ಮಡಿಕೇರಿ, ಜು.24 : ಎಲ್ಲಾ ಸಮುದಾಯ ಬಾಂಧವರನ್ನು ಒಗ್ಗೂಡಿಸಿಕೊಂಡು ನಾಡಹಬ್ಬ ದಸರಾವನ್ನು ಜನೋತ್ಸವವನ್ನಾಗಿ ಅರ್ಥಪೂರ್ಣಗೊಳಿಸಬೇಕಾದ “ಮಡಿಕೇರಿ ದಸರಾ ಸಮಿತಿ” ಕಳೆÉದ ಕೆಲವು ವರ್ಷಗಳಿಂದ ಕೆಲವು ವ್ಯಕ್ತಿಗಳÀ ಜಮ್ಮಾ ಆಸ್ತಿಯಂತಾಗಿರುವದು ವಿಷಾದನೀಯವೆಂದು ಜಾತ್ಯತೀತ ಜನತಾ ದಳ ಪಕ್ಷದ ಜಿಲ್ಲಾ ವಕ್ತಾರ ಪಿ.ಎಸ್.ಭರತ್ ಟೀಕಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನ ದಸರಾ ಉತ್ಸವ ಆಚರಣೆಗೆ ಪೂರ್ವಭಾವಿ ಯಾಗಿ ದಶಮಂಟಪ, ಕರಗ ಸಮಿತಿ ಪದಾಧಿಕಾರಿಗಳು, ಸದಸ್ಯರು, ಎಲ್ಲಾ ಪಕ್ಷಗಳು, ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು, ಆಸಕ್ತ ಸಾರ್ವಜನಿಕರನ್ನು ಆಹ್ವಾನಿಸಿ ಸಭೆÉ ನಡೆಸಿ ದಸರಾ ಆಚರಣಾ ಸಮಿತಿಗೆ ಆಸಕ್ತರನ್ನು ಸೇರಿಸಿಕೊಳ್ಳ ಬೇಕೆಂದು ಒತ್ತಾಯಿಸಿದರು. ಈ ರೀತಿಯಾಗಿ ದಸರಾ ಆಚರಣೆಗೆ ಮುಂದಾಗದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿದರು.

ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷರಾಗಿರುವ ಕೆ.ಎಸ್.ದೇವಯ್ಯ ಅವರು ಈ ಹಿಂದೆ ದಸರಾ ಉತ್ಸವದ ಅಧ್ಯಕ್ಷರಾಗಿ ಅನುಭವವನ್ನು ಹೊಂದಿದ ಹಿರಿಯರಾಗಿದ್ದಾರೆ. ಇವರು ಸೇರಿದಂತೆ ಏರ್ ಮಾರ್ಷಲ್ ಕೆ.ಸಿ. ಕಾರ್ಯಪ್ಪ, ಹಿರಿಯ ಪತ್ರಿಕೋದ್ಯಮಿ ಜಿ. ರಾಜೇಂದ್ರ ಸೇರಿದಂತೆ ಹಲವು ಅನುಭವಿಗಳಿದ್ದು, ಅವರುಗಳ ಮಾರ್ಗದರ್ಶನ ಮತ್ತು ಮುಂದಾಳತ್ವದಲ್ಲಿ ದಸರಾ ಸಮಿತಿಯನ್ನು ರಚಿಸಿ ದಸರಾ ಜನೋತ್ಸವವನ್ನು ನಡೆಸುವಂತಾಗ ಬೇಕೆಂದು ಹೇಳಿದರು.

ದಸರಾ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿಗಳು ಸೇರಿದಂತೆ ಕೆಲವು ಸ್ಥಾನಗಳು ಕೆಲವೇ ಮಂದಿಗೆ ಸೀಮಿತವಾಗಿದ್ದು, ಇದನ್ನು ಜನರು ಗಮನಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ನಡೆದ ದಸರಾ ಸಮಿತಿ ಬೈಲಾ ತಿದ್ದುಪಡಿ ಸಭೆಯಲ್ಲಿ ನಡೆದ ಗದ್ದಲ ಮತ್ತು ಕೋಲಾಹಲಗಳು ಭಕ್ತಿಯಿಂದ ಅಥವಾ ಸಮಸ್ಯೆಗಳ ಪರಿಹಾರಕ್ಕಾಗಿ ಅಲ್ಲ, ಬದಲಾಗಿ ದಸರಾ ಸಮಿತಿ ಯಾವ ಪಕ್ಷದ ಹಿಡಿತಕ್ಕೆ ಬರಬೇಕು, ಸಮಿತಿಗೆ ಎಷ್ಟು ದುಡ್ಡು ಬರುತ್ತದೆ ಎನ್ನುವ ಕಾರಣಗಳಿಗಾಗಿ ಎಂದು ಭರತ್ ಆರೋಪಿಸಿದರು.

ದಸರಾವನ್ನು ಕೇಸರೀಕರಣ ಮಾಡುವ ಉದ್ದೇಶವಿದೆಯೇ ಎಂದು ಪ್ರಶ್ನಿಸಿದ ಪಿ.ಎಸ್.ಭರತ್, ದಸರಾ ಜನೋತ್ಸವವಾಗಿ ಜಾತ್ಯತೀತ ನೆಲೆಗಟ್ಟಿನಡಿ ನಡೆಯುತ್ತಾ ಬಂದಿದ್ದು, ಸಾಕಷ್ಟು ಮಂದಿ ಅಲ್ಪಸಂಖ್ಯಾತ ಪ್ರಮುಖರು ಉತ್ಸವದ ಯಶಸ್ಸಿಗಾಗಿ ಶ್ರಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದಸರಾ ಸಮಿತಿ ಸಭೆಗೆ ಮುಸ್ಲಿಂ ಸಂಘಟನೆ ಗಳನ್ನೂ ಕರೆಯುವಂತೆ ಒತ್ತಾಯಿಸಿದರು.

ಪಕ್ಷ ಭೇದವಿಲ್ಲದೆ ದಸರಾ ಉತ್ಸವಾಚರಣೆ ಸಾಧ್ಯವಾಗದಿದ್ದಲ್ಲಿ ಉತ್ಸವದ ಜವಾಬ್ದಾರಿಯನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆಗೆ ಬಿಟ್ಟುಕೊಡಲಿ ಎಂದು ಭರತ್ ಒತ್ತಾಯಿಸಿದರು.

ಮಡಿಕೇರಿ ನಗರಸಭಾ ಅಧ್ಯಕ್ಷ ಸ್ಥಾನದಲ್ಲಿರುವವರು ಸಭೆÉಯ ನಡುವಿನಿಂದ ಎದ್ದು ಓಡುವದಲ್ಲ. ಬದಲಾಗಿ ಜನರನ್ನು ತಮ್ಮ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸ ಬೇಕೆಂದು ಸಲಹೆ ನೀಡಿದರು.

ಜೆಡಿಎಸ್ ಮಡಿಕೇರಿ ಹೋಬಳಿ ಅಧ್ಯಕ್ಷ ಚೆರಿಯಮನೆ ಮಾದಪ್ಪ, ನಗರ ಜೆಡಿಎಸ್ ಕಾರ್ಯದರ್ಶಿ ಮೊಹಮ್ಮದ್ ಅಬ್ರಾರ್ ಹಾಗೂ ಮಹಿಳಾ ಘಟಕದ ಜಿಲ್ಲಾ ಉಪಾಧ್ಯಕ್ಷೆ ರಾಧಾ ಮಾರ್ವಿನ್ ಉಪಸ್ಥಿತರಿದ್ದರು.