ವೀರಾಜಪೇಟೆ, ಜು. 25 : ವೀರಾಜಪೇಟೆ ಬಳಿಯ ಬೂದಿಮಾಳದ ಪಾಲ್ಟಿಮಕ್ಕಿ ಎಂಬಲ್ಲಿ ಜಾನ್ ಡಿಸೋಜ ಅವರು ಜನಾಂಗದ ಬೆಂಬಲವಿದೆ ಎಂದು ತಮ್ಮ ವಾಸದ ಮನೆಯ ಪಕ್ಕದಲ್ಲಿ ಅಕ್ರಮವಾಗಿ ಚರ್ಚ್ ನಿರ್ಮಾಣಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಇಂದು ಚರ್ಚ್ ನಿರ್ಮಾಣವನ್ನು ತಕ್ಷಣ ತಡೆಯುವಂತೆ ತಾಲೂಕು ತಹಶೀಲ್ದಾರ್ ಅವರಿಗೆ ಗ್ರಾಮಸ್ಥರ ಪರವಾಗಿ ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಮನವಿ ಸಲ್ಲಿಸಿದರು.ತಹಶೀಲ್ದಾರ್‍ಗೆ ಮನವಿ ಸಲ್ಲಿಸಿದ ನಂತರ ಮನವಿಯ ಪ್ರತಿಯನ್ನು ಸಮುಚ್ಚಯ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‍ಪೆಕ್ಟರ್ ಎನ್. ಕುಮಾರ್ ಆರಾಧ್ಯ ಹಾಗೂ ಬೇಟೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ.ಬಿ. ಚೋಂದಮ್ಮ ಅವರಿಗೂ ಮಹೇಶ್ ಗಣಪತಿ ಸಲ್ಲಿಸಿದರು.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಬಿ.ಜೆ.ಪಿ.ಯ ಜಿಲ್ಲಾ ಸಮಿತಿ ಉಪಾಧ್ಯಕ್ಷ ಪಟ್ರಪಂಡ ರಘು ನಾಣಯ್ಯ,

ತಾಲೂಕು ಪಂಚಾಯಿತಿ ಸದಸ್ಯ ಬಿ.ಎಂ.ಗಣೇಶ್, ಬೇಟೋಳಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಹರೀಶ್, ಬೋಪಣ್ಣ, ಲೀಲಾವತಿ, ಉದಯ, ಕೆದಮುಳ್ಳೂರು ಗ್ರಾಮ ಪಂಚಾಯಿತಿಯ ಪರಮೇಶ್ವರ್, ಕಿರಣಗ ಕುಮಾರ್, ಮಾಜಿ ಸದಸ್ಯ ಚೋಟು ಬಿದ್ದಪ್ಪ, ಎಸ್.ಎಸ್.ಪ್ರಭಾಕರ್, ಪಿ.ರಾಮಚಂದ್ರ, ಸುದೀಶ್, ಮತ್ತಿತರ ಗ್ರಾಮಸ್ತರು ಹಾಜರಿದ್ದರು.

ಅಕ್ರಮ ಚರ್ಚ್ ನಿರ್ಮಾಣದ ಕಟ್ಟಡ ಕಾಮಗಾರಿ ಆರಂಭವಾಗಿದ್ದು ಕಟ್ಟಡ ಕಟ್ಟುವ ಸಾಮÁಗ್ರಿಗಳೆಲ್ಲ ಸ್ಥಳದಲ್ಲಿಯೇ ದಾಸ್ತಾನಾಗಿರುವದಾಗಿ ಗ್ರಾಮಸ್ತರು ಮಾಧ್ಯಮದವರಿಗೆ ತಿಳಿಸಿದರು.