ಮಡಿಕೇರಿ, ಜು. 28 : ಮಗುವಿಗೊಂದು ಗಿಡ, ಶಾಲೆಗೊಂದು ಮರ ಪರಿಕಲ್ಪನೆ ಮೂಡಿಸುತ್ತಾ ವಿದ್ಯಾರ್ಥಿಗಳು ಗಿಡವನ್ನು ನೆಟ್ಟು ಪೋಷಿಸಬೇಕು. ಮರಗಳನ್ನು ಕಡಿಯುವದರಿಂದ ಆಗುತ್ತಿರುವ ಬರ ಪರಿಸ್ಥಿತಿ, ಜೀವಿಗಳ ನಾಶದಿಂದ ಪ್ರಕೃತಿಯಲ್ಲಿ ಆಗುತ್ತಿರುವ ವೈಪರೀತ್ಯಗಳ ಬಗ್ಗೆ ನಿದರ್ಶನದೊಂದಿಗೆ, ಮರಗಳ ಸಂರಕ್ಷಣೆ ನಿಮ್ಮೆಲ್ಲರ ಆದ್ಯ ಗುರಿಯಾಗಬೇಕೆಂದು ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ವಿಜು ಸುಬ್ರಮಣಿ ಹೇಳಿದರು. ಅವರು ಬಿಳುಗುಂದ ಪ್ರೌಢಶಾಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ಏರ್ಪಡಿಸಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷ ಕೆ.ಎ. ಮುಸ್ತಫಾ ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾ.ಪಂ. ಅಧ್ಯಕ್ಷೆ ಸ್ಮಿತಾ ಪ್ರಕಾಶ್, ವಲಯ ಅರಣ್ಯಾಧಿಕಾರಿ ಗೋಪಾಲ, ವಲಯ ಉಪ ಅರಣ್ಯಾಧಿಕಾರಿ ದೇವಯ್ಯ, ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರು, ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಎಸ್.ಡಿ.ಎಂ.ಸಿ. ಸದಸ್ಯರು, ಪದನಿಮಿತ್ತ ಸದಸ್ಯರಾದ ಗೊಂಬೆ, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಕೆ.ಆರ್. ಬಿಂದು, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಬಿ.ಯು. ರಾಧ, ಗ್ರಾಮ ಪಂಚಾಯತ್ನ ಅಭಿವೃದ್ಧಿ ಅಧಿಕಾರಿ ಪ್ರಮೋದ್, ಉಭಯ ಶಾಲೆಗಳ ಶಿಕ್ಷಕವೃಂದ, ವಿದ್ಯಾರ್ಥಿಗಳು ಹಾಜರಿದ್ದರು.
ಮುಖ್ಯ ಶಿಕ್ಷಕಿ ಬಿಂದು ಸ್ವಾಗತಿಸಿ, ಸಹಶಿಕ್ಷಕ ಕಿರಣ್ ಕುಮಾರ್ ವಂದಿಸಿದರು. ಸಹ ಶಿಕ್ಷಕಿ ಸಾವಿತ್ರಿ ಎಚ್.ಜಿ. ನಿರೂಪಿಸಿದರು.