ಮಡಿಕೇರಿ, ಜು. 29: ವಿಧಾನ ಪರಿಷತ್ ಸದಸ್ಯ ಎಂ.ಪಿ ಸುನೀಲ್ ಸುಬ್ರಮಣಿ ಅವರು ವೀರಾಜಪೇಟೆ ತಾಲೂಕಿನ ತಿತಿಮತಿ, ದೇವರಪುರ, ಗೋಣಿಕೊಪ್ಪಲು ಹಾಗೂ ಹಾತೂರು ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಸಾರ್ವಜನಿಕರ ಕುಂದುಕೊರತೆ ಆಲಿಸಿ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಾರ್ವಜನಿಕರೊಂದಿಗೆ ಗ್ರಾಮದ ಅಭಿವೃದ್ದಿಯ ಬಗ್ಗೆ ಚರ್ಚಿಸಿದರು.

ತಿತಿಮತಿ ಗ್ರಾಮ ಪಂಚಾಯಿತಿಗೆ ಭೆÉೀಟಿ ನೀಡಿ ಸಾರ್ವಜನಿಕರಿಂದ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಜನರ ಸಮಸ್ಯೆ, ಅಲ್ಲಿನ ಮೂಲಭೂತ ಸೌಕರ್ಯಗಳ ಬಗ್ಗೆ ಅಹವಾಲುಗಳನ್ನು ಸ್ವೀಕರಿಸಿದರು. ಪಿ.ಡಿ.ಓ ಅವರಿಂದ ಗ್ರಾಮ ಪಂಚಾಯತಿಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದು ಪ್ರಗತಿ ಪರಿಶೀಲಿಸಿದರು. ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ್ ಮಾಚಯ್ಯ ಮಾತನಾಡಿ, ಅರಣ್ಯದ ಒಳಗೆ ಇರುವವರಿಗೆ ಮೂಲಭೂತ ಸೌಕರ್ಯಗಳಾದ ನೀರು, ವಿದ್ಯುತ್, ಮನೆ ಮುಂತಾದ ಸೌಕರ್ಯಗಳನ್ನು ಕಲ್ಪಿಸಲು ಅರಣ್ಯ ಇಲಾಖೆ ತಡೆಒಡ್ಡದಂತೆ ಸೂಕ್ತ ಕ್ರಮವಹಿಸಬೇಕು. ಅರಣ್ಯ ಜಾಗದಲ್ಲಿ ಪೆÇಲೀಸ್ ಠಾಣೆ ಇದ್ದು, ಪೆÇಲೀಸ್ ಠಾಣೆ ಹಾಗೂ ಪೆÇಲೀಸ್ ವಸತಿ ಗೃಹಗಳು ಬೀಳುವ ಹಂತದಲ್ಲಿದ್ದರೂ ದುರಸ್ತಿಗೆ ಅರಣ್ಯ ಇಲಾಖೆ ಅನುಮತಿ ನೀಡುತ್ತಿಲ್ಲ. ಈ ಬಗ್ಗೆ ಕ್ರಮವಹಿಸಬೇಕು ಎಂದರು. ಸುನಿಲ್ ಸುಬ್ರಮಣಿ ಮಾತನಾಡಿ, ಅರಣ್ಯ ಇಲಾಖೆ ಹಾಗೂ ಪೆÇಲೀಸ್ ಇಲಾಖೆಗಳು ಒಂದಕ್ಕೊಂದು ಸಹಕಾರ ನೀಡಿ ಕಾರ್ಯ ನಿರ್ವಹಿಸಿದ್ದಲ್ಲಿ ಮಾತ್ರ ಸಾರ್ವಜನಿಕರಿಗೆ ಉಪಯೋಗ ವಾಗುತ್ತದೆ. ಅರಣ್ಯ ಇಲಾಖಾ ಜಾಗದಲ್ಲಿರುವ ಪೆÇೀಲೀಸ್ ಠಾಣೆ ಹಾಗೂ ಪೆÇಲೀಸ್ ವಸತಿ ಗೃಹಗಳನ್ನು ದುರಸ್ತಿಗೆ ಮೇಲಧಿಕಾರಿಗಳಿಗೆ ಸೂಕ್ತ ಪ್ರಸ್ತಾವನೆ ಕಳುಹಿಸಲು ಅರಣ್ಯ ಮತ್ತು ಪೆÇಲೀಸ್ ಇಲಾಖಾಧಿಕಾರಿಗಳಿಗೆ ಸೂಚಿಸಿದರು. ಈ ಬಗ್ಗೆ ಸದನದಲ್ಲಿ ಸಂಬಂಧಿಸಿದವರ ಗಮನ ಸೆಳೆಯಲಾಗುವದು ಎಂದರು. ಜಿಲ್ಲಾ ಪಂಚಾಯತಿ ಸದಸ್ಯೆ ಪಂಕಜ, ತಾಲೂಕು ಪಂಚಾಯತಿ ಉಪಾಧ್ಯಕ್ಷ ನೆಲ್ಲಿರ ಚಲನ್ ಕುಮಾರ್, ಗ್ರಾಮ ಪಂಚಾಯತಿ ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷೆ ರಶ್ಮಿ, ಅರಣ್ಯ ಸಮಿತಿ ಸದಸ್ಯ ರಾಮಕೃಷ್ಣ, ರಾಜು, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯತಿ ಸಿಬ್ಬಂದಿ ಹಾಗೂ ಇಲಾಖಾ ಅಧಿಕಾರಿಗಳು ಹಾಜರಿದ್ದರು.

ದೇವರಪುರ ಗ್ರಾಮ ಪಂಚಾಯಿತಿಗೆ ತೆರಳಿ, ಶಾಲಾ ದುರಸ್ತಿ, ಪೈಸಾರಿ ಜನರಿಗೆ ಮೂಲಭೂತ ಸೌಕರ್ಯಗಳ ಮಂಜೂರಾತಿ, ನೀರು, ವಿದ್ಯುತ್, ರಸ್ತೆ, ಅರಣ್ಯ ಇಲಾಖೆಯಿಂದ ಅಸಹಕಾರ, ಮುಂತಾದ ಅಹವಾಲುಗಳನ್ನು ಸ್ವೀಕರಿಸಿದರು. ಸ್ವಚ್ಛತೆ ಬಗ್ಗೆ ಪೂರ್ಣ ಪ್ರಮಾಣದಲ್ಲಿ ಕಾರ್ಯಕ್ರಮ ರೂಪಿಸಿ, ಗ್ರಾಮವನ್ನು ಸ್ವಚ್ಛವಾಗಿಡಲು ಪಿ.ಡಿ.ಓ. ಅವರಿಗೆ ಸೂಚಿಸಿದರು. ಗ್ರಾಮ ಪಂಚಾಯತಿ ಅಧ್ಯಕ್ಷ ಹೆಚ್.ಪಿ. ವಸಂತ, ಉಪಾಧ್ಯಕ್ಷೆ ಪಿ.ಕೆ. ರತಿ, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯತಿ ಸಿಬ್ಬಂದಿ ಹಾಗೂ ಇಲಾಖಾ ಅಧಿಕಾರಿಗಳು ಹಾಜರಿದ್ದರು. ನಂತರ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿ ಸಭೆ ನಡೆಸಿ ಪಕ್ಷ ಬಲವರ್ಧನೆ ಬಗ್ಗೆ ಚರ್ಚಿಸಿದರು.

ಗೋಣಿಕೊಪ್ಪಲು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಸುಸಜ್ಜಿತ ಬಸ್ ನಿಲ್ದಾಣ, ರಸ್ತೆ ಅಭಿವೃದ್ದಿ, ನೀರಿನ ವ್ಯವಸ್ಥೆ ಮುಂತಾದ ಅಹವಾಲುಗಳನ್ನು ಸ್ವೀಕರಿಸಿದರು. ಗ್ರಾಮ ಪಂಚಾಯಿತಿ ಅಧ್ಯಕೆÀ್ಷ ಸೆಲ್ವಿ, ತಾಲೂಕು ಪಂಚಾಯಿತಿ ಸದಸ್ಯ ಜಯ ಪೂವಯ್ಯ, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಇಲಾಖಾ ಅಧಿಕಾರಿಗಳು ಹಾಜರಿದ್ದರು.

ಹಾತೂರು ಗ್ರಾಮ ಪಂಚಾಯಿತಿಗೆ ತೆರಳಿ ಸಾರ್ವಜನಿಕರಿಂದ ರಸ್ತೆ, ನಾಲೆ ದುರಸ್ತಿ, ಹೆಚ್ಚುವರಿ ಅನುದಾನಗಳ ಬಗ್ಗೆ ಅಹವಾಲು ಸ್ವೀಕರಿಸಿ, ಈ ಹಿಂದೆ ನಿರ್ಮಿಸಲಾದ ನಾಲೆಯ ದುಸ್ಥಿತಿಯನ್ನು ಪರಿಶೀಲಿಸಿದರು. ಗ್ರಾಮ ಪಂಚಾಯಿತಿ ಅಧ್ಯಕೆÀ್ಷ ಆಶಾಲತ, ಉಪಾಧ್ಯಕ್ಷ ಕೆ.ಡಿ. ಪೂವಣ್ಣ, ಆರ್.ಎಂ.ಸಿ ಸದಸ್ಯ ಚೀಯಕ್‍ಪೂವಂಡ ಸುಬ್ರಮಣಿ ಇದ್ದರು.