ಮಡಿಕೇರಿ, ಜು. 22: ಮಡಿಕೇರಿ ತಾಲೂಕು ಅಜಿಲಯಾನೆ ನಲಿಕೆ ಸೇವಾ ಸಮಿತಿ, ತೋಟಗಾರಿಕೆ ಇವರ ಸಹಯೋಗದೊಂದಿಗೆ ಚೆಂಬು ಆನ್ಯಾಳ ಸಮುದಾಯ ಭವನದಲ್ಲಿ ಅಜಿಲಯಾನೆ ನಲಿಕೆ ಸೇವಾ ಸಮಿತಿ ಅಧ್ಯಕ್ಷ ಕೆ.ಕೆ. ಬಾಲಕೃಷ್ಣ ಅಧ್ಯಕ್ಷತೆಯಲ್ಲಿ ಗೇರು ಕೃಷಿ ಬಗ್ಗೆ ಕಾರ್ಯಕ್ರಮ ನಡೆಯಿತು. ತೋಟಗಾರಿಕೆ ಸಹಾಯಕ ನಿರ್ದೇಶಕ ಸಿ.ಎಂ. ಪ್ರಮೋದ್ ಗೇರು ಕೃಷಿಯ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು. ತೋಟಗಾರಿಕೆ ಸಹಾಯಕ ಅಧಿಕಾರಿ ಗುರುರಾಜ್ ಗೇರು ಕೃಷಿಯ ತಾಂತ್ರಿಕ ಮಾಹಿತಿ ನೀಡಿದರು. ಸಂಪಾಜೆ ಹೋಬಳಿಯ ತೋಟಗಾರಿಕೆ ಅಧಿಕಾರಿ ಹೆಚ್.ಎಂ. ಗಣೇಶ್ ಮಾಹಿತಿ ನೀಡಿದರು. ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಜಯರಾಮ ಅವರು ಮಲೇರಿಯ ರೋಗದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು.

ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕ ಡಾ. ಲೋಕನಾಥ್ ಅವರು ನಿಂತ ನೀರಿನಿಂದ ಹರಡುವ ರೋಗದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು. ಸಂಪಾಜೆ ಕೃಷಿ ಸಹಾಯಕ ಸಮಿತಿ ಸದಸ್ಯ ಕೆ.ಕೆ. ದೇವಪ್ಪ, ಆನ್ಯಾಳ ಅಂಗನವಾಡಿ ಕಾರ್ಯಕರ್ತೆ ಸರೋಜಿನಿ ಇತರರು ಇದ್ದರು. ಅಜಿಲಯಾನೆ ನಲಿಕೆ ಸೇವಾ ಸಮಿತಿಯ ಕೋಶಾಧಿಕಾರಿ ಬಿ. ಕೃಷ್ಣಪ್ಪ ಸ್ವಾಗತಿಸಿ, ಸಿ. ಅರುಣ್ ವಂದಿಸಿದರು.