ಸುಂಟಿಕೊಪ್ಪ: ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಕೃಷಿಕರಿಗೆ ಸಿಲ್ವರ್ ಗಿಡಗಳನ್ನು ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ ವಿತರಿಸಿದರು. ಸರಕಾರದ ಅನುದಾನಕ್ಕೆ ಕೃಷಿ ಇಲಾಖೆಯಿಂದ ರೈತರಿಗೆ ಸಿಲ್ವರ್ ಗಿಡಗಳನ್ನು ನೀಡುತ್ತಿದ್ದು ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕೆಂದು ಅವರು ಹೇಳಿದರು. ತಾ.ಪಂ. ಸದಸ್ಯೆ ಓಡಿಯಪ್ಪನ ವಿಮಲಾವತಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್, ಗ್ರಾ.ಪಂ. ಉಪಾಧ್ಯಕ್ಷ ಪಿ.ಆರ್. ಸುಕುಮಾರ್, ಸದಸ್ಯರಾದ ಗಿರಿಜಾ ಉದಯಕುಮಾರ್ ಕೃಷಿಯಾಧಿಕಾರಿ ಪಿ.ಎಸ್. ಬೋಪಯ್ಯ ಮತ್ತಿತರರು ಇದ್ದರು.ಅರೆಕಾಡು: ಅರೆಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2017-18ನೇ ಸಾಲಿನಲ್ಲಿ ಸರಕಾರದಿಂದ ನೀಡಿರುವ ಅನುದಾನದಲ್ಲಿ 112 ವಿದ್ಯಾರ್ಥಿಗಳಿಗೆ ಶೂ-ಸಾಕ್ಸ್‍ಗಳನ್ನು ವಿತರಿಸಲಾಯಿತು. ಈ ಸಂದರ್ಭ ಎಸ್.ಡಿ.ಎಂ.ಸಿ. ಅಧ್ಯಕ್ಷ ಕೆ.ವೈ. ಹಂಸ, ಸದಸ್ಯ ಬಾಲಕೃಷ್ಣ ಸೇರಿದಂತೆ ಇತರ ಸದಸ್ಯರು, ಪೋಷಕರು, ಮುಖ್ಯ ಶಿಕ್ಷಕ ಬಿ.ಎಂ. ವಿಜಯ್ ಇದ್ದರು.ಸುಂಟಿಕೊಪ್ಪ: ಗರಗಂದೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸರಕಾರದಿಂದ ನೀಡಿದ ಅನುದಾನದಲ್ಲಿ ಶೂ-ಸಾಕ್ಸನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಕುಮುದಾ ಧರ್ಮಪ್ಪ, ಗ್ರಾಮ ಪಂಚಾಯಿತಿ ಸದಸ್ಯೆ ಶೈಲಜ, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಸುರೇಶ್, ಸದಸ್ಯರು, ಬಾಲ ಸ್ವಸ್ಥ ಆರೋಗ್ಯ ಕಾರ್ಯಕ್ರಮದ ಪ್ರಯುಕ್ತ ವೈದ್ಯಕೀಯ ತಪಾಸಣೆಗೆ ಆಗಮಿಸಿದ್ದ ಡಾ. ಮೇದಪ್ಪ, ಡಾ. ಭರತ್, ಶಿಕ್ಷಕ ವೃಂದ ಹಾಗೂ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪ್ರಾರ್ಥನೆಯನ್ನು 6ನೇ ತರಗತಿಯ ಅಕ್ಷಯ ಮತ್ತು ವೃಂದದವರು, ಸ್ವಾಗತವನ್ನು ಮುಖ್ಯ ಶಿಕ್ಷಕಿ ಪಾರ್ವತಿ, ಕಾರ್ಯಕ್ರಮದ ನಿರೂಪಣೆಯನ್ನು ಎಂ.ಜಿ. ನಳಿನಿ ಹಾಗೂ ವಂದನಾರ್ಪಣೆಯನ್ನು ಹೆಚ್.ಜಿ. ಮೋಹನ ಕುಮಾರಿ ನೆರವೇರಿಸಿದರು.ಕಾಕೂರು: ಕಾಕೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಟೈ, ಬೆಲ್ಟ್ ಹಾಗೂ ನೋಟ್ ಪುಸ್ತಕಗಳನ್ನು ಶಾಲೆಯ ಹಳೇ ವಿದ್ಯಾರ್ಥಿ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಚೋಕಿರ ಮೋಹನ್ ಅವರು ವಿದ್ಯಾರ್ಥಿಗಳಿಗೆ ರೂ. 5 ಸಾವಿರ ವೆಚ್ಚದಲ್ಲಿ ಟೈ, ಬೆಲ್ಟ್ ಹಾಗೂ ನೋಟ್ ಪುಸ್ತಕಗಳನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ಶ್ರೀಮಂಗಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಜಿತ್ ಪೂವಣ್ಣ, ಕೋಟ್ರಂಗಡ ವಿನೇಶ್, ತೀತಿರ ಸೂರಜ್, ಕುಟ್ಟ ಕ್ಲಸ್ಟರ್ ಸಿ.ಆರ್.ಪಿ. ವಿಶಾಲಾಕ್ಷಮ್ಮ, ಶಾಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.ಸುಂಟಿಕೊಪ್ಪ: ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿಕರಿಗೆ ರಿಯಾಯಿತಿ ದರದಲ್ಲಿ ಪ್ಲಾಸ್ಟಿಕ್ ಟಾರ್ಪಲನ್ನು ತಾಲೂಕು ಪಂಚಾಯಿತಿ ಸದಸ್ಯೆ ಓಡಿಯಪ್ಪನ ವಿಮಲಾವತಿ ವಿತರಿಸಿದರು. ಕೃಷಿಕರಾದ ಅಬ್ದುಲ್ ಸಲಾಂ, ಅಮೆಮನೆ ಅನುಕುಮಾರ್ ಕೃಷಿ ಅಧಿಕಾರಿ ಬೋಪಯ್ಯ ಸಿಬ್ಬಂದಿ ವರ್ಗ ಹಾಜರಿದ್ದರು.