ಗೋಣಿಕೊಪ್ಪಲು, ಜು. 28: ಕಾವೇರಿ ಪದವಿ ಕಾಲೇಜು ಮತ್ತು ಕಾವೇರಿ ಹಳೇ ವಿದ್ಯಾರ್ಥಿಗಳ ಸಂಘದ, ಸಂಯುಕ್ತ ಆಶ್ರಯದಲ್ಲಿ ಇಂದು ಕೊಡಗು ಜಿಲ್ಲಾ ಅಂತರ ಕಾಲೇಜು ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಅತ್ಯಧಿಕ ಅಂಕಗಳೊಂದಿಗೆ ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ತಂಡ ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದೆ. ದ್ವಿತೀಯ ಸಮಗ್ರ ಚಾಂಪಿಯನ್ ಶಿಪ್ ಅನ್ನು ಗೋಣಿಕೊಪ್ಪಲು ವಿದ್ಯಾನಿಕೇತನ ಪಿ.ಯು. ಕಾಲೇಜು ತಂಡ ಗೆದ್ದುಕೊಂಡಿದೆ.
ಪುಚ್ಚಿಮಾಡ ದಿ. ತಿಮ್ಮಯ್ಯ, ದಿ. ಚೋಂದಮ್ಮ ಹಾಗೂ ದಿ.ಮೀನಾ ಸುಬ್ಬಯ್ಯ ಜ್ಞಾಪಕಾರ್ಥ ದ್ವಿತೀಯ ವರ್ಷದ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ ಕನ್ನಡ ವಿಭಾಗದಲ್ಲಿ ‘ಪ್ರಸ್ತುತ ಶಿಕ್ಷಣ ಪದ್ಧತಿ ಉದ್ಯೋಗ ಕೇಂದ್ರೀಕೃತವೇ?’ ಎಂಬ ವಿಷಯದಲ್ಲಿ ಮಡಿಕೇರಿ ಎಫ್‍ಎಂಸಿ ಕಾಲೇಜು ಅಂತಿಮ ಬಿಕಾಂ ವಿದ್ಯಾರ್ಥಿನಿ ವರ್ಷಾ ಟಿ.ಆರ್. ಪ್ರಥಮ ಹಾಗೂ ಕುಶಾಲನಗರ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿ ಶಿಲ್ಪಶ್ರೀ ಕೆ.ಎಸ್. ದ್ವಿತೀಯ ಬಹುಮಾನ ಗೆದ್ದುಕೊಂಡರು.
‘ದಿ ರೋಲ್ ಆಫ್ ಯೂತ್ ಇನ್ ನೇಷನ್ ಬಿಲ್ಡಿಂಗ್’ ವಿಷಯದ ಆಂಗ್ಲ ಭಾಷಣ ಸ್ಪರ್ಧೆಯಲ್ಲಿ ಗೋಣಿಕೊಪ್ಪಲು ವಿದ್ಯಾನಿಕೇತನ ಪ.ಪೂ.ಕಾಲೇಜು ವಿದ್ಯಾರ್ಥಿನಿ ಎಲಿಜಾ ಸ್ಯಾಂಡೆಸ್ ಪ್ರಥಮ ಹಾಗೂ ವೀರಾಜಪೇಟೆ ಸಂತ ಅನ್ನಮ್ಮ ಪದವಿ ಕಾಲೇಜಿನ ರಿಯಾ ಪಿ. ದ್ವಿತೀಯ ಬಹುಮಾನ ಗೆದ್ದುಕೊಂಡರು.
ಕೊಡಗಿನಲ್ಲಿಯೇ ಬದುಕು ರೂಪಿಸಿಕೊಳ್ಳಿ
ವಿದ್ಯಾರ್ಥಿಗಳಿಗೆ ಪೆÇೀಷಕರು ಸಂಸ್ಕಾರ ಕಲಿಸಬೇಕು. ಕೊಡಗು ಜಿಲ್ಲೆಯಲ್ಲಿ ಕೃಷಿ ಪದ್ಧತಿಯಲ್ಲಿಯೇ ಸಾಧನೆ ಮಾಡಿ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ. ರಾಜ್ಯ ಕೃಷಿ ಪ್ರಶಸ್ತಿ ವಿಜೇತ ಸುಜುಕರುಂಬಯ್ಯ ಕೊಡಗಿನಲ್ಲಿಯೇ ಕೃಷಿಯಲ್ಲಿ ಯಶಸ್ವಿಯಾಗಿದ್ದಾರೆ. ಪಾಶ್ಚಾತ್ಯ ಶೈಲಿ ಅನುಕರಣೆ ನಮಗೆ ಬೇಡ. ಸುಸಂಸ್ಕೃತ ಬದುಕಿನೊಂದಿಗೆ ಇಲ್ಲಿಯೇ ಸಾಧನೆ ಮಾಡಲು ಅವಕಾಶವಿದೆ ಎಂದು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿಪೆÇನ್ನಪ್ಪ ನುಡಿದರು.
ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಜರುಗಿದ ಭಾಷಣ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಕೃಷಿಕ ಪ್ರಶಸ್ತಿ ವಿಜೇತ ಸುಜುಕರುಂಬಯ್ಯ ಅವರು ಸನ್ಮಾನ ಸ್ವೀಕರಿಸಿ, ಕೇವಲ ಡಾಕ್ಟರ್-ಇಂಜಿನಿಯರ್ ಆಗುವದೇ ಜೀವನದ ಮುಖ್ಯ ಧ್ಯೇಯವಲ್ಲ. ವ್ಯವಸಾಯದ ಮಹತ್ವವನ್ನು ಅರಿತುಕೊಂಡರೆ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಿ, ಸ್ವಾವಲಂಬನೆ ಜೀವನ ಸಾಗಿಸಬಹುದು. ರಾಜ್ಯದ 7 ಜಿಲ್ಲೆಗಳಲ್ಲಿ ಮಾತ್ರಾ ಯಾಂತ್ರೀಕೃತ ಬೇಸಾಯ ಪದ್ಧತಿ ಈ ಬಾರಿ ಶೇ.1 ರಷ್ಟು ಗುರಿ ಸಾಧನೆ ಆಗಿದೆ. ಆದರೆ, ಕೊಡಗು ಜಿಲ್ಲೆಯಲ್ಲಿ ‘ನಾಡ ಮಣ್ಣ್ ನಾಡ ಕೂಳ್’ ಮೂಲಕ ಶೇ. 10 ರಷ್ಟು ಯಾಂತ್ರಿಕ ವ್ಯವಸಾಯ ಪದ್ಧತಿ ಅಳವಡಿಕೆಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರವು ರಾಜ್ಯಾದ್ಯಂತ ಎಲ್ಲಾ ರೈತರೂ ಯಾಂತ್ರಿಕ ವ್ಯವಸಾಯ ಪದ್ಧತಿ ಅಳವಡಿಸಿಕೊಳ್ಳಲು ಯೋಜನೆ ರೂಪಿಸಬೇಕು ಎಂದು ಹೇಳಿದರು.
ಕಾವೇರಿ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ.ಎ.ಸಿ.ಗಣಪತಿ ಮಾತನಾಡಿ, ವಿದ್ಯಾಪದ್ಧತಿ ಹಾಗೂ ಕಲಿಕೆಗೆ ವ್ಯತ್ಯಾಸವಿದ್ದು ಜೀವನದಲ್ಲಿ ಉದ್ಯೋಗ ಸೃಷ್ಟಿ ಅಥವಾ ಸಾಧನೆಗೆ ಕಲಿಕೆಯೇ ಮುಖ್ಯ. ಕೇವಲ ವೃತ್ತ ಪತ್ರಿಕೆಯನ್ನು ಓದಿದರೆ ಸಾಲದು. ಅದರಲ್ಲಿರುವ ಮಹತ್ವವನ್ನು ಮನವರಿಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಪ್ರಾಂಶುಪಾಲ ಪಿ.ಎ.ಪೂವಣ್ಣ ಅವರು ಬಹುಮಾನ ವಿಜೇತರಿಗೆ ಶುಭಹಾರೈಸಿದರು. ತೀರ್ಪುಗಾರರ ಪರವಾಗಿ ಪಕ್ಷಿತಜ್ಞ ಡಾ. ನರಸಿಂಹನ್ ಮಾತನಾಡಿದರು. ತೀರ್ಪುಗಾರರಾಗಿ ಬಲ್ಯಪಂಡ ಮಾದಪ್ಪ ಹಾಗೂ ಕಾಂಡೇರ ಸೋಮೇಶ್ ಕಾರ್ಯನಿರ್ವಹಿಸಿದರು.
ಜಿಲ್ಲೆಯ ಒಟ್ಟು 20 ಕಾಲೇಜುಗಳಿಂದ 40 ಸ್ಪರ್ಧಿಗಳು ಭಾಗವಹಿಸಿದ್ದು, ಕುಶಾಲನಗರ, ಮಡಿಕೇರಿ, ಮೂರ್ನಾಡು, ವೀರಾಜಪೇಟೆ, ಗೋಣಿಕೊಪ್ಪಲು, ಪೆÇನ್ನಂಪೇಟೆ ಇತ್ಯಾದಿ ಕಾಲೇಜು ಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಕಾವೇರಿ ಹಳೇ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ವಾಣಿ ಚಂಗಪ್ಪ ಭಾಷಣ ಸ್ಪರ್ಧೆಯನ್ನು ಉದ್ಘಾಟಿಸಿ ದರು. ಗೋಣಿಕೊಪ್ಪಲು ಉದ್ಯಮಿ, ಹಳೇ ವಿದ್ಯಾರ್ಥಿ ಸಂಘದ ಮಾಜಿ ಉಪಾಧ್ಯಕ್ಷ ಅಜಿತ್ ಅಯ್ಯಪ್ಪ ಹಾಗೂ ಯಶಸ್ವಿ ಕೃಷಿಕ ಲಾಲಾ ಪೂಣಚ್ಚ ಅವರನ್ನು ಸನ್ಮಾನಿಸ ಲಾಯಿತು. ವೇದಿಕೆಯಲ್ಲಿ ಇಂದಿನ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯ ಪ್ರಾಯೋಜಕ ಪುಚ್ಚಿಮಾಡ ಸುಭಾಶ್, ಕಾರ್ಯಕ್ರಮ ಸಂಯೋಜಕಿ ಚಿತ್ರಾವತಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಚೆಕ್ಕೇರ ಮನು, ಅನೀಶ್ ಮಾದಪ್ಪ, ಕೊಂಗಂಡ ಜಪ್ಪುಸುಬ್ಬಯ್ಯ, ಪಿ.ಬಿ.ನಟೇಶ್, ರಜನಿ, ರಜನಿ ಅಯ್ಯಪ್ಪ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮ ನಿರೂಪಣೆಯನ್ನು ನಯನಾ, ಕೃತಿಕಾ, ಎ.ಎನ್.ಪೆÇನ್ನಪ್ಪ, ರೀತಾ ನಿರ್ವಹಿಸಿದರು.
- ವರದಿ: ಟಿ.ಎಲ್.ಶ್ರೀನಿವಾಸ್