ಮಡಿಕೇರಿ, ಜು. 23: ಇಲ್ಲಿನ ದೈವಜ್ಞ ಬ್ರಾಹ್ಮಣರ ಸಂಘದ ವತಿಯಿಂದ ಇಂದು ಬೆಳಿಗ್ಗೆ ಸ್ವಚ್ಛಭಾರತ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಮಡಿಕೇರಿಯ ಎ.ವಿ. ಶಾಲೆಯಿಂದ ಚೌಕ್ವರೆಗೆ ಸ್ವಚ್ಛ ಭಾರತದ ಅರಿವು ಮೂಡಿಸಲಾಯಿತು.ಜ್ಞಾನದೀಪ ದೈವಜ್ಞ ಮಹಿಳಾ ಸಂಘ ಮತ್ತು ಎ.ವಿ.ಶಾಲೆಯ ವಿದ್ಯಾರ್ಥಿಗಳು ಮತ್ತು ನಗರಸಭೆಯ ಸದಸ್ಯೆ ಸವಿತಾ ರಾಖೇಶ್ ಮತ್ತು ಸಂಘದ ಅಧ್ಯಕ್ಷ ಬಿ.ಎಂ. ರಾಜೇಶ್, ಕಾರ್ಯದರ್ಶಿ ಎಂ.ಡಿ. ರಾಜೇಶ್, ಮಹಿಳಾ ಸಂಘದ ಅಧ್ಯಕ್ಷೆ ಶುಭಾ ವಿಶ್ವನಾಥ್, ಕಾರ್ಯದರ್ಶಿ ಶ್ರುತಿ ವಿನಾಯಕ, ಕಟ್ಟಡ ಸಮಿತಿಯ ಅಧ್ಯಕ್ಷ ಬಿ.ಎಚ್. ಉಲ್ಲಾಸ್, ಕಾರ್ಯದರ್ಶಿ ಬಿ.ಎಂ. ಹರೀಶ್, ಲಯನ್ಸ್ ಕ್ಲಬ್ನ ಪ್ರಮುಖ ಕೆ. ಮಧುಕರ ಮೊದಲಾದವರು ಪಾಲ್ಗೊಂಡಿದ್ದರು.