ಮಡಿಕೇರಿ, ಜು. 27: ಮಾಜಿ ಮುಖ್ಯಮಂತ್ರಿ ಎನ್. ಧರಂಸಿಂಗ್ (80) ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ವಿಧಿವಶರಾಗಿ ದ್ದಾರೆ. ಇಂದು ಬೆಳಿಗ್ಗೆ ಧರಂಸಿಂಗ್ ಅವರಿಗೆ ಎದೆನೋವು ಕಾಣಿಸಿ ಕೊಂಡಿತ್ತು, ಕೂಡಲೇ ಅವರನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. 2004 ರಿಂದ 2006 ರವರೆಗೆ ಧರಂಸಿಂಗ್ ಮುಖ್ಯಮಂತ್ರಿಯಾಗಿ ದ್ದರು. 1936ರ ಡಿಸೆಂಬರ್ 25 ರಂದು ಕಲಬುರಗಿಯ ಜೇವರ್ಗಿಯ ನೆಲೋಗಿ ಎಂಬ ಗ್ರಾಮ ದಲ್ಲಿ ಜನಿಸಿದ್ದ ಧರ್ಮ ಸಿಂಗ್ ಕರ್ನಾಟಕದ 17ನೇ ಮುಖ್ಯಮಂತ್ರಿಯಾಗಿದ್ದರು. ಜೇವರ್ಗಿ ವಿಧಾನಸಭೆ ಕ್ಷೇತ್ರದಿಂದ 7 ಬಾರಿ ಶಾಸಕ ಹಾಗೂ 1 ಬಾರಿ ಸಂಸದರಾಗಿ ಧರಂಸಿಂಗ್ ಆಯ್ಕೆಯಾಗಿದ್ದರು.

ಸಂತಾಪ

ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‍ನ ಹಿರಿಯ ಮುತ್ಸದ್ಧಿ ಹಾಗೂ ಕೆಪಿಸಿಸಿ ಮಾಜಿ ಅಧ್ಯಕ್ಷ ಎನ್. ಧರ್ಮಸಿಂಗ್ ಅವರ ನಿಧನಕ್ಕೆ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಶಿವು ಮಾದಪ್ಪ, ಕೆಪಿಸಿಸಿಯ ಪದಾಧಿಕಾರಿಗಳಾದ ಮಿಟ್ಟು ಚಂಗಪ್ಪ, ಅರುಣ್ ಮಾಚಯ್ಯ, ಕೆ.ಎಂ. ಇಬ್ರಾಹಿಂ, ಪದ್ಮಿನಿ ಪೊನ್ನಪ್ಪ, ಮಾಜಿ ಸಚಿವರುಗಳಾದ ಟಿ.ಜಾನ್, ಸುಮಾವಸಂತ್, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ರಾಜ್ಯ ರೇಷ್ಮೆ ನಿಗಮ ಮಂಡಳಿ ಅಧ್ಯಕ್ಷ ಟಿ.ಪಿ.ರಮೇಶ್, ಜಿ.ಪಂ ಸದಸೆÀ್ಯ ಕೆ.ಪಿ.ಚಂದ್ರಕಲಾ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನಿರಾ ಮೈನಾ, ನಗರ ಕಾಂಗ್ರೆಸ್ ಅಧ್ಯಕ್ಷ ಕೆ.ಯು. ಅಬ್ದುಲ್ ರಜಾóಕ್, ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷೆ ತಾರಾ ಅಯ್ಯಮ್ಮ ಹಾಗೂ ಪಕ್ಷದ ಪ್ರಮುಖರಾದ ವಾಸು ಕುಟ್ಟಪ್ಪ, ಬಿ.ಎಸ್. ತಮ್ಮಯ್ಯ, ಕೊಲ್ಯದ ಗಿರೀಶ್, ಶೌಕತ್ ಆಲಿ, ಬಿ.ಎನ್. ಪ್ರಕಾಶ್, ರೂಪ, ಭೀಮಯ್ಯ, ಭಾಗ್ಯಭೀಮಯ್ಯ, ವಿ.ಕೆ.ಪೊನ್ನಪ್ಪ, ಬಿ.ಕೆ. ಕೃಷ್ಣ, ಜೆ.ಎ. ಕರುಂಬಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್, ಡಿಸಿಸಿಯ ಪದಾಧಿಕಾರಿ ಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು, ಮುಂಚೂಣಿ ಘಟಕಗಳ ಅಧ್ಯಕ್ಷರು ಗಳು, ಕಾಂಗ್ರೆಸ್‍ನ ಜಿ.ಪಂ. ಸದಸ್ಯರು ಗಳು, ತಾ.ಪಂ. ಸದಸ್ಯರುಗಳು, ಚುನಾಯಿತ ಪ್ರತಿನಿಧಿಗಳು, ಮೊದಲಾ ದವರು ತೀವ್ರ ಸಂತಾಪ ಸೂಚಿಸಿದ್ದಾರೆ.