ಗೋಣಿಕೊಪ್ಪ, ಜು. 31 : ಇಲ್ಲಿಗೆ ಸಮೀಪದ ಅತ್ತೂರುವಿನ ಪ್ರತಿಷ್ಠಿತ ನ್ಯಾಷನಲ್ ಅಕಾಡೆಮಿ ಶಾಲೆಯಲ್ಲಿ 2017-18 ಸಾಲಿನ ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭ ನಡೆಯಿತು. ಮುಖ್ಯ ಅತಿಥಿಗಳಾಗಿ ಡಾ.ತೀತಿರ ಪುಷ್ಪಾ ಮುತ್ತಣ್ಣರವರು ಆಗಮಿಸಿ ಜ್ಯೋತಿ ಬೆಳಗುವದರ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾವೇರಿ ಕಾಲೇಜು ಉಪನ್ಯಾಸಕಿ ಪುಷ್ಪಾ ಮುತ್ತಣ್ಣ ವಿದ್ಯಾರ್ಥಿಗಳನ್ನು “ಮೈ ಡಿಯರ್ ಡಾಲ್” ಎಂದು ಸಂಬೋಧಿಸುತ್ತಾ ಮಾತು ಆರಂಭಿಸಿದರು. ಮಕ್ಕಳಲ್ಲಿರ ಬೇಕಾದ ಮಾನವೀಯ ಮೌಲ್ಯ ಗಳನ್ನು ತಿಳಿಸಿಕೊಟ್ಟರು. ಜೀವನದಲ್ಲಿ ಕಿತ್ತುತಿನ್ನುವ ಗುಣವನ್ನು ಬಿಟ್ಟು ಕೇಳಿ ಪಡೆಯುವುದನ್ನು ಕಲಿಯಬೇಕು, ಶಾಂತಿ-ಸೌಹಾರ್ಧತೆ-ಪ್ರೀತಿಯ ಮಂತ್ರಗಳನ್ನು ಜೀವನದುದ್ದಕ್ಕೂ ಪಠಿಸಬೇಕೆಂದರು. ಮಕ್ಕಳು ಮೊಬೈಲ್‍ನಿಂದ ದೂರವಿರಬೇಕೆಂದು ಕಿವಿಮಾತು ಕೊಟ್ಟರು. ವಿದ್ಯಾರ್ಥಿ ನಾಯಕರುಗಳಲ್ಲಿರಬೇಕಾದ ಗುರುತರ ಜವಾಬ್ದಾರಿಯ ಅರಿವನ್ನು ಮೂಡಿಸಿ ದರು.
ಶಾಲಾ ಸಂಸ್ಥಾಪಕಿ ಅಪ್ಪನೆರವಂಡ ಶಾಂತಿ ಅಚ್ಚಪ್ಪ ಮಾತನಾಡಿ ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಜೀವನದುದ್ದಕ್ಕೂ ಅಳವಡಿಸಿಕೊಳ್ಳಲು ತಿಳಿಸಿದರು.
ಇದೇ ಸಂದರ್ಭ ಶಾಲಾ ನಾಯಕನಾಗಿ ಉತ್ತಮ್ ಗೌಡ, ಉಪ ನಾಯಕಿಯಾಗಿ ಯಶ್ಮ, ಕ್ರೀಡಾ ನಾಯಕನಾಗಿ ಫರ್ಧೀನ್ ಮೊಹಮ್ಮದ್, ಉಪನಾಯಕನಾಗಿ ರಾಹುಲ್ ಬೋದಿ, ಸಾಂಸ್ಕøತಿಕ ನಾಯಕನಾಗಿ ಸಾಹಸ್ ಬಿದ್ದಪ್ಪ, ಶಿಸ್ತಿನ ನಾಯಕನಾಗಿ ಸುನಿಲ್ ಆಯ್ಕೆಯಾದರು. ಹಾಗೆಯೇ ಫೀನಿಕ್ಸ್ ಗುಂಪಿನ ನಾಯಕಿ-ಉಪನಾಯಕಿ ಯಾಗಿ ರಿಶಾ ನಾಣಯ್ಯ-ಆಶಾಕುಮಾರಿ, ಪೆಗಸಸ್ ಗುಂಪಿನ ನಾಯಕರಾಗಿ ದೇವಯ್ಯ- ಉಪನಾಯಕಿಯಾಗಿ ಅರಿಲ್ ಟಿ.ಎಸ್., ನೋಕ್ಟಾ ಗುಂಪಿನ ನಾಯಕರಾಗಿ ಧನುಷ್ ಗೌಡ, ಉಪನಾಯಕಿಯಾಗಿ ಆಮ್ನ ಅಮೀರ್, ಆಕ್ವಿಲಾ ಗುಂಪಿನ ನಾಯಕರಾಗಿ ಯಶಸ್ ಗೌಡ- ಉಪನಾಯಕಿಯಾಗಿ ಮೌಲ್ಯ ಮಹೇಶ್ ಆಯ್ಕೆಗೊಂಡು ಪ್ರಮಾಣ ವಚನ ಸ್ವೀಕರಿಸಿದರು. ಪ್ರಾಂಶುಪಾಲ ಅರುಣ್‍ಕುಮಾರ್ ಪ್ರಮಾಣ ವಚನ ಬೋಧಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಟ್ರಸ್ಟಿಗಳಾದ ರಕ್ಷಿತ್ ಅಯ್ಯಪ್ಪ ಸೇರಿದಂತೆ ಎಲ್ಲಾ ಬೋಧಕ-ಬೋಧಕೇತರ ವರ್ಗದವರು ಹಾಗೂ ವಿದ್ಯಾರ್ಥಿ ಗಳು ಹಾಜರಿದ್ದರು. ರಿವಿನ್ ಭೀಮಯ್ಯ ಹಾಗೂ ದಿಶಾ ತಂಗಮ್ಮ ಕಾರ್ಯಕ್ರಮ ನಿರೂಪಿಸಿದರು. ಅದಿತಿ ಸ್ವಾಗತಿಸಿ, ಯಶ್ಮ ವಂದಿಸಿದರು