ವೀರಾಜಪೇಟೆ, ಜು. 31 : ತಾಲೂಕಿನ ಪೊನ್ನಂಪೇಟೆ ಸಮೀಪದ ನಡಿಕೇರಿಯ ಇತಿಹಾಸ ಪ್ರಸಿದ್ದ ಗೋವಿಂದಸ್ವಾಮಿ ದೇವಾಲಯದಲ್ಲಿ ಪೂಜಾ ಕೈಂಕರ್ಯಗಳು ನಡೆದವು. ಸುತ್ತಮುತ್ತಲಿನ ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಗೋಣಿಕೊಪ್ಪ ಸಮೀಪದ ಪೆÇನ್ನಂಪೇಟೆ-ಕಾನೂರು ರಸ್ತೆ ಮಾರ್ಗದಲ್ಲಿ ತೆರಳಿದಾಗ ಸಿಗುವದೇ ಈ ‘ಗೋವಿಂದಸ್ವಾಮಿ ದೇವಾಲಯ. ಸುಂದರ ಪರಿಸರದಲ್ಲಿ ನೆಲೆ ನಿಂತಿರುವ ಗೋವಿಂದಸ್ವಾಮಿ ಗುಡಿಯೊಂದಿಗೆ, ಲಕ್ಷ್ಮಿಗುಡಿ, ಗಣಪತಿ ಗುಡಿ, ವಿಶೇಷವಾದ ಪುರಾತನ ವಿಗ್ರಹದ ಆಂಜನೇಯ ಗುಡಿ ಹಾಗೂ ನಾಗನ ಸ್ಥಾನವನ್ನು ನಿರ್ಮಿಸಲಾಗಿದೆ. ಕ್ರಿ. ಶ. 1273ರಲ್ಲಿ ಇಲ್ಲಿ ಗೋವಿಂದಸ್ವಾಮಿ ದೇವಸ್ಥಾನ ನಿರ್ಮಾಣವಾಗಿದ್ದು, 1832ರಲ್ಲಿ ದೇಗುಲವನ್ನು ಶತ್ರುಗಳು ಧ್ವಂಸ ಮಾಡಿದ್ದರಲ್ಲದೆ, ವಿಗ್ರಹಗಳನ್ನು ಭಗ್ನಗೊಳಿಸಿದ್ದರು ಎಂದು ಸ್ವರ್ಣ ಪ್ರಶ್ನಾವಳಿಯಲ್ಲಿ ಬೆಳಕಿಗೆ ಬಂದಿದ್ದು ಇಲ್ಲಿ ಪುರಾತನ ಬಾವಿ ಇದ್ದು ಅದನ್ನೂ ನವೀಕರಣ ಮಾಡಲಾಗಿದೆ. ವಿಶೇಷವೆಂದರೆ, ಬೇಸಿಗೆಯಲ್ಲಿಯೂ ಇಲ್ಲಿ ನೀರು ಬತ್ತುವದಿಲ.್ಲ ಇತಿಹಾಸ ಪ್ರಸಿದ್ಧ ದೇವಾಲಯವೊಂದು ಸದ್ದಿಲ್ಲದೆ ಸ್ಥಾಪನೆಗೊಂಡಿದ್ದು, ಕಳೆದ ತಿಂಗಳು ಜೂ.8 ರಂದು ಪ್ರತಿಷ್ಠಾಪನಾ ಮಹೋತ್ಸವವೂ ನಡೆದಿತ್ತು. ಉದ್ಧೇಶಿತ ದೇವಸ್ಥಾನವನ್ನು ರೂ.2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲು ಆಡಳಿತ ಮಂಡಳಿ ಇಚ್ಚಿಸಿದ್ದು, ಈಗಾಗಲೇ ಸುಮಾರು ರೂ.85 ಲಕ್ಷಕ್ಕೂ ಅಧಿಕ ವೆಚ್ಚ ಮಾಡಲಾಗಿದೆ. ಶಾಸಕ ಬೋಪಯ್ಯ ಅವರ ಅನುದಾನ ರೂ.3 ಲಕ್ಷ, ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ರೂ.2.50 ಲಕ್ಷ, ಆರಾಧನಾ ಸಮಿತಿಯಿಂದ ರೂ.20 ಸಾವಿರ ಅನುದಾನ ಹೊರತು ಪಡಿಸಿದರೆ ಭಕ್ತಾದಿಗಳೂ, ಕುಟುಂಬಸ್ಥರೇ ರೂ.80 ಲಕ್ಷಕ್ಕೂ ಅಧಿಕ ವೆಚ್ಚವನ್ನು ಭರಿಸಿದ್ದಾರೆ. ದೇವಸ್ಥಾನಕ್ಕೆ ಸುಮಾರು 2 ಕಿ.ಮೀ.ಕಾಂಕ್ರೀಟ್ ರಸ್ತೆ, ದೇವಸ್ಥಾನ ಆವರಣ ಗೋಡೆ, ಪೌಳಿ ನಿರ್ಮಾಣ ಹಾಗೂ ಭೋಜನ ಶಾಲೆಯ ನಿರ್ಮಾಣದ ಅಗತ್ಯವಿದ್ದು ಇನ್ನೂ ರೂ.1 ಕೋಟಿ ಯೋಜನಾ ವೆಚ್ಚ ಅಗತ್ಯವಿದೆ.

ಕೋಳೆರ ಕುಟುಂಬದ ಮಹಿಳೆಯೊಬ್ಬರು ತಿರುಪತಿ ತಿಮ್ಮಪ್ಪನ ಭಕ್ತೆಯಾಗಿದ್ದು ಒಮ್ಮೆ ತಿರುಪತಿಗೆ ತೆರಳಿ ಹಿಂತಿರುಗುವ ಸಂದರ್ಭ ವಿಗ್ರಹದಾಕೃತಿಯ ಕಲ್ಲನ್ನು ತಂದು ನಡಿಕೇರಿಯ ತಮ್ಮ ಮನೆಯಲ್ಲಿಟ್ಟು ಭಕ್ತಿಯಿಂದ ಪೂಜಿಸುತ್ತಿದ್ದರೆನ್ನಲಾಗಿದೆ. ಇದೇ ಸಂದರ್ಭ ಆಕೆಯ ಮನೆಗೆ ತೆರಳಿ ಪೂಜೆಯಲ್ಲಿ ಪಾಲ್ಗೊಂಡ ವರಿಗೂ ಕಷ್ಟವು ದೂರವಾಗಿ ನೆಮ್ಮದಿ ಕಂಡುಕೊಂಡಿದ್ದರೆನ್ನಲಾಗಿದೆ. ಈ ಒಂದು ಹಿನ್ನೆಲೆಯಲ್ಲಿ ನಡಿಕೇರಿ ಗ್ರಾಮದ ಊರಿನವರು ಒಂದಾಗಿ ಸುಂದರ ಗೋವಿಂದಸ್ವಾಮಿ ದೇವಸ್ಥಾನ ನಿರ್ಮಿಸಿ ಇದೀಗ ಪೂಜಾ ವಿಧಿ ವಿಧಾನ ನೆರವೇರಿಸುತ್ತಿ ದ್ದಾರೆ. ಮತ್ತೆ ಮಾನಸಿಕ ನೆಮ್ಮದಿ ಕಂಡುಕೊಳ್ಳುವತ್ತ ಹಲವು ಕುಟುಂಬಗಳು ನಿತ್ಯಪೂಜೆಯಲ್ಲಿ ತೊಡಗಿಸಿಕೊಂಡಿರುವದು ವಿಶೇಷ. ಅನಂತಸ್ವಾಮಿ ಎಂಬ ಅರ್ಚಕರನ್ನೂ ಖಾಯಂ ಆಗಿ ನೇಮಕ ಮಾಡಲಾಗಿದೆ. ಸುತ್ತ ಮುತ್ತಲಿನ ಗ್ರಾಮದಲ್ಲಿರುವ ಕೊಡವ ಕುಟುಂಬಗಳಾದ ಕೋಳೇರ, ಕಳ್ಳಿಚಂಡ, ಕಿರುಂದಂಡ, ಭೂವಕ್ಕಂಡ, ಚಟ್ಟಮಾಡ, ಮಾಣಿಯಪಂಡ, ಮುದ್ದಿಯಡ, ಮಾಪಂಡ, ಚಟ್ಟಂಡ ಹಾಗೂ ಮುಂಡುಮಾಡ ಕುಟುಂಬಗಳು ನಡಿಕೇರಿ ವ್ಯಾಪ್ತಿಯಲ್ಲಿ ವಾಸವಾಗಿ ದ್ದಾರೆ. ದೇವಸ್ಥಾನ ಅಭಿವೃದ್ಧಿಗೆ ಕೋಳೆರ ಶಶಿಸುಬ್ಬಯ್ಯ, ಕೋಳೆರ ನಾಚು, ಕೋಳೆರ ನರೇಂದ್ರ, ಕೋಳೆರ ವೆಂಕಟೇಶ್, ಕೋಳೆರ ಕುಟುಂಬ ಹಾಗೂ ಭಕ್ತರು ಶ್ರಮಿಸುತ್ತಿದ್ದಾರೆ.