ಸಿದ್ದಾಪುರ, ಜು. 22: ನೆಲ್ಯಹುದಿಕೇರಿ ಕಸ ವಿಲೇವಾರಿ ಸಮಸ್ಯೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಹಾಗೂ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಹರೀಶ್ ಬೊಪಣ್ಣ ಅವರು ನೆಲ್ಯಹುದಿಕೇರಿ ಸಮೀಪದ ನಲ್ವತ್ತೇಕರೆ ಭಾಗಕ್ಕೆ ಭೇಟಿ ನೀಡಿದರು. ನಂತರ ಕಸ ವಿಲೇವಾರಿಗೆ ಜಾಗ ನೀಡಲು ಮುಂದಾಗಿರುವ ಸ್ಥಳೀಯ ಕಾಫಿ ಬೆಳೆಗಾರ ಕೊಂಗೇರ ಬೋಪಯ್ಯ ಅವರನ್ನು ಭೇಟಿ ಮಾಡಿ ಕಸ ವಿಲೇವಾರಿಗೆ ತಮ್ಮ ಜಾಗದಲ್ಲಿ ಸ್ಥಳಾವಕಾಶ ನೀಡುವಂತೆ ಮನವಿ ಮಾಡಿಕೊಂಡರು. ಇದೇ ಸಂದÀರ್ಭ ಪ್ರತಿಕ್ರಿಯಿಸಿದ ಕೊಂಗೇರ ಬೋಪಯ್ಯ ಅವರು ಅತ್ತಿಮಂಗಲದಿಂದ ನಲ್ವತ್ತೇಕರೆಗೆ ತೆರಳುವ ಸಾರ್ವಜನಿಕ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು ವಾಹನ ಸಂಚರಿಸಲು ಕೂಡ ಸಾದ್ಯವಾಗದಂತಹ ದುಸ್ಥಿತಿಯಲ್ಲಿದ್ದು, ಈ ಬಗ್ಗೆ ತಾನು ಕಳೆದ ಹಲವಾರು ವರ್ಷಗಳಿಂದ ಗ್ರಾಮ ಪಂಚಾಯಿತಿ ಹಾಗೂ ಜಿ.ಪಂ., ತಾ.ಪಂ. ಸದಸ್ಯರುಗಳ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಕೂಡ ಹೊಂಡಗಳಿಂದ ಕೂಡಿರುವ ರಸ್ತೆಯನ್ನು ದುರಸ್ಥಿಪಡಿ ಸದೆ ನಿರ್ಲಕ್ಷ್ಯತೆ ವಹಿಸಿರುತ್ತಾರೆ ಈ ಹಿನ್ನೆಲೆಯಲ್ಲಿ ಕೂಡಲೆ ಹದಗೆಟ್ಟ ರಸ್ತೆಯನ್ನು ಸಂಪೂರ್ಣ ಕಾಂಕ್ರೀಟ್ ರಸ್ತೆಯನ್ನಾಗಿ ಮಾಡಿ ಸಾರ್ವಜನಿಕರ ಸೇವೆಗೆ ಅನುಕೂಲ ಮಾಡಿಕೊಡು ವಂತೆ ಒತ್ತಾಯಿಸಿದರು. ಆಗಿದ್ದಲ್ಲಿ ತಾನು ತನ್ನ ಸ್ವಂತ ಜಾಗದಲ್ಲಿ 0.50 ಸೆಂಟ್ ಜಾಗವನ್ನು ನೆಲ್ಯಹುದಿಕೇರಿ ಗ್ರಾಮದ ಕಸವಿಲೇವಾರಿಗೆ ನೀಡುವದಾಗಿ ತಿಳಿಸಿದರು.

ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಜೋಜ, ನೆಲ್ಯಹುದಿಕೇರಿ ಹಾಗೂ ಸಿದ್ದಾಪುರ ವ್ಯಾಪ್ತಿಯಲ್ಲಿ ಕಸದ ಸಮಸ್ಯೆಯಿದ್ದು, ಈಗಾಗಲೇ ನೆಲ್ಯಹುದಿಕೇರಿಯಲ್ಲಿ ಪೈಸಾರಿ ಜಾಗವನ್ನು ಗುರುತಿಸಲಾಗಿದ್ದು, ಜನವಸತಿ ಪ್ರದೇಶದಲ್ಲಿ ಕಸವಿಲೇವಾರಿ ಸಾಧ್ಯವಿಲ್ಲ. ದಾನಿಗಳು ಜಾಗ ನೀಡಲು ಮುಂದಾಗಿದ್ದು, ಅವರು ಸಾರ್ವಜನಿಕರ ರಸ್ತೆ ಡಾಮರೀಕರಣಕ್ಕೆ ಒತ್ತಾಯಿಸಿದ್ದಾರೆ. ನಲ್ವತ್ತೇಕರೆ ರಸ್ತೆಯನ್ನು ಡಾಮರೀಕರಣಕ್ಕೆ ಯಾವ ಯೋಜನೆಯಲ್ಲಿ ಸೇರಿಸಬೇಕು ಎಂದು ಚರ್ಚಿಸುತ್ತೇವೆ ಎಂದರು.

ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಪೈಸಾರಿ ಜಾಗವನ್ನು ಗುರುತಿಸ ಲಾಗಿದ್ದು, ಆದಷ್ಟು ಬೇಗ ನೆಲ್ಯಹುದಿಕೇರಿ ಕಸದ ಸಮಸ್ಯೆಯನ್ನು ಇತ್ಯರ್ಥಗೊಳಿಸಲು ಪ್ರಯತ್ನಿಸಲಾಗು ವದು. ಕಸದ ಸಮಸ್ಯೆ ಪ್ರತಿಭಟನೆಯ ಹಂತಕ್ಕೆ ತಲುಪಿರುವದು ವಿಷಾದ ನೀಯ. ಉಸ್ತುವಾರಿ ಸಚಿವರು ಕೂಡ ಪೈಸಾರಿ ಜಾಗವನ್ನು ಗುರುತಿಸಲು ಸೂಚಿಸಿದ್ದು, ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಲಾಗುವದು ಎಂದರು.

ಇದೇ ಸಂದರ್ಭ ನೆಲ್ಯಹುದಿಕೇರಿಯ ನಲ್ವತ್ತೆಕರೆಗೆ ತೆರಳುವ ಹೊಂಡ ಗುಂಡಿಗಳಿಂದ ಕೂಡಿರುವ ದುಸ್ಥಿತಿಯ ರಸ್ತೆಯನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವೀಕ್ಷಿಸಿದರು.

ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುಕ್ಕಾಟಿರ ಶಿವು ಮಾದಪ್ಪ, ಜಿ.ಪಂ. ಸದಸ್ಯರಾದ ಸುನೀತಾ ಮಂಜುನಾಥ್, ಲತೀಫ್, ತಾ.ಪಂ. ಸದಸ್ಯೆ ಸುಹದಾ ಅಶ್ರಫ್, ಗ್ರಾ.ಪಂ. ಉಪಾಧ್ಯಕ್ಷೆ ಸಫಿಯಾ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೆಜಿತ್ ಕುಮಾರ್ ಗುಹ್ಯ, ಗ್ರಾ.ಪಂ. ಸದಸ್ಯರಾದ ಎ.ಕೆ ಹಕ್ಕೀಂ, ಹನೀಫ, ಮುಸ್ತಫ, ಬ್ರಿಜೆಟ್ ಲಿಲ್ಲಿ, ಕಾರ್ಮಿಕ ಮುಖಂಡ ಪಿ.ಆರ್ ಭರತ್ ಸೇರಿದಂತೆ ಗ್ರಾಮಸ್ಥರು ಇದ್ದರು.