ಸೋಮವಾರಪೇಟೆ, ಜು.24: ಭಾರತೀಯ ಜನತಾ ಪಕ್ಷದ ವತಿಯಿಂದ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ವಿಸ್ತಾರಕ್ ಅಭಿಯಾನ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯಿತು.

ಮನೆ, ಅಂಗಡಿಗಳಿಗೆ ತೆರಳಿದ ವಿಸ್ತಾರಕ್ ಪಿ ಮಧು, ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ಸುಧಾರಣೆಗಳು ಹಾಗೂ ಜನರಿಗಾಗುತ್ತಿರುವ ಪ್ರಯೋಜನಗಳ ಬಗ್ಗೆ ಮನದಟ್ಟು ಮಾಡಿಕೊಟ್ಟರು. ಅಲ್ಲದೆ, ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ನೀಡಿರುವ ಕೊಡುಗೆಗಳ ಬಗ್ಗೆ ಮಾಹಿತಿ ನೀಡಿದರು.ಈ ಸಂದರ್ಭ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಮಾಚಯ್ಯ ಸೇರಿದಂತೆ , ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.

ವಾಲ್ನೂರು-ತ್ಯಾಗತ್ತೂರು

ಸಿದ್ದಾಪುರ: ಭಾರತೀಯ ಜನತಾ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ಪಂಡಿತ್ ದೀನ್ ದಯಾಳ್ ವಿಸ್ತಾರಕ್ ಯೋಜನೆ ವಾಲ್ನೂರು-ತ್ಯಾಗತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿ ಮತ್ತು ಚೆಟ್ಟಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯಿತು.

ಪಕ್ಷದಿಂದ ವಿಸ್ತಾರÀಕರಾಗಿ ನಿಯೋಜನೆಗೊಂಡಿರುವ ಗುಡ್ಡೆಮನೆ ಮಣಿಕುಮಾರ್, ಬಿ.ಕೆ. ಅನಿಲ್ ಶೆಟ್ಟಿ ವಾಲ್ನೂರು- ತ್ಯಾಗತ್ತೂರು, ಅಭ್ಯತ್‍ಮಂಗಲ, ಹಾಗೂ ಚೆಟ್ಟಳ್ಳಿಯಲ್ಲಿ ಸಭೆ ನಡೆಸಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಮತ್ತು ಸಾಧನೆಗಳನ್ನು ವಿವರಿಸಿದರು. ನಂತರ ಗ್ರಾಮದಲ್ಲಿರುವ ಪ್ರತೀ ಮನೆಗಳಿಗೆ ತೆರಳಿ ಕೇಂದ್ರ ಸರ್ಕಾರದ ಯೋಜನೆಗಳ ಬಿತ್ತಿ ಪತ್ರವನ್ನು ವಿತರಿಸಿದರು.

ಪ್ರಮುಖರಾದ ಎಂ.ಆರ್. ಮುತ್ತಪ್ಪ, ಹೆಚ್.ಎಸ್.ವಸಂತ್ ಕುಮಾರ್, ಸಿ.ಪಿ.ಜತ್ತ ವಿಜಯ, ಅಂಚೆಮನೆ ವಸಂತ್ ಕುಮಾರ್, ಕಂಠಿ ಕಾರ್ಯಪ್ಪ, ಮಿಥುನ್, ನಾರಾಯಣ್ ಹಾಗೂ ಇತರರು ಉಪಸ್ಥಿತರಿದ್ದರು.

ಸಿದ್ದಾಪುರ: ಚೆನ್ನಯ್ಯನಕೋಟೆ ಮಾಲ್ದಾರೆ ಭಾಗದಲ್ಲಿ ಬಿ.ಜೆ.ಪಿ. ವತಿಯಿಂದ ಹಮ್ಮಿಕೊಂಡಿರುವ ಪಂಡಿತ್ ದೀನ್ ದಯಾಳ್ ವಿಸ್ತಾರಕ್ ಯೋಜನೆಗೆ ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ವಿಜು ಸುಬ್ರಮಣಿ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಬಡವರ ಪರವಾದ ಕೆಲಸವನ್ನು ಮಾಡುತ್ತಿದ್ದಾರೆ. ಕೇಂದ್ರ ಸರಕಾರವು ಹಲವಾರಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅನುಕೂಲ ಮಾಡಿಕೊಟ್ಟಿದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳ ಬೇಕು ಎಂದರು. ಇದೇ ಸಂದರ್ಭ ಮಾಲ್ದಾರೆ ಭಾಗದ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದರು.

ಈ ಸಂದರ್ಭ ಚೆನ್ನಯ್ಯನಕೋಟೆ ಸ್ಥಾನೀಯ ಸಮಿತಿ ಅಧ್ಯಕ್ಷ ಕೆ.ಎಂ ರತೀಶ್, ಮಾಲ್ದಾರೆ ಗ್ರಾ.ಪಂ ಅಧ್ಯಕ್ಷೆ ರಾಣಿ, ಮಾಜಿ ತಾ.ಪಂ ಅಧ್ಯಕ್ಷ ದಿನೇಶ್, ಮುಖಂಡರಾದ ಅಪ್ಪು ಸುಬ್ರಮಣಿ, ಕುಟ್ಟಂಡ ದೀಪಕ್, ಎಂ.ಎನ್ ವಿಜು, ಸತೀಶ್, ಸುಗುಣ ನವೀನ್, ಅಜ್ಜಿನಿಕಂಡ ರಘು ಕರುಂಬಯ್ಯ ಸೇರಿದಂತೆ ಬಿ.ಜೆ.ಪಿ ಕಾರ್ಯಕರ್ತರು ಇದ್ದರು.

ಮಹದೇವಪೇಟೆ

ಮಡಿಕೇರಿ ನಗರದ ವಾರ್ಡ್ 2 ಮತ್ತು 3 ರಲ್ಲಿ ಬಿಜೆಪಿ ಪ್ರಮುಖರು ವಿಸ್ತಾರಕ್ ಅಭಿಯಾನ ನಡೆಸಿದರು. ಈ ವೇಳೆ ನಗರಸಭಾ ಸದಸ್ಯರುಗಳಾದ ಸವಿತಾ ರಾಖೇಶ್, ಲಕ್ಷ್ಮಿ, ಪಕ್ಷದ ಪ್ರಮುಖರಾದ ಶಾರದ ನಾಗರಾಜ್, ರಾಜೇಶ್, ರಾಖೇಶ್, ಸುಭಾಷ್, ಶಂಕರ್ ಮೊದಲಾದವರು ಪಾಲ್ಗೊಂಡು ಕೇಂದ್ರ ಸರಕಾರದ ಸಾಧನೆ ಬಗ್ಗೆ ಮನೆಮನೆಗೆ ಕರಪತ್ರ ಹಂಚಿದರು.

ಹಾರಂಗಿ: ಕೂಡುಮಂಗಳೂರು ಗ್ರಾ.ಪಂ ವ್ಯಾಪ್ತಿಯ ಹಾರಂಗಿ ಗ್ರಾಮದಲ್ಲಿ ಬಿ.ಜೆ.ಪಿ. ವಿಸ್ತಾರಕರು ಮನೆ ಮನೆ ಭೇಟಿ ಮಾಡುವದರ ಮೂಲಕ ಬಿ.ಜೆ.ಪಿ.ಯ ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ಜನಪರ ಕಾರ್ಯಕ್ರಮದ ಸೌಲಭ್ಯಗಳನ್ನು ಪಡೆಯುವದರ ವಿಚಾರವಾಗಿ ಈ ಭಾಗದ ವಿಸ್ತಾರಕ ತಾ.ಪಂ ಸದಸ್ಯರು, ಜಿ.ಪಂ. ಮಾಜಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ, ಬಿ.ಜೆ.ಪಿ. ಕಾರ್ಯಕರ್ತರೊಂದಿಗೆ ಈ ಭಾಗದ ಮನೆ ಮನೆ ತೆರಳಿ ಸಾಧನೆಯ ವಿಷಯಗಳನ್ನು ಸ್ಥಳೀಯರಿಗೆ ತಿಳಿಸುತ್ತಿದ್ದರು. ಇದರ ಜೊತೆಯಲ್ಲಿ ಬಿ.ಜೆ.ಪಿ. ಸದಸ್ಯತ್ವ ಅಭಿಯಾನದ ಕಾರ್ಯಕ್ರಮ ಹಮ್ಮಿಕೊಂಡು ಗ್ರಾಮಸ್ಥರುಗಳಿಗೆ ಅಭಿಯಾನದ ಅರ್ಜಿಯನ್ನು ನೀಡಿ ಸದಸ್ಯತ್ವ ನೋಂದಣಿ ಕಾರ್ಯನಿರ್ವಹಿಸಿದರು.

ಈ ಸಂದರ್ಭ ಜಿಲ್ಲಾ ಬಿ.ಜೆ.ಪಿ. ಘಟಕದ ಸದಸ್ಯ ಭರತ್, ಮಂಜುನಾಥ್, ತಾ.ಪಂ ಸದಸ್ಯ ಗಣೇಶ್, ತಾಲೂಕು ಬಿಜೆಪಿ ಎಸ್.ಸಿ. ಮೋರ್ಚಾದ ಕಾರ್ಯದರ್ಶಿ ಕುಮಾರಸ್ವಾಮಿ, ಕೂಡುಮಂಗಳೂರು ಸ್ಥಾನೀಯ ಸಮಿತಿಯ ಅಧ್ಯಕ್ಷ ಮಂಜುನಾಥ್ ಗುರುಲಿಂಗಪ್ಪ, ಉಪಾಧ್ಯಕ್ಷ ವೈ.ಸಿ. ಕೃಷ್ಣ, ಕೂಡುಮಂಗಳೂರು ಗ್ರಾ.ಪಂ. ಸದಸ್ಯ ಭಾಸ್ಕರ್ ನಾಯಕ್ ಸೇರಿದಂತೆ ಬಿ.ಜೆ.ಪಿ. ಕಾರ್ಯಕರ್ತರು ಇದ್ದರು.

ಸುಂಟಿಕೊಪ್ಪ : ಭಾರತೀಯ ಜನತಾ ಪಕ್ಷದ ವತಿಯಿಂದ ಕೇಂದ್ರ ಸರ್ಕಾರದ ಸಾಧನೆಯನ್ನು ತಿಳಿಸುವ ವಿಸ್ತಾರಕ ಅಭಿಯಾನವು ವಿಸ್ತಾರಕರಾದ ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಮತ್ತು ಕೂಡು ಮಂಗಳೂರು ಸ್ಥಾನೀಯ ಸಮಿತಿ ಅಧ್ಯಕ್ಷ ಮಂಜುನಾಥ ನೇತೃತ್ವದಲ್ಲಿ ಹಾರಂಗಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಹಾರಂಗಿಯ ಅಂಗಡಿ ಮತ್ತು ಮನೆ ಮನೆಗಳಿಗೆ ಬಿಜೆಪಿ ವಿಸ್ತಾರಕರು ಮತ್ತು ಸದಸ್ಯರು ತೆರಳಿ ಕೇಂದ್ರ ನರೇಂದ್ರ ಮೋದಿ ಸರ್ಕಾರವು ದಿಟ್ಟ ನಿಲುವಿನ ಆಡಳಿತ ವ್ಯವಸ್ಥೆಯಲ್ಲಿ ಜನಸಾಮಾನ್ಯರಿಗೆ ದೊರಕುತ್ತಿರುವ ವಿವಿಧ ರೀತಿಯ ಯೋಜನೆಗಳ ಬಗ್ಗೆ ಜನತೆಗೆ ಮನವರಿಕೆ ಮಾಡಿರದಲ್ಲದೆ ರಾಜ್ಯ ಸರ್ಕಾರವು 4ವರ್ಷ ಅವಧಿಯಲ್ಲಿ ಆಡಳಿತದ ವೈಫಲ್ಯವನ್ನು ಜನತೆಗೆ ತಿಳಿಸಿಕೊಟ್ಟರು. ಈ ಸಂದರ್ಭ ಕೂಡಿಗೆ ಗ್ರಾಮ ಪಂಚಾಯಿ ಸದಸ್ಯ ಭಾಸ್ಕರ ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

*ಗೋಣಿಕೊಪ್ಪಲು: ಪಂಡಿತ್ ದೀನ್‍ದಯಾಳ್ ಉಪಾಧ್ಯಾಯ ಜನ್ಮ ಶತಾಬ್ದಿ ಪ್ರಯುಕ್ತ ತಾಲೂಕು ಬಿ.ಜೆ.ಪಿ. ಘಟಕ ಹಾಗೂ ಸ್ಥಾನೀಯ ಸಮಿತಿಗಳಿಂದ ಮಹಾಸಂಪರ್ಕ ಅಭಿಯಾನ ಕಾರ್ಯಕ್ರಮವನ್ನು ನಡೆಸಲಾಯಿತು.

ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ ಅಭಿಯಾನದಲ್ಲಿ ಪಾಲ್ಗೊಂಡು ಜನರಲ್ಲಿ ಕೇಂದ್ರ ಸರಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮನದಟ್ಟು ಮಾಡಿದರು. ರಾಜ್ಯ ಕಾಂಗ್ರೆಸ್ ಸರಕಾರದ ವೈಫಲ್ಯತೆ ಬಗ್ಗೆ ತಿಳಿಸಿದರು. ಗೋಣಿಕೊಪ್ಪ, ಅರುವತ್ತೊಕ್ಲು, ತಿತಿಮತಿ, ಕೈಕೇರಿ ಭಾಗಗಳಲ್ಲಿ ಅಭಿಯಾನ ಕೈಗೊಳ್ಳಲಾಯಿತು. ಸ್ಥಾನೀಯ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು, ಗ್ರಾ.ಪಂ. ಅಧ್ಯಕ್ಷರು ಹಾಗೂ ಸದಸ್ಯರುಗಳು ಈ ಸಂದರ್ಭ ಜಿಲ್ಲಾ ವರ್ತಕ ಮೋರ್ಚಾದ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಚೇಂದಂಡ ಸುಮಿ ಸುಬ್ಬಯ್ಯ, ಅರುವತ್ತೊಕ್ಲು ಸ್ಥಾನೀಯ ಸಮಿತಿ ಅಧ್ಯಕ್ಷ ಸೋಮಣ್ಣ, ಕಾರ್ಯದರ್ಶಿ ವಿಕ್ರಮ್ ಹಾಜರಿದ್ದರು.

ಸುಂಟಿಕೊಪ್ಪ : ಬಿಜೆಪಿ ವತಿಯಿಂದ ವಿಸ್ತಾರಕ್ ಕಾರ್ಯಕ್ಕೆ ಹರದೂರು ಗ್ರಾಮ ಪಂಚಾಯಿತಿಯ ಅಂಜನಗೇರಿ ಬೆಟ್ಟಗೇರಿ ಬೂತ್ ವ್ಯಾಪ್ತಿಯಲ್ಲಿ ಕಂಬಿಬಾಣೆ ಗ್ರಾ.ಪಂ. ಮಾಜಿ ಅಧ್ಯಕ್ಷ ಡಾ.ಶಶಿಕಾಂತರೈ ಚಾಲನೆ ನೀಡಿದರು. ಅಂಜನಗೇರಿ ಬೆಟ್ಟಗೇರಿ ಬಿಜೆಪಿ ಬೂತ್ ಅಧ್ಯಕ್ಷ ತೇಜಸ್ ಕಾರ್ಯದರ್ಶಿ ಹೆಚ್.ಕೆ. ರವಿ, ಯುವಮೋರ್ಚಾ ಅಧ್ಯಕ್ಷ ವಿವೇಕ್ ಚಂದ್ರ, ಕಾಂiÀರ್iದರ್ಶಿ ಶಂಕರ, ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿ ಕುಸುಮಾವತಿ, ಕಾರ್ಯದರ್ಶಿಯಾಗಿ ರಾಜೇಶ್ವರಿ, ಆಂಜನಗೇರಿ ಬೆಟ್ಟಗೇರಿ ಬಿಜೆಪಿ ಅಧ್ಯಕ್ಷ ಸೋಮಣ್ಣ, ಕಾರ್ಯದರ್ಶಿ ಸುಂದರ, ಸೋಮವಾರಪೇಟೆ ನಗರ ಬಿಜೆಪಿ ಅಧ್ಯಕ್ಷ ಸೋಮೇಶ, ಮನೋಜ್, ಹಾಲಪ್ಪ ಗಂಗಾಧರ ಇದ್ದರು.