ಮಡಿಕೇರಿ, ಜು. 28 : ಮೂಲತಃ ಕೊಡಗಿನ ಮದೆನಾಡಿನವರಾಗಿದ್ದು, ವಿಯೆಟ್ನಾಂ ದೇಶದಲ್ಲಿ ಯೋಗ ತರಬೇತಿ ಕೇಂದ್ರ ನಡೆಸುತ್ತಾ ಯೋಗದಲ್ಲಿ ವಿಶ್ವ ದಾಖಲೆ ಮಾಡಿರುವ ಡಾ. ಚೆರಿಯಮನೆ ಸಂತೋಷ್ ಅವರಿಗೆ ವಿಯೆಟ್ನಾಂ ಸರಕಾರ ‘ಗೋಲ್ಡನ್ ಬ್ರಾಂಡ್ ಇನ್ ವಿಯೆಟ್ನಾಂ’ ಪ್ರಶಸ್ತಿ ನೀಡಿ ಗೌರವಿಸಿದೆ. ಬೇರೆ ಬೇರೆ ಕ್ಷೇತ್ರದಲ್ಲಿ ಉನ್ನತ ಮಟ್ಟದ ಸಮಾಜ ಸೇವೆ ಮಾಡುತ್ತಿರುವವರನ್ನು ಗುರುತಿಸಿ ನೀಡಲಾಗುವ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿರುವ ಮೊಟ್ಟ ಮೊದಲನೇ ಭಾರತೀಯ ಎಂಬ ಹೆಗ್ಗಳಿಕೆಗೆ ಸಂತೋಷ್ ಭಾಜನರಾಗಿದ್ದಾರೆ.

ವಿಯೆಟ್ನಾಂನ ಹನೋಯ್‍ನಲ್ಲಿರುವ ರಾಷ್ಟ್ರಾಧ್ಯಕ್ಷರ ಭವನದಲ್ಲಿ ನಡೆದ ಸಮಾರಂಭದಲ್ಲಿ ಉಪಾಧ್ಯಕ್ಷ ಡಾಂಗ್ ಥಿ ಎಂಗೋಕ್ ಥಿನ್ ಅವರಿಂದ ಸಂತೋಷ್ ಪ್ರಶಸ್ತಿ ಸ್ವೀಕಾರ ಮಾಡಿದ್ದಾರೆ.