ಸೋಮವಾರಪೇಟೆ, ಜು. 22: ಸಾಮಾಜಿಕ ಅರಣ್ಯ ಇಲಾಖೆ, ಓಡಿಪಿ ಸಂಸ್ಥೆ ಮೈಸೂರು ಇವರ ಸಹಯೋಗದೊಂದಿಗೆ ಬೇಳೂರು ಶಾಲಾ ಆವರಣದಲ್ಲಿ ವನಮಹೋತ್ಸವ ನಡೆಯಿತು. ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿ, ಜೀವಸಂಕುಲವನ್ನು ರಕ್ಷಿಸುತ್ತಿರುವ ಪರಿಸರವನ್ನು ರಕ್ಷಿಸುವದು ನಮ್ಮೆಲ್ಲರ ಕರ್ತವ್ಯವಾಗಬೇಕು. ನಾವೆಲ್ಲರೂ ಒಂದೊಂದು ಗಿಡಗಳನ್ನು ನೆಟ್ಟರೆ ಮುಂದಿನ ಪೀಳಿಗೆಗೆ ಅದರ ಉಪಯೋಗ ಸಿಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಬೇಳೂರು ಗ್ರಾ.ಪಂ. ಸದಸ್ಯ ಕೆ.ಪಿ. ಹರೀಶ್, ಕುಸುಬೂರು ಗ್ರಾಮ ಮಂಡಳಿ ಅಧ್ಯಕ್ಷ ಕಾಟ್ನಮನೆ ಗಿರೀಶ್, ಉಪವಲಯಾರಣ್ಯಾಧಿಕಾರಿ ಮಾದೇವನಾಯ್ಕ, ಓಡಿಪಿ ಸಂಸ್ಥೆಯ ಅಣ್ಣಮ್ಮ, ಕೆ.ಟಿ. ದಯಾನಂದ, ಚಕ್ರವರ್ತಿ ಸುರೇಶ್ ಮತ್ತಿತರರು ಇದ್ದರು. ಸಂತ ಜೋಸೆಫರ ಕಾಲೇಜಿನ ವಿದ್ಯಾರ್ಥಿಗಳು ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.