ಸೋಮವಾರಪೇಟೆ, ಜು. 29: ಇಲ್ಲಿನ ಕೃಷಿ ಇಲಾಖೆಯಲ್ಲಿ ಕೃಷಿ ಯಾಂತ್ರೀಕರಣ ಯೋಜನೆಯಡಿಯಲ್ಲಿ ರೈತರಿಗೆ ಯಂತ್ರೋಪಕರಣಗಳನ್ನು ವಿತರಿಸಲಾಯಿತು. ನೇಗಳ್ಳೆ ಕರ್ಕಳ್ಳಿ ಗ್ರಾಮದ ಲಿಂಗಪ್ಪ ಇಲಾಖೆಯಿಂದ ಕಳೆಕೊಚ್ಚುವ ಯಂತ್ರವನ್ನು ಪಡೆದುಕೊಂಡರು.

ಫಲಾನುಭವಿಗಳಿಗೆ ಯಂತ್ರೋಪಕರಣ ವಿತರಿಸಿ ಮಾತನಾಡಿದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಾಜಶೇಖರ್, ಕೃಷಿ ಭೂಮಿಯಲ್ಲಿ ಕಾರ್ಮಿಕರ ಕೊರತೆಯಿಂದ ಕೃಷಿಗೆ ಹಿನ್ನಡೆಯಾಗಿರುವದನ್ನು ಮನಗಂಡ ಸರ್ಕಾರ ಯಾಂತ್ರೀಕೃತ ಬೇಸಾಯಕ್ಕೆ ಹೆಚ್ಚಿನ ಅವಕಾಶ ಮಾಡಿಕೊಡುತ್ತಿದೆ. ಈ ನಿಟ್ಟಿನಲ್ಲಿ ಇಲಾಖೆ ಮೂಲಕÀ ಟ್ರಾಕ್ಟರ್, ಟಿಲ್ಲರ್, ಪಂಪ್‍ಸೆಟ್, ಸ್ಪ್ರೇಯರ್ ಸೇರಿದಂತೆ ಹಲವು ಯಂತ್ರಗಳಿಗೆ ಶೇ. 50 ರಷ್ಟು ಸಹಾಯಧನ ನೀಡುತ್ತಿದ್ದು ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದರು.

ಈ ಸಂದರ್ಭ ತಾಲೂಕು ಕೃಷಿಕರ ಸಂಘದ ಅಧ್ಯಕ್ಷ ಎಸ್.ಪಿ. ಪೊನ್ನಪ್ಪ, ಉಪಾಧ್ಯಕ್ಷ ಗೋವಿಂದರಾಜ್, ಕಾರ್ಯದರ್ಶಿ ಎಂ.ಪಿ. ರವಿ, ಖಜಾಂಚಿ ಟಿ.ಕೆ. ರಮೇಶ್, ಕೃಷಿ ಅಧಿಕಾರಿ ಮುಕುಂದ, ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಚಿಟ್ಟಿಯಪ್ಪ, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಮುತ್ತಪ್ಪ, ಕರ್ನಾಟಕ ರಾಜ್ಯ ಮಾರಾಟ ಮಹಾಮಂಡಲದ ಕುಶಾಲನಗರದ ಅಧಿಕಾರಿ ವೆಂಕಟೇಶ್ ಉಪಸ್ಥಿತರಿದ್ದರು.