ಪೊನ್ನಂಪೇಟೆ, ಜು. 24: ಯುವ ನಾಯಕರ ಮತ್ತು ಉದ್ಯಮ ಶೀಲರ ವಿಶ್ವವ್ಯಾಪ್ತಿ ಒಕ್ಕೂಟ ಭಾರತೀಯ ಜೇಸಿಸ್‍ನ ಅಂಗ ಸಂಸ್ಥೆಯಾದ ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ಘಟಕದ ವತಿಯಿಂದ ತಾ. 30 ರಂದು ಬಿಟ್ಟಂಗಾಲದಲ್ಲಿ 5ನೇ ವರ್ಷದ ‘ರಾಜ್ಯ ಮಟ್ಟದ ನಿಸರ್ಗ ಜೇಸಿ ಕೆಸರು ಗದ್ದೆ ಕ್ರೀಡಾಕೂಟ 2017 ನ್ನು ಆಯೋಜಿಸಲಾಗಿದೆ ಎಂದು ಪೊನ್ನಂಪೇಟೆ ನಿಸರ್ಗ ಜೇಸಿಸ್‍ನ ಅಧ್ಯಕ್ಷÀ ಎ.ಎಸ್. ಟಾಟು ಮೊಣ್ಣಪ್ಪ ತಿಳಿಸಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಗ್ರಾಮೀಣ ಕ್ರೀಡೆಗೆ ಉತ್ತೇಜನ ನೀಡುವ ಹಿನ್ನಲೆಯಲ್ಲಿ ಘಟಕದ ವತಿಯಿಂದ ಪ್ರತಿ ವರ್ಷ ಆಯೋಜಿಸಲಾಗುತ್ತಿರುವ ಕೆಸರು ಗದ್ದೆ ಕ್ರೀಡಾಕೂಟವನ್ನು ಈ ಬಾರಿಯೂ ವೀರಾಜಪೇಟೆ- ಗೋಣಿಕೊಪ್ಪಲು ಮುಖ್ಯ ರಸ್ತೆ ಬದಿಯಲ್ಲಿರುವ ನಿವೃತ್ತ ಮೇ. ಜ. ಕುಪ್ಪಂಡ ಸಿ.ನಂಜಪ್ಪ ಅವರ ಭತ್ತದ ಗದ್ದೆಯಲ್ಲಿ ಆಯೋಜಿಸಲಾಗಿದ್ದು, ಇದಕ್ಕಾಗಿ ಅಗತ್ಯವಿರುವ ಎಲ್ಲಾ ಸಿದ್ದತೆಗಳು ನಡೆಯುತ್ತಿದೆ ಎಂದು ಹೇಳಿದರು.

ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಸಬ್ ಜೂನಿಯರ್, ಜೂನಿಯರ್, ಸೀನಿಯರ್ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಓಟದ ಸ್ಪರ್ಧೆ ಆಯೋಜಿಸಲಾಗಿದ್ದು, ಇದು ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕವಾಗಿ ಜರುಗಲಿದೆ. ಅಲ್ಲದೆ ಮಹಿಳೆ ಮತ್ತು ಪುರುಷರಿಗಾಗಿ ಪ್ರತ್ಯೇಕ ಮುಕ್ತ ಓಟದ ಸ್ಪರ್ಧೆಯೂ ಈ ಕ್ರೀಡಾಕೂಟದಲ್ಲಿ ಏರ್ಪಡಿಸಲಾಗಿದೆ ಎಂದು ವಿವರಣೆ ನೀಡಿದ ಎ.ಎಸ್. ಟಾಟು ಮೊಣ್ಣಪ್ಪ ಫುಟ್ಬಾಲ್ ಮತ್ತು ಪುರುಷ- ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆ ಕೆಸರು ಗದ್ದೆ ಕ್ರೀಡಾಕೂಟದ ಆಕರ್ಷಣೆ ಎಂದು ಹೇಳಿದರು.

ತಾ.30 ರಂದು ಬೆಳಗ್ಗೆ 10 ಗಂಟೆಗೆ ಕೆಸರು ಗದ್ದೆ ಕ್ರೀಡಾಕೂಟ ವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಉದ್ಘಾಟಿಸ ಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಕೆ.ಜಿ. ಬೋಪಯ್ಯ, ಭಾರತೀಯ ಜೇಸಿಸ್‍ನ ವಲಯ 14ರ ಅಧ್ಯಕ್ಷ ಎಸ್. ಸಿದ್ದಲಿಂಗಪ್ಪ, ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮದ ಉಪಾಧ್ಯಕೆÀ್ಷ ಮಾಂಗೇರ ಪದ್ಮಿನಿ ಪೊನ್ನಪ್ಪ, ಮಾಜಿ ಶಾಸಕ ಸಿ.ಎಸ್. ಅರುಣ್ ಮಾಚಯ್ಯ, ಬಿಟ್ಟಂಗಾಲ ಗ್ರಾ.ಪಂ. ಅಧ್ಯಕ್ಷ ಪುಚ್ಚಿಮಂಡ ಸಾಬ ಬೆಳ್ಳಿಯಪ್ಪ, ನಿವೃತ್ತ ಸೇನಾದಿಕಾರಿ ಮೇ.ಜ. ಕುಪ್ಪಂಡ ಸಿ. ನಂಜಪ್ಪ, ಕೊಡವ ಮುಸ್ಲಿಂ ಅಸೋಸಿಯೇಷನ್‍ನ ಅಧ್ಯಕ್ಷ ದುದ್ದಿಯಂಡ ಹೆಚ್.ಸೂಫಿ, ಜಿ.ಪಂ. ಮಾಜಿ ಸದಸ್ಯ ಎಂ.ಎಸ್. ಕುಶಾಲಪ್ಪ ಮತ್ತು ಬೆಂಗಳೂರಿನ ಉದ್ಯಮಿ ಕಡೇಮಾಡ ಕನಸ್ಸು ದೇವಯ್ಯ ಪಾಲ್ಗೊಳ್ಳಲಿದ್ದಾರೆ ಎಂದರು.

ಸಂಜೆ 4 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಭಾರತೀಯ ಜೇಸಿಸ್‍ನ ವಲಯ 14ರ ಉಪಾಧ್ಯಕ್ಷ ವಿಕಾಸ್ ಗೂಗ್ಲಿಯಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿ ದ್ದಾರೆ. ಅಲ್ಲದೇ ತಾ.ಪಂ. ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಜಿ.ಪಂ. ಸದಸ್ಯೆ ಅಪ್ಪಡೇರಂಡ ಭವ್ಯ ಚಿಟ್ಟಿಯಣ್ಣ, ತಾ.ಪಂ. ಸದಸ್ಯ ಪಲ್ವೀನ್ ಪೂಣಚ್ಚ, ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ, ರುದ್ರಗುಪ್ಪೆ ವಿ.ಎಸ್.ಎಸ್. ಎನ್. ಅಧ್ಯಕ್ಷ ವಾಸು ಮುದ್ದಯ್ಯ, ಗೋಣಿಕೊಪ್ಪಲು ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಕೆ.ಟಿ. ಟಿಪ್ಪು ಬಿದ್ದಪ್ಪ, ತಾಲೂಕು ಅಕ್ರಮ -ಸಕ್ರಮ ಸಮಿತಿ ಸದಸ್ಯ ಕೊಲ್ಲೀರ ಬೋಪಣ್ಣ, ಕೊಡಗು ಪ್ರೆಸ್ ಕ್ಲಬ್ ಮಾಜಿ ಅದ್ಯಕ್ಷ ಎಂ.ಪಿ.ಕೇಶವ ಕಾಮತ್, ಕಾಂಗ್ರೆಸ್ ಮುಖಂಡ ಕೆ.ಎಂ.ಸರ ಚಂಗಪ್ಪ, ಬಾಡಗದ ಕಾಫಿ ಬೆಳೆಗಾರ ಕಂಜಿತಂಡ ಗಿಣಿ ಮೊಣ್ಣಪ್ಪ, ತಾಲೂಕು ಶರಣ ಸಾಹಿತ್ಯ ಪರಿಷತ್ ಅದ್ಯಕ್ಷ ಎಸ್.ಎಸ್. ಸುರೇಶ್ ಉದ್ಯಮಿಗಳಾದ ಕರ್ತಮಾಡ ದಿಲೀಪ್ ಪೂಣಚ್ಚ, ಅಚ್ಚಿಯಂಡ ಎಸ್. ಸುನಿಲ್, ದಾನಿಗಳಾದ ಚೊಟ್ಟೆಮಂಡ ಗಾಜು ದೇವಯ್ಯ ಮೊದಲಾದವರು ಪಾಲ್ಗೊಂಡು ವಿಜೇತರಿಗೆ ಬಹುಮಾನ ವಿತರಿಸಲಿ ದ್ದಾರೆ ಎಂದು ಮಾಹಿತಿ ನೀಡಿದರು.

ಕೆಸರು ಗದ್ದೆ ಪುಟ್ಬಾಲ್ ಪಂದ್ಯಾವಳಿಯಲ್ಲಿ ವಿಜೇತರಾಗುವ ವಿನ್ನರ್ಸ್ ತಂಡಕ್ಕೆ ರೂ.15 ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ, ರನ್ನರ್ಸ್ ತಂಡಕ್ಕೆ ರೂ. 10 ಸಾವಿರ ಮತ್ತು ಆಕರ್ಷಕ ಟ್ರೋಫಿಯನ್ನು ನೀಡಲಾಗುವದಲ್ಲದೆ, ಪುರುಷರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ರೂ. 15 ಸಾವಿರ ನಗದು ಬಹುಮಾನ ಮತ್ತು ಪಾರಿತೋಷಕ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ರೂ. 10 ಸಾವಿರ ಮತ್ತು ಪಾರಿತೋಷಕ ಸೇರಿದಂತೆ ವಿಜೇತ ತಂಡದ ಎಲ್ಲಾ ಸ್ಪರ್ಧಾಳುಗಳಿಗೆ ವೈಯಕ್ತಿಕ ಟ್ರೋಫಿ ನೀಡಲಾಗುವದು ಎಂದರು. ಮಹಿಳೆಯರ ವಿಭಾಗದ ಹಗ್ಗಜಗ್ಗಾಟ ಸ್ಪರ್ಧೆಗೆ ತಂಡಗಳ ನೋಂದಣಿಯ ಆಧಾರದಲ್ಲಿ ಬಹುಮಾನದ ಮೊತ್ತವನ್ನು ನಿರ್ಧರಿಸಲಾಗುವದು ಎಂದು ವಿವರಣೆ ನೀಡಿದ ಟಾಟು ಮೊಣ್ಣಪ್ಪ ಫುಟ್ಬಾಲ್ ಪಂದ್ಯಾವಳಿ ಯಲ್ಲಿ ತಂಡಕ್ಕೆ ತಲಾ 7 ಜನ ಆಟಗಾರರಿಗೆ ಮಾತ್ರ ಅವಕಾಶವಿದೆ. ಅಲ್ಲದೇ ಮೊದಲು ಹೆಸರು ನೋಂದಾಯಿಸಿಕೊಳ್ಳುವ 48 ತಂಡಗಳಿಗೆ ಮಾತ್ರ ಕ್ರೀಡಾಕೂಟದಲ್ಲಿ ಭಾಗವಹಿಸಬಹುದಾಗಿದೆ. ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಗರಿಷ್ಟ 9 ಸ್ಪರ್ಧಾಳುಗಳಿಗೆ ಮಾತ್ರ ಅವಕಾಶವಿದೆ. ಫುಟ್ಬಾಲ್ ಮತ್ತು ಹಗ್ಗಜಗ್ಗಾಟ ಸ್ಪರ್ಧೆಗಳಿಗೆ ಪಾಲ್ಗೊಳ್ಳುವ ತಂಡಗಳು ಹೆಸರನ್ನು ನೋಂದಾಯಿಸಿಕೊಳ್ಳುವಾಗಲೇ ತಮ್ಮ ತಂಡದ ಎಲ್ಲಾ ಆಟಗಾರರ ಹೆಸರನ್ನು ಕಡ್ಡಾಯವಾಗಿ ನೀಡಬೇಕು ಎಂದು ತಿಳಿಸಿದ್ದಾರೆ.

ಗೋಷ್ಠಿಯಲ್ಲಿ ಕ್ರೀಡಾಕೂಟದ ಯೋಜನಾ ನಿರ್ದೇಶಕ ಕುಪ್ಪಂಡ ದಿಲನ್ ಬೋಪಣ್ಣ, ಕಾರ್ಯದರ್ಶಿ ಹೆಚ್.ಆರ್. ಸತೀಶ್, ಘಟಕದ ಪೂರ್ವಾಧ್ಯಕ್ಷ ಮುಕ್ಕಾಟಿರ ಸಂದೀಪ್, ನಿಕಟಪೂರ್ವ ಅಧ್ಯಕ್ಷ ಬಿ.ಈ. ಕಿರಣ್ ಮತ್ತು ಕೋಶಾಧಿಕಾರಿ ಎಂ.ಆರ್. ವಿಕ್ರಮ್ ಉಪಸ್ಥಿತರಿದ್ದರು