ವೀರಾಜಪೇಟೆ, ಜು. 29: ಅನ್ನದಾತ ರೈತನಿಗೆ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಯಡಿ ಬೆಳೆಗಳಿಗೆ ವಿಮಾ ಸೌಲಭ್ಯ ಹಾಗೂ ಕೃಷಿ ಸಂಚಾಯಿ ಯೋಜನೆಯಡಿ ಯಲ್ಲಿ ಭೂಮಿಗೆ ತುಂತುರು ನೀರಾವರಿ ಸೌಲಭ್ಯದೊಂದಿಗೆ ಮಣ್ಣಿನ ಆರೋಗ್ಯ ಕಾರ್ಡ್‍ಗಳನ್ನು ವಿತರಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಹಾಗೂ ಕೇಂದ್ರದ ಯೋಜನೆಯ ವಿಸ್ತಾರಕ ವಿಜು ಸುಬ್ರಮಣಿ ಹೇಳಿದರು.

ಭವ್ಯ ಭಾರತ ಭವಿಷ್ಯಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಲಪಿಸುವ ನಿಟ್ಟಿನಲ್ಲಿ ವೀರಾಜಪೇಟೆ ತಾಲೂಕಿನ ಚೆನ್ನಯ್ಯನಕೋಟೆ ಗ್ರಾಮದ ಚೊಟ್ಟಪಾರೆ ಎಂಬಲ್ಲಿ ನಡೆದ ವಿಸ್ತಾರಕ ಅಭಿಯಾನ ದಲ್ಲಿ ಅವರು ಮಾತನಾಡಿದರು. ಬಿ.ಜೆ.ಪಿ.ಯ ಮುಖಂಡರಾದ ಕೆ.ಎಂ. ರತೀಶ್, ಅಪ್ಪು ಸುಬ್ರಮಣಿ, ಎಂ.ಎನ್. ವಿಜು, ಕುಟ್ಟಂಡ ದೀಪಕ್ ಗಣಪತಿ, ಗಾಯತ್ರಿ, ರತನ್ ಹಾಗೂ ಕಾರ್ಯಕರ್ತರುಗಳು ಹಾಜರಿದ್ದರು.