ಸಿದ್ದಾಪುರ, ಜು. 26: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿದ್ದಾಪುರ ಶಾಖೆ ವತಿಯಿಂದ ಮಹಿಳೆಯರಿಗೆ ಜ್ಞಾನ ವಿಕಾಸ ವಿಚಾರಗೋಷ್ಠಿ ಸಿದ್ದಾಪುರದ ಎಸ್.ಎನ್.ಡಿ.ಪಿ. ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭ ಉನ್ನತ ಶಿಕ್ಷಣದಲ್ಲಿ ಪೋಷಕರ ಪಾತ್ರ ಎಂಬ ವಿಚಾರದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಕರಡಿಗೋಡು ಶಾಲೆಯ ಶಿಕ್ಷಕಿ ರುಕ್ಮಿಣಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿದ್ದಾಪುರ ಎ ಒಕ್ಕೂಟದ ಅಧ್ಯಕ್ಷೆ ಆಶಾಮಣಿ ವಹಿಸಿದ್ದರು. ಕಾರ್ಯಕ್ರಮವನ್ನು ಎಸ್.ಎನ್.ಡಿ.ಪಿ. ಯೂನಿಯನ್ ಅಧ್ಯಕ್ಷ ಕೆ.ಎನ್. ವಾಸು ಉದ್ಘಾಟಿಸಿದರು. ಈ ಸಂದರ್ಭ ಗ್ರಾ.ಪಂ. ಸದಸ್ಯರಾದ ಕರ್ಪಯ್ಯ, ಪ್ರೇಮ, ಗ್ರಾಮ ವಿಕಾಸ ಸಮನ್ವಯ ಅಧಿಕಾರಿ ಸ್ವಪ್ನ, ಮೇಲ್ವಿಚಾರಕ ಪ್ರದೀಪ್, ಸೇವಾ ಪ್ರತಿನಿಧಿ ಸೂದನ ಗೀತಾ ಸತೀಶ್ ಸೇರಿದಂತೆ ಇನ್ನಿತರರು ಇದ್ದರು.