ಮಡಿಕೇರಿ, ಜು. 29: ಗ್ರಾಮೀಣ ಜನತೆಯ ಮುಗ್ದ ಜೀವನದೊಂದಿಗೆ ಜಗತ್ತಿನ ಎಲ್ಲೆಡೆ ಪಸರಿಸಿಕೊಂಡಿರುವ ಜಾನಪದ ಬದುಕು ಮತ-ಧರ್ಮಗಳನ್ನು ಮೀರಿ ಬೆಳೆದು ನಿಂತದ್ದು ಎಂದು ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಹಾಗೂ ‘ಶಕ್ತಿ’ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಅಭಿಪ್ರಾಯಪಟ್ಟರು.

ಮೂರ್ನಾಡು ಹೋಬಳಿ ಜಾನಪದ ಪರಿಷತ್ ಘಟಕ ರಚನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಮ್ಮ ಬದುಕಿನ ಮೂಲ ಸಂಸ್ಕøತಿ, ಪರಂಪರೆಗೆ ಪೋಷಕವಾಗಿರುವ ಜಾನಪದ ಕಲೆಗಳು ಕ್ಷೀಣಗೊಳ್ಳುತ್ತಿರುವ ಸನ್ನಿವೇಶದಲ್ಲಿ ಅದಕ್ಕೆ ಮರುಜೀವ ತುಂಬಲು ಕರ್ನಾಟಕ ಜಾನಪದ ಪರಿಷತ್ ರಚನೆಗೊಳ್ಳುವÀಂತಾಗಿದೆ ಎಂದು ನೆನಪಿಸಿದರು.

ಕೊಡಗು ಸೇರಿದಂತೆ ವಿಭಿನ್ನ ಜಾನಪದ ಕಲೆಗಳನ್ನು ಕೇಂದ್ರೀಕರಿಸಿ ರಾಮನಗರ ಬಳಿ ಜಾನಪದ ಲೋಕ ಸೃಷ್ಠಿಗೊಂಡಿದ್ದು, ಜಿಲ್ಲೆಯಲ್ಲಿ ಕೂಡ ಈ ಚಟುವಟಿಕೆಗೆ ಎಲ್ಲರ ಸಹಕಾರ ಅಗತ್ಯವೆಂದು ತಿಳಿ ಹೇಳಿದರು. ಜನರಿಂದ ಜನರಿಗಾಗಿಯೇ ಶ್ರಮಿಸುತ್ತಿರುವ ಕರ್ನಾಟಕ ಜಾನಪದ ಪರಿಷತ್ತಿನ ಚಟುವಟಿಕೆಗಳು ಸರಕಾರದಲ್ಲದೆ, ಸಾರ್ವಜನಿಕ ಬೆಂಬಲದೊಂದಿಗೆ ಕಾರ್ಯೋನ್ಮುಖವಾಗಿದೆ ಎಂದು ಅವರು ನೆನಪಿಸಿದರು.

ಜಾನಪದ ಪರಿಷತ್ತಿನ ಚಿ.ನಾ. ಸೋಮೇಶ್, ರಾಣಿ ಮಾಚಯ್ಯ, ಅಂಬೆಕಲ್ ಕುಶಾಲಪ್ಪ, ಎಸ್.ಎಸ್. ಸಂಪತ್‍ಕುಮಾರ್ ಅವರುಗಳು ಈ ಸಂಬಂಧ ಸಲಹೆಗಳನ್ನು ನೀಡಿದರು.

ಮೂರ್ನಾಡು ಹೋಬಳಿ ಸಮಿತಿ ಅಧ್ಯಕ್ಷರಾಗಿ ಎಸ್.ಡಿ. ಪ್ರಶಾಂತ್, ಕಾರ್ಯಾಧ್ಯಕ್ಷರಾಗಿ ಕೆ. ಗಿರೀಶ್, ಉಪಾಧ್ಯಕ್ಷರಾಗಿ ಕೃಷ್ಣಪ್ಪ, ಹರ್ಷ ಮಂದಣ್ಣ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಜಿ. ಹರೀಶ್, ಸಹಕಾರ್ಯದರ್ಶಿಗಳಾಗಿ ಕಲ್ಪನ ಹಾಗೂ ತೇಜಸ್ವಿನಿ, ಖಜಾಂಚಿಯಾಗಿ ಎನ್.ಸಿ. ನವೀನ್ ಮತ್ತು ಸಂಚಾಲಕರುಗಳಾಗಿ ಎ.ಜಿ. ಗಣೇಶ್, ಕೆ.ಕೆ. ಬೋಪಣ್ಣ ನಿಯುಕ್ತಿಗೊಂಡರು. ಹೋಬಳಿ ಸಮಿತಿಯ ನಿರ್ದೇಶಕರುಗಳಾಗಿ ಕೆ.ಎ. ಪ್ರದೀಪ, ಎಂ.ಕೆ.ವೀಣಾ, ಸೀತಮ್ಮ, ರೋಹಿಣಿ, ಶಾರದಾ, ವಿಲ್ಮ, ರೇಷ್ಮಾ ಸುಬ್ಬಯ್ಯ, ಟಿ.ಸಿ. ನಾಗರಾಜ್ ಮೊದಲಾದವರು ಆಯ್ಕೆಗೊಂಡರು. ನೂತನ ಅಧ್ಯಕ್ಷ ಎಸ್.ಡಿ. ಪ್ರಶಾಂತ್ ಪ್ರಾಸ್ತಾವಿಕ ನುಡಿಯೊಂದಿಗೆ, ವಂದಿಸಿದರು.