ಶಾಲಾ ಮಕ್ಕಳನ್ನು ಬಸ್ಸಿಗೆ ಬಿಡಬೇಕೆಂದರೆ ಬೆಳಿಗ್ಗೆ 7 ಗಂಟೆಗೆ ಹೊರಟರೆ ಬಸ್ ಹತ್ತಿಸಿ ವಾಪಸ್ ಬರುವಾಗ ಗಂಟೆ 11 ಆಗಿರುತ್ತದೆ. ಮತ್ತೆ ಮಧ್ಯಾಹ್ನ 3 ಗಂಟೆಗೆ ಕರೆ ತರಲು ಹೋದರೆ ತಲಪುವಾಗ 6 ಗಂಟೆಯಾಗುತ್ತದೆ. ಅರ್ಧ ದಿನ ಇದಕ್ಕೆ ಬೇಕಾಗುತ್ತದೆ. ಕಾಡುದಾರಿ, ಆನೆ ಭಯದೊಂದಿಗೆ ಒಬ್ಬೊಬ್ಬರಾಗಿ ನಡೆದಾಡಲು ಭಯವಾಗುತ್ತದೆ ಎಂದು ಗ್ರಾಮದ ಮಹಿಳೆ ಪುಷ್ಪ ತಮ್ಮ ಸಂಕಷ್ಟ ಹೇಳಿಕೊಳ್ಳುತ್ತಾರೆ.