ಮಡಿಕೇರಿ, ಜು. 28: 26ನೇ ವರ್ಷದ ರಾಜ್ಯ ಮಟ್ಟದ ಕೆಸರು ಗದ್ದೆ ಕ್ರೀಡಾಕೂಟ ಮತ್ತು ವಿವಿಧ ಆಟೋಟ ಸ್ಪರ್ಧೆಗಳು ಆಗಸ್ಟ್ 12 ರಂದು ಕಗ್ಗೋಡ್ಲು ಗ್ರಾಮದ ದಿ. ಸಿ.ಡಿ. ಬೋಪಯ್ಯನವರ ಗದ್ದೆಯಲ್ಲಿ ನಡೆಯಲಿದೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಯೂತ್ ಹಾಸ್ಟೇಲ್ ಅಸೋಸಿಯೇಶನ್ ಆಫ್ ಇಂಡಿಯಾ, ಕೊಡಗು ಜಿಲ್ಲಾ ಯುವ ಒಕ್ಕೂಟ ಹಾಗೂ ಮಡಿಕೇರಿ, ವೀರಾಜಪೇಟೆ ಮತ್ತು ಸೋಮವಾರಪೇಟೆ ತಾಲೂಕು ಯುವ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ನಡೆಯುವ ಕ್ರೀಡಾಕೂಟದ ವಿವರ ಹೀಗಿದೆ.

ವಾಲಿಬಾಲ್ ಪುರುಷರ ವಿಭಾಗ (4 ಜನರ ತಂಡ), ಥ್ರೋಬಾಲ್ ಮಹಿಳೆಯರ ವಿಭಾಗ (5 ಜನರ ತಂಡ), ಹಗ್ಗ ಜಗ್ಗಾಟ ಪುರುಷರ ವಿಭಾಗ (9 ಜನರ ತಂಡ), ಹಗ್ಗ ಜಗ್ಗಾಟ ಮಹಿಳೆಯರ ವಿಭಾಗ (9 ಜನರ ತಂಡ), ಹಗ್ಗ ಜಗ್ಗಾಟ ಪ್ರೌಢಶಾಲಾ ಬಾಲಕರಿಗೆ (9 ಜನರ ತಂಡ), ಹಗ್ಗ ಜಗ್ಗಾಟ ಪ್ರೌಢಶಾಲಾ ಬಾಲಕಿಯರಿಗೆ (9 ಜನರ ತಂಡ).

ಮಧ್ಯಾಹ್ನ 1.30 ರಿಂದ ಕಿರಿಯ ಪ್ರಾಥಮಿಕ ಶಾಲಾ ಬಾಲಕರಿಗೆ 50 ಮೀ. ಓಟ, ಕಿರಿಯ ಪ್ರಾಥಮಿಕ ಶಾಲಾ ಬಾಲಕಿಯರಿಗೆ 50ಮೀ ಓಟ, ಹಿರಿಯ ಪ್ರಾಥಮಿಕ ಶಾಲಾ ಬಾಲಕರಿಗೆ 100 ಮೀ. ಓಟ, ಹಿರಿಯ ಪ್ರಾಥಮಿಕ ಶಾಲಾ ಬಾಲಕಿಯರಿಗೆ 100 ಮೀ. ಓಟ, ಪ್ರೌಢ ಶಾಲಾ ಬಾಲಕರಿಗೆ 200 ಮೀ. ಓಟ, ಪ್ರೌಢ ಶಾಲಾ ಬಾಲಕಿಯರಿಗೆ 200 ಮೀ. ಓಟ, ಪದವಿಪೂರ್ವ ಕಾಲೇಜು ಬಾಲಕರಿಗೆ 300 ಮೀ. ಓಟ, ಪದವಿಪೂರ್ವ ಕಾಲೇಜು ಬಾಲಕಿಯರಿಗೆ 300 ಮೀ. ಓಟ, ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ರಿಲೇ ಓಟ, ಸಾರ್ವಜನಿಕ ಪುರುಷರ ಮುಕ್ತ ಓಟ, ಸಾರ್ವಜನಿಕ ಮಹಿಳೆಯರ ಮುಕ್ತ ಓಟ, ಕಗ್ಗೋಡ್ಲು ಗ್ರಾಮಸ್ಥರಿಗೆ ಸಾಂಪ್ರದಾಯಿಕ ನಾಟಿ ಓಟ ನಡೆಯಲಿದೆ.

ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವದೆಂದು ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ನವೀನ್ ದೇರಳ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ವಾಲಿಬಾಲ್, ಥ್ರೋಬಾಲ್ ಮತ್ತು ಹಗ್ಗ ಜಗ್ಗಾಟ ತಂಡಗಳಿಗೆ ಮೈದಾನ ಶುಲ್ಕ ರೂ. 500 ಆಗಿದ್ದು, ಆಯಾ ತಂಡಗಳು ಆ. 10 ರ ಅಪರಾಹ್ನ 2 ಗಂಟೆಯ ಒಳಗಾಗಿ ಪಾವತಿಸಿ ತಂಡದ ಭಾಗವಹಿಸುವಿಕೆಯನ್ನು ಖಾತರಿಪಡಿಸಿಕೊಳ್ಳಬೇಕು.

ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸುವ ಕ್ರೀಡಾ ತಂಡಗಳಿಗೆÀ ಆಕರ್ಷಕ ಪಾರಿತೋಷಕ ಮತ್ತು ನಗದು ಬಹುಮಾನವನ್ನು ನೀಡಲಾಗುವದು. ಪ್ರೌಢಶಾಲಾ ವಿಭಾಗದ ಹಗ್ಗಜಗ್ಗಾಟದಲ್ಲಿ ಭಾಗವಹಿಸುವವರು ತಮ್ಮ ವಿದ್ಯಾ ಸಂಸ್ಥೆಯ ಮುಖ್ಯಸ್ಥರಿಂದ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ತರಬೇಕೆಂದು ನವೀನ್ ದೇರಳ ತಿಳಿಸಿದ್ದಾರೆ.

ಓಟದ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಪಾರಿತೋಷಕಗಳನ್ನು ಮತ್ತು ಪ್ರಶಂಸನಾ ಪತ್ರವನ್ನು ನೀಡಲಾಗುವದು. ಕ್ರೀಡಾಕೂಟ ಮತ್ತು ವಿವಿಧ ಆಟೋಟ ಸ್ಪರ್ಧೆಗಳು ಬೆಳಿಗ್ಗೆ 9 ಗಂಟೆಗೆ ಉದ್ಘಾಟನಾ ಸಮಾರಂಭದ ನಂತರ ಆರಂಭಗೊ¼್ಳÀಲಿದೆ. ಹೆಚ್ಚಿನ ವಿವರಗಳಿಗೆ 9449952008, 9740404520ನ್ನು ಸಂಪರ್ಕಿಸಬಹುದಾಗಿದೆ.