆÉÇೀಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್ ಮಾತನಾಡಿ, ಕೊಡಗಿನಲ್ಲಿ ಈ ಹಿಂದೆ ಜನರು ಕೃಷಿಯನ್ನು ಅವಲಂಭಿಸಿ ಬದುಕುತ್ತಿದ್ದರು. ಇಂದು ಹಣದ ಆಸೆಯಿಂದ ಪಟ್ಟಣ ಸೇರುತ್ತಿದ್ದಾರೆ. ಹಣದಿಂದ ಸಂಸ್ಕøತಿಯನ್ನು ಉಳಿಸಲು ಸಾಧ್ಯವಿಲ್ಲ ಎಲ್ಲರೂ ತಮ್ಮ ನೆಲ, ಜಲದ ಬಗ್ಗೆ ಕಾಳಜಿ ವಹಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಮಾತನಾಡಿ, ಭತ್ತದ ಬೆಳೆ ಬೆಳೆಯದ ಕಾರಣ ಇಂದು ಕೊಡಗಿನಲ್ಲಿ ಅಂತರ್ಜಲ ಕುಸಿದಿದೆ. ಮುಂದೆ ಇದು ಕೊಡಗಿಗೆ ಮಾರಕವಾಗಲಿದೆ. ಆದುದರಿಂದ ಎಲ್ಲರೂ ಭತ್ತದ ಕೃಷಿಯತ್ತ ಹೆಚ್ಚಿನ ಒಲವು ತೋರಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ ಕೊಡಗಿನಲ್ಲಿ ಜನರು ಲಾಭದಾಯಕವಲ್ಲದ ಕಾರಣದಿಂದ ಭತ್ತ ಬೆಳೆಯಲು ಹಿಂಜರಿಯುತ್ತಿದ್ದಾರೆ. ಭತ್ತದ ಕೃಷಿಗೆ ಸರಕಾರ ಪ್ರೋತ್ಸಾಹ ನೀಡಿದರೆ ಅಂತರ್ಜಲ ವೃದ್ಧಿಯಾಗುವದರೊಂದಿಗೆ ಕಾವೇರಿ ನದಿ ಸಮೃದ್ಧವಾಗಿ ಹರಿದು ರಾಜ್ಯ ಸುಬೀಕ್ಷವಾಗಲಿದೆ. ಜಿಲ್ಲೆಯ ಶಾಸಕರು, ಎಂ.ಎಲ್.ಸಿ. ಗಳು ಈ ಬಗ್ಗೆ ಸರಕಾರದ ಗಮನ ಸೆಳೆದು. ಜಿಲ್ಲೆಯಲ್ಲಿ ಭತ್ತದ ಕೃಷಿಕರಿಗೆ ಏಕರೆಗೆ 10 ಸಾವಿರ ಸಹಾಯ ಧನ ನೀಡುವಂತೆ ಕ್ರಮಕೈಗೊಳ್ಳಬೇಕು ಎಂದರು.

ನಾಪೆÇೀಕ್ಲು ಕೊಡವ ಸಮಾಜದ ಕಲ್ಚರಲ್ ರಿಕ್ರಿಯೇಷನ್ ಕೂಟದ ಅಧ್ಯಕ್ಷ ಕಾಂಡಂಡ ಜೋಯಪ್ಪ ಪ್ರಾಸ್ತವಿಕವಾಗಿ ಮಾತನಾಡಿದರು.

ಅಮ್ಮುಣಿಚಂಡ ಪ್ರವೀಣ್ ಚಂಗಪ್ಪ ‘ಆಧುನಿಕತೆಲ್ ಕೆಳಂಜ ನೆಲ್ಲ್ ಕೃಷಿ’ ಎಂಬ ಬಗ್ಗೆ ವಿಚಾರ ಮಂಡನೆ ಮಾಡಿದರು.

ನಂತರ ಶಾಲಾ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ವಿವಿಧ ಪೈಪೋಟಿ ಕಾರ್ಯಕ್ರಮ ನಡೆಯಿತು. ವಿಜೇತರಿಗೆ ನಗದು ಬಹುಮಾನವನ್ನು ವಿತರಿಸಲಾಯಿತು.

ವೇದಿಕೆಯಲ್ಲಿ ಬಿದ್ದಾಟಂಡ ಬೋಪಯ್ಯ, ನಾಪೆÇೀಕ್ಲು ಗ್ರಾಮ ಪಂಚಾಯಿತಿ ಸದಸ್ಯೆ ಪುಲ್ಲೇರ ಪದ್ಮಿನಿ, ಅಕಾಡೆಮಿ ಸದಸ್ಯರಾದ ಮೂಕೈರಿರ ಲೀಲಾವತಿ, ಅಣ್ಣೀರ ಹರೀಶ್ ಮಾದಪ್ಪ ಇದ್ದರು. ಮಣವಟ್ಟಿರ ದಯಾ ಕುಟ್ಟಪ್ಪ ಪ್ರಾರ್ಥಿಸಿ, ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. -ಪಿ.ವಿ.ಪ್ರಭಾಕರ್