ಕರಿಕೆ, ಜು. 22: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರಿಕೆ ಶಾಖೆ ವತಿಯಿಂದ ಇತ್ತೀಚೆಗೆ ಗುರುಪೂಜೋತ್ಸವವನ್ನು ವಿವೇಕಾನಂದ ಯುವಕ ಸಂಘದ ಕಟ್ಟಡದಲ್ಲಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿ ಬೌದ್ಧಿಕ್ ನೀಡಿದ ಸಂಘದ ಮಡಿಕೇರಿ ತಾಲೂಕು ಕಾರ್ಯವಾಹ ಶಿವರಾಜ್ ಮಾತನಾಡಿ, ಆರ್.ಎಸ್.ಎಸ್. ದೇಶದ ಒಂದು ಬಹುದೊಡ್ಡ ದೇಶಭಕ್ತ ಸಂಘಟನೆಯಾಗಿದ್ದು, ಈ ದೇಶವನ್ನು ಪರಮ ವೈಭವದತ್ತ ಕೊಂಡೊಯ್ಯಲು ಪ್ರತಿಯೊಬ್ಬರು ಪಣತೊಡಬೇಕೆಂದರು. ಸಂಘದ ಸ್ವಯಂ ಸೇವಕರೊಬ್ಬರು ಈ ದೇಶದ ಪ್ರಧಾನಿಯಾಗಿರುವದು ಹೆಮ್ಮೆಯ ವಿಷಯವಾಗಿದ್ದು, ಒಂದು ಕಾಲದಲ್ಲಿ ಭಾರತವನ್ನು ಅಪಮಾನಿಸುತ್ತಿದ್ದ ರಾಷ್ಟ್ರಗಳು ಭಾರತವನ್ನು ಈಗ ಭಯದಿಂದ ನೋಡುವಂತಾಗಿದೆ ಮಾತ್ರವಲ್ಲದೆ ಹಲವಾರು ದೇಶಗಳು ಭಾರತದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದು, ಗಡಿಯಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ನೆರೆಯ ಪಾಕಿಸ್ತಾನಕ್ಕೆ ದಿಟ್ಟ ಉತ್ತರವನ್ನು ನೀಡುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಸೇವಾ ಪ್ರಮುಖ ಗಣೇಶ್, ಮಂಡಲ ಕಾರ್ಯವಾಹ ಅಜಯ್, ಜಿ.ಪಂ. ಸದಸ್ಯೆ ಕವಿತಾ ಪ್ರಭಾಕರ್ ಸೇರಿದಂತೆ ಕಾರ್ಯಕರ್ತರು, ಸ್ವಯಂ ಸೇವಕರು ಹಾಜರಿದ್ದರು.