ಮಡಿಕೇರಿ, ಜು. 23: ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ವತಿಯಿಂದ ಕುಂದಚೇರಿ ಪಂಚಾಯಿತಿ ವ್ಯಾಪ್ತಿಯ ಚೆಟ್ಟಿಮಾನಿ ಸಮುದಾಯ ಭವನದಲ್ಲಿ ಗ್ರಾಮ ಸಂವಾದ ಕಾರ್ಯಕ್ರಮ ನಡೆಯಿತು.

ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್. ರಮಾನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸದಸ್ಯ ಹ್ಯಾರೀಸ್ ಅವರು, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ, ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಗ್ರಾಮಸ್ಥರ ಕರ್ತವ್ಯ, ಜವಾಬ್ದಾರಿಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ವಿಚಾರ ಮಂಡಿಸಿದರು.

ಜಿಲ್ಲಾ ಸಹ ಸಂಯೋಜಕ ಬಾಲಚಂದ್ರ ನಾಯಕ್ ಗ್ರಾಮ ಸ್ವರಾಜ್ ಮತ್ತು ಸಂಘಟನೆಯ ಬಲವರ್ಧನೆಯ ಕುರಿತು ಮಾತನಾಡಿ ದರು. ಕಾರ್ಯಕ್ರಮದಲ್ಲಿ ವಲಯ ಸಮಿತಿಯನ್ನು ರಚಿಸಲಾಯಿತು.

ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಕೆದಂಬಾಡಿ ರಮೇಶ್, ವಲಯ ಕಾಂಗ್ರೆಸ್ ಮಹಿಳಾ ಅಧ್ಯಕ್ಷರಾಗಿ ಮುಕ್ಕಾಟಿ ನೇತ್ರಾವತಿ, ಪ್ರಧಾನ ಕಾರ್ಯದರ್ಶಿಗಳಾಗಿ ಕೆ.ಎಸ್. ಅಣ್ಣಯ್ಯ ಮತ್ತು ಹೆಚ್.ಎಂ. ನಮಿತಾ ಅವರನ್ನು ನೇಮಿಸಲಾಯಿತು. ಉಪಾಧ್ಯಕ್ಷರಾಗಿ ಪೊಡನೋಳನ ಪದ್ಮನಾಭ, ಕೆ.ಎಂ. ಇಸ್ಮಾಯಿಲ್, ಕೆ.ಹೆಚ್. ಯಮುನಾ, ಲಕ್ಷ್ಮಿ ಕಾನಕಂಡಿ, ಕಾರ್ಯದರ್ಶಿಯಾಗಿ ಕೆ.ಕೆ. ಬಷೀರ್, ನಂಗಾರು ಪಾರ್ವತಿ, ಸೆಟ್ಟೆಜನ ಗೋಪಾಲ, ಕೆ.ಬಿ. ಸಮೀರಾ ಆಯ್ಕೆಯಾದರು.

ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಜಿ.ಹೆಚ್. ತಮೀಮ್, ಪ್ರಧಾನ ಕಾರ್ಯದರ್ಶಿಯಾಗಿ ಸೆಟ್ಟಜನ ಬಿತಿನ್, ಉಪಾಧ್ಯಕ್ಷರಾಗಿ ಕೆ.ಕೆ. ಇಸಾಕ್, ಹಂಸ, ಅಬ್ದುಲಾ,್ಲ ಯು.ಪಿ. ಲೋಕೇಶ್ ಕಾನಕಂಡಿ, ಮಂಜುಳ, ಶೇಷು, ರಷೀದ್, ದಾವೂದ್, ಖಾಸಿಂ ಆಯ್ಕೆಯಾದರು.

ಈ ಸಂದರ್ಭ ಡಿಸಿಸಿ ಸದಸ್ಯರಾದ ಕೆ.ಜಿ. ರಘುನಾಥ್, ಕೆ.ಎಸ್. ಅಣ್ಣಯ್ಯ, ಕಕ್ಕಬೆ ಪಂಚಾಯಿತಿ ಅಧ್ಯಕ್ಷೆ ಕರ್ತಂಡ ಶೈಲ, ಕುಂದಚೇರಿ ಪಂಚಾಯಿತಿ ಉಪಾಧ್ಯಕೆÀ್ಷ ಸಿ.ಆರ್. ವೀಣಾ, ನಾಪೋಕ್ಲು ಪಂಚಾಯಿತಿ ಉಪಾಧ್ಯಕ್ಷ ಸಾಬಾ ತಿಮ್ಮಯ್ಯ, ಟಿ.ಎಂ. ಸಾದುಲಿ, ಕೆ.ಎಂ. ಇಸ್ಮಾಯಿಲ್, ಕೆದಂಬಾಡಿ ಸುರೇಂದ್ರ, ಸೆಟ್ಟಜನ ಚೆಟ್ಯಪ್ಪ, ಬಷೀರ್, ಕೆ.ಹೆಚ್. ಖಾದರ್, ಸಿ.ಎಸ್. ಗೋಪಾಲ, ನಂಗಾರು ಗೋಪಾಲ, ಪಿ.ಇ. ಬಷೀರ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.