ಸೋಮವಾರಪೇಟೆ, ಜು. 22: ಸದ್ಯದಲ್ಲೇ ಕೊಡವ ಭಾಷೆಯಲ್ಲಿ ‘ಬಾಕೆ ಮನೆ’ ಎಂಬ ಚಲನಚಿತ್ರ ತಯಾರಾಗಲಿದ್ದು ಜಿಲ್ಲೆಯ ಪ್ರತಿಭಾವಂತ ಕಲಾವಿದರ ಆಯ್ಕೆ ತಾ. 23 ರಂದು (ಇಂದು) ಗೋಣಿಕೊಪ್ಪಲಿನಲ್ಲಿ ನಡೆಯಲಿದೆ.

ಜಿಲ್ಲೆಯವರೇ ಆದ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ನಿರ್ಮಿಸುತ್ತಿರುವ, ಸ್ವಸ್ತಿಕ್ ಎಂಟರ್‍ಟೈನ್‍ಮೆಂಟ್ ಸಂಸ್ಥೆಯ ಸಾರಥ್ಯದಲ್ಲಿ ತಯಾರಾಗಲಿರುವ ಬಾಕೆ ಮನೆ ಕೊಡವ ಭಾಷಾ ಚಲನಚಿತ್ರವನ್ನು ಎಂ.ಡಿ. ಕೌಶಿಕ್ ನಿರ್ದೇಶಿಸುತ್ತಿದ್ದು, ಈ ಚಿತ್ರದ ಪಾತ್ರವರ್ಗಕ್ಕೆ ಜುಲೈ 23ರ ಭಾನುವಾರ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಗೋಣಿಕೊಪ್ಪಲುವಿನ ಮುಖ್ಯರಸ್ತೆಯ ಲ್ಲಿರುವ ಬೆಳ್ಳಿಯಪ್ಪ ಕಾಂಪ್ಲೆಕ್ಸ್‍ನಲ್ಲಿ ಕಲಾವಿದರ ಆಯ್ಕೆ ನಡೆಯಲಿದೆ.

ಆಸಕ್ತ ಕಲಾವಿದರು ತಮ್ಮ ಇತ್ತೀಚಿನ 6/4 ಅಳತೆಯ ಭಾವಚಿತ್ರ ದೊಂದಿಗೆ ಸಂದರ್ಶನಕ್ಕೆ ಹಾಜರಾ ಗಬಹುದು. ಹೆಚ್ಚಿನ ವಿವರಗಳಿಗೆ ಕೊಟ್ಟುಕತ್ತೀರ ಪ್ರಕಾಶ್ ಮೊ: 9845226709 ಮತ್ತು ಪವನ್-9844242917 ಸಂಖ್ಯೆಗಳನ್ನು ಸಂಪರ್ಕಿಸಬಹುದೆಂದು ಸಂಸ್ಥೆಯ ಕೋಆರ್ಡಿನೇಟರ್ ತೇಲಪಂಡ ಪವನ್ ತಮ್ಮಯ್ಯ ತಿಳಿಸಿದ್ದಾರೆ.