ವೀರಾಜಪೇಟೆ, ಜು. 22: ಗ್ರಾಮೀಣ ಪ್ರದೇಶದಲ್ಲಿ ನಡೆಯುವÀ ಕ್ರೀಡೆಗಳಿಗೆ ಪ್ರತಿಯೊಬ್ಬರು ಸಹಕಾರ ನೀಡುವದರೊಂದಿಗೆ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವಂತಾಗಬೇಕು ಎಂದು ಕದನೂರು ಗ್ರಾಮದ ಉದಯಂಡ ಚಂಗಪ್ಪ ಹೇಳಿದರು.ವೀರಾಜಪೇಟೆ ಸಮೀಪದ ಅರಮೇರಿ ಗ್ರಾಮದ ಉದಯಂಡ ಜಮುನಾ ಚಂಗಪ್ಪ ಅವರ ಗದ್ದೆಯಲ್ಲಿ ಕಡಂಗದ ‘ಲಿಮ್ರಾ ಫ್ರೆಂಡ್ಸ್’ ವತಿಯಿಂದ ಆಯೋಜಿಸಲಾಗಿದ್ದ 3ನೇ ವರ್ಷದ ‘ರಾಜ್ಯ ಮಟ್ಟದ ಕೆಸರು ಗದ್ದೆ ಕೀಡಾಕೂಟ’ ಕಾಲ್ಚೆಂಡು ಪಂದ್ಯಾಟವನ್ನು ಬಾಲ್ ಎಸೆದು ಉದ್ಘಾಟಿಸಿದ ಬಳಿಕ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಡಂಗ ಲಿಮ್ರಾ ಫ್ರೆಂಡ್ಸ್ ಅಧ್ಯಕ್ಷ ಪಿ.ಎ. ಕರೀಂ ವಹಿಸಿದ್ದರು. ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಪಿ.ಎಂ. ಅಬ್ದುಲ್ಲ, ಹಾಗೂ ಕಡಂಗದ ರಹಮಾನ್ ಅರಫ್. ರಾಸಿಕ್, ಟಿ.ಎಂ. ಅಬ್ದುಲ್ ರಹಮಾನ್, ನೂರುದ್ದೀನ್, ಸ್ಥಳೀಯ ಗ್ರಾಮಸ್ಥರಾದ ಉದಯಂಡ ಪೊನ್ನಪ್ಪ ಉಪಸ್ಥಿತರಿದ್ದರು. ಲಕ್ಕಿ ಬಾಯ್ಸ್ ತಂಡದ ಯೂನುಸ್ ಸ್ವಾಗತಿಸಿ ನಿರೂಪಿಸಿದರು. ಕಾಲ್ಚೆಂಡು ಪಂದ್ಯಾಟಕ್ಕೆ ಒಟ್ಟು 30 ತಂಡಗಳು ಭಾಗವಹಿಸಿದ್ದವು.