ಕೂಡಿಗೆ, ಜು. 29: ಸೋಮವಾರಪೇಟೆ ಸುನ್ನಿ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ವಾರ್ಷಿಕ ಮಹಾಸಭೆ ಇತ್ತೀಚೆಗೆ ಕೂಡಿಗೆ ಮುನವ್ವಿರುಲ್ ಇಸ್ಲಾಂ ಮದ್ರಸದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಸುಂಟಿಕೊಪ್ಪದ ರಫೀಕ್ ಸಅದಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಷಂಶುದ್ದೀನ್ ಸಅದಿ ಉದ್ಘಾಟಿಸಿದರು. ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಂಸ ಅನ್ವರಿ ಮಾತನಾಡಿ, ಸಮಾಜದ ಒಳ್ಳೆಯ ಬೆಳೆವಣಿಗೆಯ ಮೂಲಮಂತ್ರ ವಿದ್ಯಾರ್ಥಿಗಳಲ್ಲಿ ನಾವು ಅಳವಡಿಸಿಕೊಡಬೇಕು. ಸಮಾಜದಲ್ಲಿ ಒಡಕು, ಅಶಾಂತಿ, ತೊಲಗಿಸಲು ನಾವು ಮುಂದಿನ ಪೀಳಿಗೆಗೆ ಮಾದರಿಯಾಗಬೇಕು ಎಂದರು.

ಮ್ಯಾಗಜೀನ್ ವಿಭಾಗದ ಕಾರ್ಯದರ್ಶಿ ಅಬ್ದುಲ್ ಅಝೀಝ್ ಸಖಾಫಿ ಕೊಡ್ಲಿಪೇಟೆ, ವೆಲ್ಫೇರ್ ಕಾರ್ಯದರ್ಶಿ ರಝಾಕ್ ಸಅದಿ ಗರಗಂದೂರು, ಮಿಷನರಿ ವಿಭಾಗದ ಕಾರ್ಯದರ್ಶಿ ಸಮದ್ ನಿಝಾಮಿ ಕಲ್ಕಂದೂರು, ತರಬೇತಿ ಕಾರ್ಯದರ್ಶಿ ಹಸೈನಾರ್ ಮುಸ್ಲಿಯಾರ್, ಪರೀಕ್ಷಾ ವಿಭಾಗದ ಕಾರ್ಯದರ್ಶಿ ಅಲಿ ಸಖಾಫಿ ಮುಂದಿನ ಒಂದು ವರ್ಷದ ಕಾರ್ಯ ಚಟುವಟಿಕೆಗಳ ವಿವರಣೆಗಳನ್ನು ನೀಡಿದರು.

ರೇಂಜ್‍ಗೆ ಒಳಪಟ್ಟ 18 ಮದ್ರಸಗಳ ಅಧ್ಯಾಪಕರು ಪಾಲ್ಗೊಂಡ ಕಾರ್ಯಕ್ರಮದಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಹಂಝ ಮುಸ್ಲಿಯಾರ್ ವಂದಿಸಿದರು.