ಗೋಣಿಕೊಪ್ಪಲ, ಜು. 26: ಚುನಾವಣಾ ಪೂರ್ವದಲ್ಲೇ ಉತ್ತಮ ಪ್ರಚಾರದ ಮೂಲಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಜನರ ಮುಂದಿಡಬೇಕೆಂದು ಕೆಪಿಸಿಸಿ ಕಾರ್ಯದರ್ಶಿ ಅರುಣ್ ಮಾಚಯ್ಯ ಕರೆ ನೀಡಿದರು.
ಕಾನೂರು ವಲಯ ಕಾಂಗ್ರೆಸ್ ವತಿಯಿಂದ ನಡೆದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಇವರು ಮಾತನಾಡಿದರು.
ರಾಜ್ಯ ಸರ್ಕಾರ ಎಲ್ಲಾ ವರ್ಗದವರಿಗೂ ವಿವಿದ ಕಾರ್ಯಕ್ರಮ ಹಮ್ಮಿಕೊಂಡಿದೆ. ಚುನಾªಣಾ ಸಮಯದಲ್ಲಿ ನೀಡಿದ ಪ್ರಣಾಳಿಕೆಯನ್ನು ಶೇ. 95 ರಷ್ಟು ಈಡೇರಿಸಿದೆ. ರಾಜಕೀಯವಾಗಿಯೂ ಪ್ರತಿಯೊಂದು ವರ್ಗಕ್ಕೂ ಸಮಾನ ಅವಕಾಶ ಕಲ್ಪಿಸಿರುವ ಒಂದೆ ಪಕ್ಷ ಕಾಂಗ್ರೆಸ್. ಮಹಿಳೆಯರಿಗೆ ಶೇ. 50 ರಷ್ಟು ಮೀಸಲಾತಿ ನೀಡಲಾಗುವುದು ಎಂದು ಹೇಳುವ ಬಿಜೆಪಿ ಪಕ್ಷ ಇಂದಿಗೂ ಅದನ್ನು ಅನುಷ್ಠಾನ ಗೊಳಿಸಿಲ್ಲ. ಬಾಯಿ ಮಾತಿನಲ್ಲಿ ಕಾಲಹರಣ ಮಾಡುತ್ತಿರುವ ಕೇಂದ್ರ ಸರ್ಕಾರ ಜನರ ಮೇಲೆ ಬರೆ ಎಳೆಯುತ್ತಿದೆ. ಕಪ್ಪು ಹಣ ಹೊರ ತರುತ್ತೇನೆ ಎಂದು ಹೇಳಿದ್ದ ಪ್ರದಾನಿ 3 ವರ್ಷ ಕಳೆದರೂ ಹಣ ತಂದಿಲ್ಲ ಎಂದು ದೂರಿದರು.
ರಾಜ್ಯ ಅರಣ್ಯ ಅಭಿವೃದ್ದಿ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಮಾತನಾಡಿ, ರಾಜ್ಯಸರ್ಕಾರ ಯಶಸ್ವಿ 4 ವರ್ಷ ಪೂರೈಸುವ ಮೂಲಕ ಮುನ್ನುಗುತ್ತಿದೆ.ಯಾವುದೇ ಅವ್ಯವಹಾರಗಳಲ್ಲಿ ಸಿಲುಕದೆ ಭ್ರಷ್ಟಚಾರ ಅವಕಾಶ ನೀಡದೆ ಜನರ ಸೇವೆ ಮಾಡುತ್ತಿದೆ. ಇಲಾಖೆಗಳು ಕೂಡ ಉತ್ತವಾಗಿ ಕಾರ್ಯ ನಿರ್ವಹಿಸುವ ಮೂಲಕ ಜನಸೇವೆ ಮಾಡುತ್ತಿದೆ. ಕೊಡಗಿನ ಅಭಿವೃದ್ದಿಗೆ ಕಳೆದ 3 ವರ್ಷಗಳಿಂದ ತಲಾ 50 ಕೋಟಿ ವಿಶೇಷ ಪ್ಯಾಕೇಜ್ ಬಿಡುಗಡೆ ಗೊಳಿಸುವ ಮೂಲಕ ಜಿಲ್ಲೆಯ ಅಭಿವೃದ್ದಿ ಮಾಡುತ್ತಿದೆ. ನಿಗಮದಿಂದ ಈಗಾಗಲೇ 13 ಪಂಚಾಯಿತಿಗಳಿಗೆ ಗ್ಯಾಸ್ ವಿತರಣೆ ಮಾಡಿದ್ದು ಮುಂದಿನ ದಿನದಲ್ಲಿ ಸೋಲಾರ್ ದೀಪಗಳನ್ನು ನೀಡಲಾಗುವದು ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸುಮಾರು 250 ಸೋಲಾರ್ ಲ್ಯಾಂಪ್ ನೀಡಲಾಗುತ್ತದೆ ಎಂದು ಘೋಷಿಸಿದರು.
ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಮಾತನಾಡಿ, ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿತ ಗೊಳಿಸುವ ನಿಟ್ಟಿನಲ್ಲಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಗಟ್ಟಿಗೊಳಿಸ ಬೇಕಾಗಿದೆ. ಕಾರ್ಯಕರ್ತರು ಒಂದಾಗಿ ಬೂತ್ ಮಟ್ಟದಲ್ಲಿ ಪಕ್ಷದ ಬೆಳವಣಿಗೆಗೆ ಸಹಕರಿಸಬೇಕು.
ಗೋಣಿಕೊಪ್ಪಲುವಿನಲ್ಲಿ ಶೌಚಲಯ ನಿರ್ಮಾಣಕ್ಕೆ ಸಂಬಂದಿಸಿದಂತೆ ಕಟ್ಟಡ ಕೆಡವಿದ್ದು ಇದು ಅನಧಿಕೃತ ಎಂದು ಬೆಂಗಳೂರು ವಿಧಾನಸೌದದಲ್ಲಿ ನಡೆದ ಅದಿವೇಶನದ ಶೂನ್ಯ ವೇಳೆ ಶಾಸಕ ಕೆ.ಜಿ ಬೋಪಯ್ಯ ಸಭೆಯಲ್ಲಿ ಹೇಳಿದ್ದರು ಅದರೆ ಇಂದು ಅವರೆ ಅಲ್ಲಿಗೆ ಆಗಮಿಸಿ ಭೂಮಿಪೂಜೆ ನೆರವೇರಿಸಿದ್ದಾರೆ ಇಂದು ಖಂಡನೀಯ ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೋಮಣ್ಣ ಹೇಳಿದರು.
ಈ ಸಂದರ್ಭ ಕಾನೂರು ವಲಯ ಕಾಂಗ್ರಸ್ ಅಧ್ಯಕ್ಷ ಕಾಡ್ಯಮಾಡ ಬೋಪಣ್ಣ, ಜಿ.ಪಂ ಸದಸ್ಯ ಬಾನಂಡ ಪೃಥ್ಯು, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಸರಾ ಚಂಗಪ್ಪ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಎ.ಜೆ ಬಾಬು, ಕಾಡ್ಯಮಾಡ ಚೇತನ್ ಪಾಲ್ಗೊಂಡಿದ್ದರು.