ನಾಪೆÇೀಕ್ಲು, ಜು. 28: ಸಂಸ್ಕಾರಯುಕ್ತ ಸಮಾಜಮುಖಿ ಶಿಕ್ಷಣದಿಂದ ಮಾತ್ರ ಪ್ರತಿಯೊಬ್ಬ ಮನುಷ್ಯನ ಯಶಸ್ಸು ಸಾಧ್ಯ ಎಂದು ಅರಮೇರಿ ಕಳಂಚೇರಿ ಮಠದ ಶ್ರೀ ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನುಡಿದರು.
ನಾಪೆÇೀಕ್ಲು ಪದವಿಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿ ಸಂಘ ಉದ್ಘಾಟಿಸಿ ಮಾತ ನಾಡಿದರು. ಶಿಕ್ಷಣ ಸಂಸ್ಕಾರಯುತ ವಾಗಿರಬೇಕು. ಸಂಸ್ಕಾರ ರಹಿತ ಶಿಕ್ಷಣ ಸಮಾಜಮುಖಿಯಾಗಲು ಸಾಧ್ಯವಿಲ್ಲ. ಸಂಸ್ಕಾರಯುಕ್ತ ಶಿಕ್ಷಣದಿಂದ ಮಾತ್ರ ಮನುಷ್ಯ ಯಶಸ್ಸು ಸಾಧಿಸಲು ಸಾಧ್ಯ ಎಂದರು.
ಪ್ರತಿಯೊಬ್ಬರ ಮುಂದೆಯೂ ಅವಕಾಶಗಳಿರುತ್ತವೆ. ಅವಕಾಶಗಳು ಬರುವಾಗ ಕಣ್ಣು ಮುಚ್ಚಿ ಕುಳಿತರೆ ಅವಕಾಶದಿಂದ ವಂಚಿತರಾಗ ಬೇಕಾಗುತ್ತದೆ ಎಂದು ಕಿವಿಮಾತು ಹೇಳಿದÀರು.
ಶಾಲಾ ಆವರಣದಲ್ಲಿ ರೂ. 8 ಲಕ್ಷಗಳಲ್ಲಿ ಆಳವಡಿಸಲಾದ ನೆಲಹಾಸು ಉದ್ಘಾಟಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ಶಾಲಾ ಆವರಣದಲ್ಲಿ ಕೆಸರಿದ್ದ ಹಿನೆÀ್ನಲೆ ಪ್ರೌಢಶಾಲಾ ಉಪ ಪ್ರಾಂಶುಪಾಲೆ ಪಿ.ಕೆ. ನಳಿನಿ ಇದಕ್ಕೆ ನೆಲಹಾಸು ಹಾಕಿಕೊಡುವಂತೆ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರು. ಆದರೆ ಗ್ರಾಮ ಪಂಚಾಯಿತಿ ಅಷ್ಟು ದೊಡ್ಡ ಅನುದಾನ ಇಲ್ಲದ ಕಾರಣ ಈ ಕಾಮಗಾರಿಯನ್ನು ಗ್ರಾಮ ಪಂಚಾಯಿತಿ ಸದಸ್ಯರಾದ ಮಾಚೇಟಿರ ಕುಸು ಕುಶಾಲಪ್ಪ ಮತ್ತು ಕಾಳೆಯಂಡ ಸಾಬಾ ತಿಮ್ಮಯ್ಯ ಅವರ ಸಲಹೆಯಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಅವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ ಅವರಿಗೆ ತಿಳಿಸಲಾದ ಸಂದರ್ಭ ಅವರು ಈ ಕಾಮಗಾರಿಯನ್ನು ಸುಸೂತ್ರವಾಗಿ ನೆರವೇರಿಸಿಕೊಟ್ಟಿದ್ದಾರೆ. ನಾವೆಲ್ಲರೂ ಅವರಿಗೆ ಅಭಾರಿಗಳಾಗಿದ್ದೇವೆ ಎಂದರು.
ಮಕ್ಕಳ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಮಾತನಾಡಿ, ಶಾಲೆಯು ವಿದ್ಯಾರ್ಥಿಗಳಿಗೆ ದೇವಾಲಯ ಇದ್ದಂತೆ.
ಇಲ್ಲಿ ಗುರುಗಳು ದೇವರಿದ್ದಂತೆ. ದೇವರ ಹಣತಿಯಂತೆ ಮುಂದುವರಿದರೆ ಉನ್ನತ ಪದವಿ ಪಡೆಯಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಇತ್ತೀಚಿಗೆ ನಡೆದ ಐಎಎಸ್ ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ 501 ನೇ ರ್ಯಾಂಕ್ ಪಡೆದ ಮುಕ್ಕಾಟಿರ ಪುನೀತ್ ಕುಟ್ಟಯ್ಯ ಅವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು.
ದರ್ಪಣ ದ್ವೈಮಾಸಿಕ ಪತ್ರಿಕೆಯನ್ನು ಬಿಡುಗಡೆ ಗೊಳಿಸಿ ಡಾ. ಕೇಲೇಟಿರ ಬೋಪಣ್ಣ ಮಾತ ನಾಡಿದರು. ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಶಾಲಾ ಸಂಘಕ್ಕೆ ಆಯ್ಕೆಯಾದ ವಿದ್ಯಾರ್ಥಿ ಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ನಿಕಟ ಪೂರ್ವ ಉಪ ಪ್ರಾಂಶುಪಾಲೆ ವನಜಾಕ್ಷಿ, ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಸೈನಾರ್ ಕಾರ್ಯ ಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ಮನು, ಜಯಶ್ರೀ, ವಿಜೇತ ಅವರನ್ನು ಶಾಲೆ ವತಿಯಿಂದ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಶಾರದ ಅಪ್ಪಣ್ಣ, ಶಾಲಾ ಮಾಜಿ ಎಸ್‍ಡಿಎಂಸಿ ಅಧ್ಯಕ್ಷ ಎ.ಎ. ವಿಶ್ವನಾಥ್, ಉಪ ಪ್ರಾಂಶುಪಾಲೆ ಪಿ.ಕೆ. ನಳಿನಿ, ಶಿಕ್ಷಕರಾದ ಮಹಂತೇಶ್ ಕೋಟಿ, ಉಷಾರಾಣಿ, ಅಶ್ವಿನಿ, ಕಸ್ತೂರಿ ಇದ್ದರು.