ಕುಶಾಲನಗರ, ಜು, 28: ಲಯನ್ಸ್ ಸಂಸ್ಥೆಯ ಸದಸ್ಯರು ಸ್ವಾರ್ಥ ರಹಿತವಾಗಿ ಸೇವಾ ಮನೋಭಾವನೆ ರೂಢಿಸಿ ಕೊಳ್ಳಬೇಕೆಂದು ಲಯನ್ಸ್ 317ಡಿ ಜಿಲ್ಲಾ ಸಹ ರಾಜ್ಯಪಾಲ ಕೆ.ದೇವದಾಸ್ ಭಂಡಾರಿ ಕರೆ ನೀಡಿದ್ದಾರೆ. ಅವರು ಕುಶಾಲನಗರ ಮತ್ತು ಸೋಮವಾರ ಪೇಟೆ ಲಯನ್ಸ್ ಕ್ಲಬ್‍ಗಳ 2017-18ನೇ ಸಾಲಿನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾ ರಂಭದಲ್ಲಿ ಅವರು ಮಾತನಾಡಿದರು.

ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಸ್ಥೆ ಹಲವಾರು ಕಾರ್ಯಯೋಜನೆಗಳನ್ನು ಹಮ್ಮಿಕೊಂಡಿದ್ದು ಇದೀಗ 2ನೇ ಶತಮಾನದತ್ತ ದಾಪುಗಾಲಿಡುತ್ತಿದೆ ಎಂದ ಅವರು, ಬಡಜನರ ಸಮಸ್ಯೆಗಳ ಬಗ್ಗೆ ಅರಿತು ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳುವಂತೆ ಮನವಿ ಮಾಡಿದರು.

ಸ್ಥಳೀಯ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ಸಮಾರಂಭ ದಲ್ಲಿ ಕುಶಾಲನಗರ ಲಯನ್ಸ್ ಅಧ್ಯಕ್ಷರಾಗಿ ಸಿ.ಆರ್.ನಾಗರಾಜ್ ಮತ್ತು ಸೋಮವಾರಪೇಟೆ ಅಧ್ಯಕ್ಷರಾಗಿ ಎ.ಎಸ್. ಮಹೇಶ್ ಅವರ ತಂಡಗಳಿಗೆ ಪ್ರಮಾಣ ವಚನ ಬೋಧಿಸಿದರು.

ಹಿಂದಿನ ಸಾಲಿನ ಅಧ್ಯಕ್ಷರಾದ ಎಂ.ವಿ. ಶಶಿಕುಮಾರ್ ಮತ್ತು ಎ.ಎಸ್. ಮಹೇಶ್ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಿತು.

ಉತ್ತಮ ಕಾರ್ಯಚಟುವಟಿಕೆ ಗಳಿಗಾಗಿ ಎರಡೂ ಸಂಸ್ಥೆಗಳ ಪದಾಧಿಕಾರಿಗಳಿಗೆ ಜಿಲ್ಲಾ ಸಂಸ್ಥೆಯ ಪರವಾಗಿ ಪ್ರಮಾಣಪತ್ರ ವಿತರಿಸ ಲಾಯಿತು. ನೂತನ ಸದಸ್ಯರುಗಳನ್ನು ಸೇರ್ಪಡೆಗೊಳಿಸಲಾಯಿತು.

ಈ ಸಂದರ್ಭ ಸಂಸ್ಥೆಯ ವಿವಿಧ ಘಟಕಗಳ ಪದಾಧಿಕಾರಿಗಳು, ವಲಯ ಅಧ್ಯಕ್ಷರಾದ ರತ್ನ ಚರ್ಮಣ್ಣ, ಅಚ್ಚಯ್ಯ, ಸೋಮಣ್ಣ, ವಿಭಾಗೀಯ ಪ್ರತಿನಿಧಿ ಅಯ್ಯಪ್ಪ, ಪೊನ್ನಚ್ಚನ ಮೋಹನ್, ಆನಂದ್ ಕರಂದ್ಲಾಜೆ, ಕವಿತಾ ಮೋಹನ್, ಶಿವಪ್ರಕಾಶ್, ಸ್ಥಳೀಯ ಕಾರ್ಯದರ್ಶಿಗಳಾದ ಡಾ. ಡಿ.ಎಸ್. ಪ್ರವೀಣ್, ಮಂಜುನಾಥ್ ಚೌಟ, ಹೆಚ್.ಎಂ. ಗಣೇಶ್, ಕೆ.ಎಂ. ಜಗದೀಶ್ ಮತ್ತಿತರರು ಇದ್ದರು.