ಗೋಣಿಕೊಪ್ಪಲು,ಜು.24: ಇತ್ತೀಚೆಗೆ ಸುರಿದ ಭಾರೀ ಮಳೆಗೆ ಪೆರುಂಬಾಡಿ ಪುರಾತನ ಕೆರೆ ಏರಿ ಶಿಥಿಲಗೊಂಡು ಕೊಡಗು-ಕೇರಳ ಅಂತರಾಜ್ಯ ಹೆದ್ದಾರಿ ಸುಮಾರು 13 ಮೀಟರ್ ಅಗಲ ಕುಸಿತಗೊಂಡಿದ್ದು ಮುಂದಿನ 4-5 ದಿನಗಳಲ್ಲ 10 ದಿನಕ್ಕೂ ಸುಗಮ ಸಂಚಾರ ಕಷ್ಟ ಸಾಧ್ಯ ಎನ್ನಲಾಗಿದೆ. ಬೃಹದಾಕಾರವಾಗಿ ಬಿರುಕುಬಿಟ್ಟ ರಸ್ತೆಗೆ ಕಾಡುಕಲ್ಲುಗಳು, ಬಂಡೆಗಳನ್ನು ಹಾಕಿ ರಸ್ತೆ ಸಂಚಾರ ಸುಗಮಗೊಳಿಸುವ ಅಗತ್ಯವಿದ್ದು ಸುಮಾರು 130 ಲಾರಿಗಳಷ್ಟು ಕಲ್ಲುಗಳ ಅಗತ್ಯವಿದೆ ಎನ್ನಲಾಗುತ್ತಿದೆ. ಇಂದು ಸ್ಥಳಕ್ಕೆ ‘ಶಕ್ತಿ’ಪರವಾಗಿ ಭೇಟಿ ನೀಡಿದಾಗ ಇರಿಟ್ಟಿಯ ಸುಮಾರು 15 ಮಂದಿ ನುರಿತ ಕಾರ್ಮಿಕರು ಬಂಡೆಕಲ್ಲುಗಳ ಮೂಲಕ ರಸ್ತೆ ದುರಸ್ತಿ ಕಾಮಗಾರಿ ಕೈಗೊಂಡಿರುವದು ಕಂಡು ಬಂತು.ಕುಸಿತಗೊಂಡ ಅಂತರರಾಜ್ಯ ಹೆದ್ದಾರಿಯ ಅಗಲವೂ 13 ಮೀಟರ್ ಇದ್ದು ಈ ಭಾಗ ಅಧಿಕ ಓಡಾಟ ನಡೆಸುವ ಜನತೆಯ ಒತ್ತಾಯದ ಮೇರೆ ಸಮರೋಪಾದಿಯಲ್ಲಿ ಕೆಲಸ ನಡೆಯುತ್ತಿದೆ. ದಿನದ 24 ಗಂಟೆ ಅವಧಿಯಲ್ಲಿ ಕಣ್ಣಾನೂರು, ತಲಚೇರಿ, ಕೊಡಗು, ಮೈಸೂರು, ಬೆಂಗಳೂರು ಕಡೆಗೆ ಸುಮಾರು 200ಕ್ಕೂ ಅಧಿಕ ಕರ್ನಾಟಕ, ಕೇರಳ ರಾಜ್ಯ ರಸ್ತೆ ಸಾರಿಗೆ, ಖಾಸಗಿ ಸಾರಿಗೆ ಬಸ್, ಪ್ರವಾಸಿ ಬಸ್‍ಗಳು ಓಡಾಟ ನಡೆಸುತ್ತಿದ್ದು, ಸಾವಿರಾರು ಕಾರು, ಜೀಪು, ಲಾರಿ,ಅಟೋರಿಕ್ಷಾ, ಗೂಡ್ಸ್ ಆಟೋಗಳು, ದ್ವಿಚಕ್ರವಾಹನಗಳು ದಿನನಿತ್ಯ ಇದೇ ಪೆರುಂಬಾಡಿ ರಸ್ತೆಯನ್ನು ಅವಲಂಭಿಸಿದ್ದವು.

ಕೇರಳದ ಕೂತುಪರಂಬು, ತಲಚೇರಿ ಇತ್ಯಾದಿಕಡೆಗಳಿಂದ ಇದೇ ಮಾರ್ಗ ದಿನನಿತ್ಯ ಕೊಡಗು ಜಿಲ್ಲೆಗೆ ಸಮುದ್ರದ ಮೀನುಗಳು ಪ್ರತಿನಿತ್ಯ ಬರುತ್ತಿದ್ದು, ಇದೀಗ ಮೀನು ವರ್ತಕರು ಕುಟ್ಟ, ಮಾನಂದವಾಡಿ ಮಾರ್ಗ ತಲಚೇರಿ ರಸ್ತೆಯನ್ನು ಸುತ್ತುಹಾಕಿ ಬರಬೇಕಿದ್ದು ಸುಮಾರು 175 ಕಿ.ಮೀ. ಪ್ರಯಾಣಿಸಬೇಕಾಗಿದೆ. ಪೆರುಂಬಾಡಿ ರಸ್ತೆ ಮಾರ್ಗ 90 ಕಿ.ಮೀ.ಕಡಿಮೆ ದೂರದಿಂದ ಈವರೆಗೂ ಮೀನು ಸರಬರಾಜಾಗುತ್ತಿತ್ತು. ಈಗಿದ್ದೂ ಇಂದು ವೀರಾಜಪೇಟೆ ಕಡೆಗೆ ಮೀನು ವ್ಯಾಪಾರಿಗಳು ಕುಸಿತಗೊಂಡಿರುವ ಕೆರೆ ಏರಿಯ ಮೇಲಿನಿಂದ ದೊಡ್ಡ ದೊಡ್ಡ ಡ್ರಮ್‍ಗಳ ಮೂಲಕ

(ಮೊದಲ ಪುಟದಿಂದ) ಕೂಟುಹೊಳೆ ಹೊಳೆ ಮಾರ್ಗ ಬಂದು ಇತ್ತ ಅಪಾಯಕಾರಿಯಾಗಿ ಮೀನು ಸಾಗಿಸುತ್ತಿದ್ದುದು ಕಂಡುಬಂತು.

ಕೊಚ್ಚಿನ್ ಕಡೆಗೆ ಕಾಳುಮೆಣಸು, ಕಾಫಿ ಅಲ್ಲದೆ ಕೇರಳದ ಬಹುಭಾಗಕ್ಕೆ ಮೈಸೂರು ಮಲ್ಲಿಗೆ, ಚೆಂಡು ಹೂ, ತರಕಾರಿಗಳು ಇದೇ ಮಾರ್ಗ ಪ್ರತಿನಿತ್ಯ ಸಾಗಾಟವಾಗುತ್ತಿತ್ತು. ಮೀನು ಗೊಬ್ಬರ, ಸಿಮೆಂಟ್ ಒಳಗೊಂಡಂತೆ ಭಾರೀ ಸರಕು ಸಾಗಾಟ ವಾಹನಗಳು ಇದೇ ರಸ್ತೆಯನ್ನು ಬಹುತೇಕ ಅವಲಂಬಿಸಿದ್ದವು. ಮಹಾರಾಷ್ಟ್ರ, ಆಂಧ್ರ (ಅಕ್ಕಿ) ಇತ್ಯಾದಿ ರಾಜ್ಯಗಳ ಟನ್ ಗಟ್ಟಲೆ ಸಾಮಗ್ರಿಗಳಿಗೂ ಇದೇ ಅಂತರಾಜ್ಯ ಹೆದ್ದಾರಿ ರಹದಾರಿಯಾಗಿದೆ.

ವೀರಾಜಪೇಟೆಯಿಂದ ಹಲವಷ್ಟು ಪ್ರಯಾಣಿಕರು ಇರಿಟ್ಟಿ, ತಲಚೇರಿಗೆ ಇದೇ ಮಾರ್ಗ ಅವಲಂಭಿಸಿದ್ದು ಇದೀಗ ಕಾಲುನಡಿಗೆಯಲ್ಲಿ ಪೆರುಂಬಾಡಿ ಕೆರೆ ಏರಿ ಮಾರ್ಗ ರಸ್ತೆಯನ್ನು ದಾಟಿ ಸಿಕ್ಕ ಸಿಕ್ಕ ವಾಹನಗಳಲ್ಲಿ ಮಾಕುಟ್ಟದತ್ತ ಪ್ರಯಾಣಿಸುತ್ತಿದ್ದಾರೆ. ಕೆಲವು ಕೇರಳದ ಬಾಡಿಗೆ ಜೀಪುಗಳು ಪೆರುಂಬಾಡಿ ಕೆರೆಯ ಮಾಕುಟ್ಟ ಬದಿಯಲ್ಲಿ ಪ್ರಯಾಣಿಕರಿಗಾಗಿ ಕಾದು ನಿಲ್ಲುವದು ಸಾಮಾನ್ಯವಾಗಿದೆ. ಪೆರುಂಬಾಡಿಯಿಂದ ಮುಂದಕ್ಕೆ ಹನುಮಾನ್ ದೇವಾಲಯ

ವಿದ್ದು ವೀರಾಜಪೇಟೆಯ ಅರ್ಚಕರು ದಿನನಿತ್ಯ ತೆರಳಿ ಅಲ್ಲಿ ದೀಪ ಹಚ್ಚಿ ಬರುವದು ವಾಡಿ

ಕೆ. ಇದೀಗ ಕುಸಿತಗೊಂಡ ರಸ್ತೆಯನ್ನು ದಾಟಿ ಹನುಮಾನ್ ದೇವಾಲಯಕ್ಕೆ ದೀಪ ಹಚ್ಚಿ ಬಂದಿರುವದಾಗಿ ಅವರು ಮಾಹಿತಿ ನೀಡಿದ್ದಾರೆ. ಮಾಕುಟ್ಟ ಬೃಹ್ಮಗಿರಿ ವನ್ಯಜೀವಿ ವಲಯ ಹಾಗೂ ಮೀಸಲು ಅರಣ್ಯ ವಲಯದ ಬಹುತೇಕ ಅಧಿಕಾರಿಗಳು,ಸಿಬ್ಬಂದಿಗಳು ವೀರಾಜಪೇಟೆಯಿಂದ ಇದೇ ಮಾರ್ಗ ಅನುಸರಿಸುತ್ತಿದ್ದು ಇಂದು ಕಾಲ್ನಡಿಗೆಯಲ್ಲಿ ಪೆರುಂಬಾಡಿಯಿಂದ ಕುಸಿತಗೊಂಡಿದ್ದ ರಸ್ತೆಯನ್ನು ದಾಟುತ್ತಿದ್ದುದು ವಿಶೇಷವಾಗಿತ್ತು. ಮಾಕುಟ್ಟ ಗಡಿ ಕಾಯುವ ಪೆÇಲೀಸರಿಗೂ ಇದೀಗ ಪ್ರಯಾಸಕರ ಓಡಾಟ ಆರಂಭವಾಗಿದ್ದು, ಮುಂದಿನ 10-12 ದಿನಗಳಲ್ಲಿ ರಸ್ತೆ ಸಂಚಾರಕ್ಕೆ ಸುಗಮಗೊಳ್ಳುವ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಕೊಡಗು-ಕೇರಳ ಗಡಿಭಾಗದ ಕೂಟುಹೊಳೆ ಸೇತುವೆ 1928ರಲ್ಲಿ ನಿರ್ಮಾಣಗೊಂಡಿದ್ದು, ಇಲ್ಲಿನ ಪೆರುಂಬಾಡಿ ಕೆರೆಗೂ ಶತಮಾನಗಳ ಇತಿಹಾಸವಿದೆ. ಈ ಹಿಂದೆ ಎತ್ತಿನ ಗಾಡಿಗಳ ಮೂಲಕವೇ ಕೊಡಗಿನ ಉತ್ಪನ್ನಗಳು ಕೇರಳಕ್ಕೂ, ಕೇರಳದ ಉಪ್ಪು, ಮೀನು ಇತ್ಯಾದಿ ಕೊಡಗಿಗೂ ಇದೇ ಮಾರ್ಗ ಸಾಗಾಟವಾಗುತ್ತಿದ್ದವು. ವೀರಾಜಪೇಟೆ ತಾಲ್ಲೂಕು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಸುರೇಶ್ ಹಾಗೂ ಸಿಬ್ಬಂದಿ ವರ್ಗ ಸ್ಥಳದಲ್ಲಿಯೇ ಇದ್ದು ಕಾಮಗಾರಿ ಮೇಲ್ವೀಚಾರಣೆ ನಿರ್ವಹಿಸುತ್ತಿದ್ದು ಸುಮಾರು ರೂ.46 ಲಕ್ಷ ವೆಚ್ಚ ತಗಲಬಹುದು ಎನ್ನಲಾಗಿದೆ. ರಸ್ತೆ ಕುಸಿತ ಎಷ್ಟು ಭೀಕರವಾಗಿದೆ ಎಂದರೆ, ಈ ಹಿಂದೆ ಸುಮಾರು ರೂ.40 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ತಡೆಗೋಡೆಯ ತಳಭಾಗದ ಮಣ್ಣೂ ಕೊಚ್ಚಿಹೊಗಿದ್ದು, ಮಿನಿ ಜಲಪಾತ ಸೃಷ್ಟಿಯಾಗಿದೆ. ಕೆರೆಯ ನೀರು ಹರಿದುಹೋಗುತ್ತಿದ್ದು, ಸುಮಾರು 20 ವರ್ಷದಿಂದ ಸದರಿ ಕೆರೆಯಿಂದ ಕಾಟ್ಲಾ ಇತ್ಯಾದಿ ಮೀನುಗಳನ್ನು ಬಲೆ ಬೀಸಿ ಹಿಡಿದಿಲ್ಲವೆನ್ನಲಾಗಿದೆ. ಇದೀಗ ಕೆರೆಯ ನೀರು ಖಾಲಿಯಾಗುತ್ತಿದ್ದು ಬಹಳಷ್ಟು ಮೀನುಗಳೂ ಪ್ರವಾಹದ ಮೂಲಕ ಸಾಗಿಹೋಗಿರುವದಾಗಿ ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.

ಕೆರೆಯ ಏರಿಗೆ ಈ ಹಿಂದೆ ಕಲ್ಲುಗಳ ಮೂಲಕ ತಡೆಗೋಡೆ ನಿರ್ಮಾಣವಾಗಿದ್ದರೂ ಸುಮಾರು 4 ಮೀಟರ್ ಭೂಮಿ ಕುಸಿತಗೊಂಡಿದೆ. ಮುಂದಿನ 10-12 ದಿನಗಳಲ್ಲಿ ಉದ್ಧೇಶಿತ ರಸ್ತೆ ಲಘುವಾಹನ ಓಡಾಟಕ್ಕೆ ಅನುವು ಮಾಡಲು ಸಾಧ್ಯವಾಗಬಹುದು. ಭಾರೀ ವಾಹನ ಓಡಾಟಕ್ಕೆ ಇಬ್ಬದಿ ಮತ್ತಷ್ಟು ಕಾಂಕ್ರೀಟ್ ತಡೆಗೋಡೆಯನ್ನು ವಿಸ್ತರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಮತ್ತಷ್ಟು ಅನುದಾನದ ಅಗತ್ಯವೂ ಇದೆ ಎನ್ನಲಾಗಿದೆ. ಒಟ್ಟಿನಲ್ಲಿ ಬಹುಪಯೋಗಿ ಕೇರಳ ಅಂತರರಾಜ್ಯ ರಸ್ತೆ ಬೇಗನೆ ದುರಸ್ತಿಗೊಳ್ಳಲಿ ಎಂಬದೇ ಉದ್ಧೇಶಿತ ರಸ್ತೆಯನ್ನು ಅವಲಂಬಿಸಿರುವ ಬಹುತೇಕ ಸಾರ್ವಜನಿಕರ ಅಭಿಪ್ರಾಯ.

ಇದೀಗ ರಸ್ತೆ ಸಂಪರ್ಕ ಕಡಿತಗೊಂಡಿರುವ ಹಿನ್ನೆಲೆ ಕಣ್ಣಾನೂರು, ತಲಚೇರಿ, ಮಾನಂದವಾಡಿ ಮಾರ್ಗ ಕೊಡಗಿನ ಮೇಲೆ ಅಧಿಕ ವಾಹನಗಳು ಸಂಚಾರ ಆರಂಭಿಸಿವೆ. ಒಟ್ಟು ಕೆರೆಯ ಏರಿ ಸುಮಾರು 30 ಮೀಟರ್‍ಗೂ ಅಧಿಕ ಉದ್ದವಿದ್ದು ಮುಂದೆ ಶಾಶ್ವತ ತಡೆಗೋಡೆಯ ಅವಶ್ಯಕತೆ ಕಂಡು ಬಂದಿದೆ.