ಸೋಮವಾರಪೇಟೆ, ಜು.30: ತಾಲೂಕು ಒಕ್ಕಲಿಗರ ಯುವ ವೇದಿಕೆ ವತಿಯಿಂದ ಸಮೀಪದ ಗೌಡಳ್ಳಿ ಗ್ರಾಮದ ಎಚ್.ಕೆ.ತಮ್ಮೇಗೌಡ ಅವರ ಗದ್ದೆಯಲ್ಲಿ ಆಯೋಜಿಸಲಾಗಿದ್ದ ನಾಲ್ಕನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟದ ಪುರುಷರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ನಾಲ್ಕನೆ ಬಾರಿಯೂ ಅರೆಯೂರು ಯುವಕ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಗೌಡಳ್ಳಿ ಪ್ಲಾಂಟರ್ಸ್ ಕ್ಲಬ್ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ಮಾದಾಪುರ ತಂಡ ಪ್ರಥಮ ಹಾಗು ಹೆಗ್ಗುಳ ಮಹಾತ್ಮ ಗಾಂಧಿ ಯುವಕ ಸಂಘ ದ್ವಿತೀಯ ಸ್ಥಾನ ಗಳಿಸಿತು. ಮಹಿಳೆಯರ ಥ್ರೋಬಾಲ್‍ನಲ್ಲಿ ಕೂಗೂರು ಮಹಿಳಾ ತಂಡ ಪ್ರಥಮ, ದೊಡ್ಡಹಣಕೋಡು ಬಸವೇಶ್ವರ ಯುವತಿ ಮಂಡಳಿ ದ್ವಿತೀಯ ಸ್ಥಾನಗಳಿಸಿತು.

ಮಹಿಳೆಯ ಹಗ್ಗಜಗ್ಗಾಟದಲ್ಲಿ ಗೌಡಳ್ಳಿ ಮಂಜುನಾಥೇಶ್ವರ ಯುವತಿ ಮಂಡಳಿ ಪ್ರಥಮ, ಕೂಗೂರು ಪಂಚಲಿಂಗೇಶ್ವರ ಯುವತಿ ಮಂಡಳಿ ದ್ವಿತೀಯ ಸ್ಥಾನಗಳಿಸಿತು. ಹಿರಿಯರ 100ಮೀ ಓಟದಲ್ಲಿ ಓ.ಪಿ.ಮಾದಪ್ಪ ಪ್ರಥಮ, ಎ.ವಿ.ಪರಮೇಶ್ ದ್ವಿತೀಯ, 100ಮೀ. ಪುರುಷರ ವಿಭಾಗದಲ್ಲಿ ಕೆ.ಎಂ.ನಿಖಿಲ್ ಪ್ರಥಮ, ಕೆ.ಆರ್.ರಾಕೇಶ್ ದ್ವಿತೀಯ, 100ಮೀ. ಮಹಿಳೆಯರ ವಿಭಾಗದಲ್ಲಿ ಸಿ.ಎಂ.ಅರ್ಪಿತಾ ಪ್ರಥಮ, ಕೆ.ಎಂ.ಮಧುರ ದ್ವಿತೀಯ, ಬಾಲಕರ ವಿಭಾಗದಲ್ಲಿ ಹೆಚ್.ಜಿ.ಬಿಪಿನ್ ಪ್ರಥಮ, ಡಿ.ಕೆ.ರಕ್ಷಿತ್ ದ್ವಿತೀಯ, ಕೆ.ಆರ್.ವರ್ಶಿತ್ ತೃತೀಯ ಬಹುಮಾನ ಪಡೆದರು.

ಬಾಲಕಿಯರ ವಿಭಾಗದಲ್ಲಿ ಸಿ.ಜಿ.ನಿಖಿತಾ ಪ್ರಥಮ, ಜಿ.ಎಂ.ಹಿಮಾನಿ ದ್ವಿತೀಯ, ಜಿ.ಎಚ್. ಸ್ಪಂದನ ತೃತೀಯ ಸ್ಥಾನ ಗಳಿಸಿದರು. ದಂಪತಿಗಳ ಓಟದ ಸ್ಪರ್ಧೆಯಲ್ಲಿ ಹೆಗ್ಗುಳ ಗ್ರಾಮದ ಪ್ರಮೋದ್ ದಂಪತಿ ಪ್ರಥಮ, ಮೋರಿಕಲ್ಲು ಗ್ರಾಮದ ನಂದಕುಮಾರ್ ದಂಪತಿ ದ್ವಿತೀಯ ಸ್ಥಾನಗಳಿಸಿದರು.

ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದ ಗೌಡಳ್ಳಿ ಗ್ರಾ.ಪಂ. ಅಧ್ಯಕ್ಷ ಧರ್ಮಾಚಾರಿ, ದಾನಿಗಳಾದ ಅರುಣ್ ಕೊತ್ನಳ್ಳಿ, ಬೆಂಗಳೂರು ವಿಶ್ವ ಒಕ್ಕಲಿಗರ ಬ್ರಿಗೇಡ್‍ನ ರಾಜ್ಯಾಧ್ಯಕ್ಷ ಗಿರೀಶ್ ಮಲ್ಲಪ್ಪ, ಯುವ ವೇದಿಕೆ ಅಧ್ಯಕ್ಷ ಬಿ.ಜೆ.ದೀಪಕ್, ತಾ.ಪಂ. ಸದಸ್ಯೆ ಕುಸುಮಾ ಅಶ್ವಥ್, ದೊಡ್ಡಮಳ್ತೆ ಗ್ರಾ.ಪಂ.ಅಧ್ಯಕ್ಷ ಸುಳಿಮಳ್ತೆ ದಿವಾಕರ್, ಎಚ್.ಕೆ.ತಮ್ಮೇಗೌಡ, ಕೆ.ಟಿ.ದಯಾನಂದ ಮತ್ತಿತರರು ವಿಜೇತರಿಗೆ ಬಹುಮಾನ ವಿತರಿಸಿದರು.