ಗೋಣಿಕೊಪ್ಪಲು, ಜು. 29: ಗ್ರಾ.ಪಂ. ಸದಸ್ಯರು ಒಗ್ಗಟ್ಟಿನಿಂದ ಪಟ್ಟಣವನ್ನು ಅಭಿವೃದ್ದಿಯತ್ತ ಕೊಂಡ್ಯೊಯ್ಯಬೇಕು ಎಂದು ವಿಧಾನಪರಿಷತ್ ಸದಸ್ಯ ಮಂಡೇಪಂಡ ಸುನಿಲ್ ಸುಬ್ರಮಣಿ ಸಲಹೆ ನೀಡಿದರು.

ಗೋಣಿಕೊಪ್ಪ ಗ್ರಾ.ಪಂ.ನಲ್ಲಿ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಗ್ರಾ.ಪಂ.ನಲ್ಲಿ ಸದಸ್ಯರ ಒಗ್ಗಟ್ಟಿನ ಸಮಸ್ಯೆ ಗೋಚರಿಸಿದೆ. ಪಟ್ಟಣದಲ್ಲಿ ಹಲವು ಸಮಸ್ಯೆಗಳು ಕಾಡುತ್ತಿದೆ. ಇದನ್ನು ಸರಿದೂಗಿಸಿಕೊಂಡು ಹೋಗಬೇಕು ಎಂದರು.

ಪಂಚಾಯಿತಿಯೊಳಗೆ ಪಕ್ಷ ರಾಜಕೀಯ ಮಾಡುವದು ಬೇಡ. ಚುನಾವಣೆ ಸಂದರ್ಭವಷ್ಟೆ ರಾಜಕೀಯ ಸೀಮಿತವಾಗಿರಲಿ ಎಂದು ಹೇಳಿದರು. ಬಸ್ ನಿಲ್ದಾಣ, ಶೌಚಾಲಯ. ಕಸದ ಸಮಸ್ಯೆಗಳ ಬಗ್ಗೆ ದೂರುಗಳನ್ನು ಆಲಿಸಿ, ಸಮಸ್ಯೆ ಬಗೆಹರಿಸುವದಾಗಿ ಭರವಸೆ ನೀಡಿದರು.

ಗ್ರಾ.ಪಂ. ಅಧ್ಯಕ್ಷೆ ಸೆಲ್ವಿ, ತಾ.ಪಂ. ಉಪಾಧ್ಯಕ್ಷ ನೆಲ್ಲಿರ ಚಲನ್ ಕುಮಾರ್, ತಾ.ಪಂ. ಸದಸ್ಯ ಜಯಾ ಪೂವಯ್ಯ, ಗ್ರಾ.ಪಂ. ಸದಸ್ಯರುಗಳಾದ ಸುರೇಶ್ ರೈ, ರಾಮಕೃಷ್ಣ, ಜೆ.ಕೆ. ಸೋಮಣ್ಣ, ಮುರುಗ, ಪ್ರಭಾವತಿ, ಪ್ರಮೋದ್ ಗಣಪತಿ, ಕೆ.ಪಿ. ಬೋಪಣ್ಣ, ರಾಜಶೇಖರ್, ಮಮಿತಾ, ತಾಲೂಕು ಬಿ.ಜೆ.ಪಿ. ಮಹಿಳಾ ಘಟಕ ಅಧ್ಯಕ್ಷೆ ಸುಮಿ ಸುಬ್ಬಯ್ಯ, ಪಿ.ಡಿ.ಒ ಚಂದ್ರಮೌಳಿ, ಎಂ.ಎಲ್ಸಿ ಆಪ್ತ ಕಾರ್ಯದರ್ಶಿ ಗುರುಮೂರ್ತಿ ಉಪಸ್ಥಿತರಿದ್ದರು.