ಗೋಣಿಕೊಪ್ಪಲು, ಜು. 31 : ಅಭಿಮಾನದ ಮೂಲಕ ಒಗ್ಗಟ್ಟು ಸಾಧಿಸಿದರೆ ಸಂಘಟನೆ ಬಲವರ್ಧನೆಗೆ ಸಹಕಾರಿಯಾಗಲಿದೆ ಎಂದು ಪೂಮಾಲೆ ಪತ್ರಿಕೆ ಸಂಪಾದಕ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅಭಿಪ್ರಾಯಪಟ್ಟರು.

ಇಲ್ಲಿನ ಪ್ರಕಾಶ್ ಇಂಟರ್‍ನ್ಯಾಷನಲ್ ಸಭಾಂಗಣದಲ್ಲಿ ನಡೆದ ವೀರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆಯ ಕ್ರೀಡಾಕೂಟ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.ಪತ್ರಿಕಾ ದಿನಾಚರಣೆಯಲ್ಲಿ ಕ್ರೀಡಾಕೂಟ ಆಯೋಜಿಸುವ ಮೂಲಕ ಮಾಧ್ಯಮದವರು ಒಂದಾಗಿ ಬೆರೆಯಲು ಸಹಕಾರಿಯಾಗಿದೆ. ಅಭಿಮಾನದ ಮೂಲಕ ನಾವು ಒಂದಾಗಿ ಸಂಘಟಿತರಾದರೆ ಇನ್ನಷ್ಟು ಯಶಸ್ಸು ಸಾಧ್ಯ. ನಾವು ಸಂಘಟಿತರಾಗಲು ಒಗ್ಗಟ್ಟು ಪ್ರದರ್ಶಿಸುವ ಅವಶ್ಯಕತೆ ಇದೆ ಎಂದರು.

ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಸದಸ್ಯರುಗಳನ್ನು ಸಂಘದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಇನ್ನಷ್ಟು ಯೋಜನೆ ತರುವ ಬಗ್ಗೆ ಚಿಂತಿಸಬೇಕಿದೆ ಎಂದರು.

ಈ ಸಂದರ್ಭ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕುಪ್ಪಂಡ ದತ್ತಾತ್ರಿ, ಪ್ರ. ಕಾರ್ಯದರ್ಶಿ ಕಿರಿಯಮಾಡ ರಾಜ್ ಕುಶಾಲಪ್ಪ, ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಪಳೆಯಂಡ ಪಾರ್ಥ ಚಿಣ್ಣಪ್ಪ, ವೀಕ್ಷಕ ರವಿಕುಮಾರ್, ಕ್ಷೇಮಾಭಿವೃದ್ದಿ ಸಮಿತಿ ಅಧ್ಯಕ್ಷ ಸಣ್ಣುವಂಡ ಚಂಗಪ್ಪ, ಕೊಡಗು ಪ್ರೆಸ್ ಕ್ಲಬ್ ಪ್ರ. ಕಾರ್ಯದರ್ಶಿ ಮಂಜುನಾಥ್, ಸಿದ್ದಾಪುರ ನಗರ ಸಂಘ ಅಧ್ಯಕ್ಷ ವಾಸು ಉಪಸ್ಥಿತರಿದ್ದರು. ಅಜೀಜ್ ಸ್ವಾಗತಿಸಿ, ಸುಬ್ರಮಣಿ ವಂದಿಸಿದರು.

ಫಲಿತಾಂಶ ; ಪತ್ರಿಕಾ ದಿನಾಚರಣೆ ಅಂಗವಾಗಿ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಜಿಲ್ಲೆಯ ವಿವಿದ ಕಡೆಗಳಿಂದ ಮಾಧ್ಯಮ ಪ್ರತಿನಿಧಿಗಳು ಪಾಲ್ಗೊಂಡರು.

ಚೆಸ್ ಪಂದ್ಯಾಟದಲ್ಲಿ ಟಿ ಎಲ್ ಶ್ರೀನಿವಾಸ್ ಪ್ರಥಮ, ಸುಬ್ರಮಣಿ ದ್ವಿತೀಯ, ಕೇರಂ ಡಬಲ್ಸ್‍ನಲ್ಲಿ ಸುರೇಶ್ ಬಿಳಿಗೆರೆ - ಟಿ ಎನ್ ಮಂಜುನಾಥ್ ಪ್ರಥಮ, ಮಂಜುನಾಥ್ - ಸುವರ್ಣ ಮಂಜು ದ್ವಿತೀಯ, ಸುಬ್ರಮಣಿ - ಸಂಪತ್‍ರಾಜ್ ತೃತಿಯ, ಸಿಂಗಲ್ಸ್‍ನಲ್ಲಿ ರೆಜಿತ್ ಕುಮಾರ್ ಫ್ರಥಮ, ಸುರೇಶ್ ಬಿಳಿಗೆರೆ ದ್ವಿತೀಯ, ಚೆನ್ನನಾಯಕ ತೃತೀಯ ಸ್ಥಾನ ಪಡೆದುಕೊಂಡರು.

ರೆಮ್ಮಿಯಲ್ಲಿ ರೋಹಿತ್ ಗೌಡ ಪ್ರಥಮ, ಸಣ್ಣುವಂಡ ಚಂಗಪ್ಪ ದ್ವಿತೀಯ, ಸಂಪತ್‍ರಾಜ್ ತೃತೀಯ ಬಹುಮಾನ ಪಡೆದುಕೊಂಡರು.