ನಾಪೆÉÇೀಕ್ಲು, ಜು. 30: ಕೊಳಕೇರಿ ಪಟ್ಟಣದಿಂದ ಕೋಕೇರಿಗಾಗಿ ವೀರಾಜಪೇಟೆಗೆ ತೆರಳುವ ರಸ್ತೆಯು ತೀರಾ ಹದಗೆಟ್ಟಿದ್ದು, ವಾಹನ ಸಂಚಾರ ಸಾಧ್ಯವಿಲ್ಲದಂತಾಗಿದೆ. ಇಲ್ಲಿ ಓಡಾಡುತ್ತಿದ್ದ ಎರಡು ಬಸ್ಸುಗಳೂ ಸಂಚಾರವನ್ನು ಸ್ಥಗಿತಗೊಳಿಸಿವೆ. ಇದರಿಂದ ಸಾರ್ವಜನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಆದುದರಿಂದ ಕೂಡಲೇ ಸಂಬಂಧಪಟ್ಟವರು ರಸ್ತೆ ದುರಸ್ಥಿಗೆ ಕ್ರಮಕೈಗೊಳ್ಳದಿದ್ದರೆ ವೀರಾಜಪೇಟೆ - ನಾಪೆÇೀಕ್ಲು ಮುಖ್ಯ ರಸ್ತೆಯನ್ನು ಬಂದ್ ಮಾಡಿ ಉಗ್ರ ಪ್ರತಿಭಟನೆ ನಡೆಸಲಾಗುವದು ಎಂದು ಈ ವ್ಯಾಪ್ತಿಯ ಸಾರ್ವಜನಿಕರು ಎಚ್ಚರಿಸಿದ್ದಾರೆ. ರಸ್ತೆಯ ಗುಂಡಿಗೆ ಬಾಳೆಗಿಡ ನೆಟ್ಟು ಪ್ರತಿಭಟನೆ ನಡೆಸಿದ ಅವರು ಸರಕಾರ ಮತ್ತು ಜನಪ್ರತಿನಿಧಿಗಳ ವಿರುಧ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಗುಂಡಿ ಬಿದ್ದ ರಸ್ತೆಯಿಂದಾಗಿ ಈ ರಸ್ತೆಯಲ್ಲಿ ಚಲಿಸುತ್ತಿದ್ದ ಬಸ್ಸುಗಳು ಕೆಲವು ತಿಂಗಳುಗಳಿಂದ ತಮ್ಮ ಓಡಾಟ ನಿಲ್ಲಿಸಿವೆ. ಅನಿವಾರ್ಯವಾಗಿ ಕೆಲವು ಖಾಸಾಗಿ ವಿದ್ಯಾಸಂಸ್ಥೆಗಳ ಬಸ್ಸುಗಳು ಇಲ್ಲಿ ಪ್ರತಿ ದಿನ ಓಡಾಡುತ್ತಿವೆ. ಈ ರಸ್ತೆಯಲ್ಲಿ ಇತರ 100ಕ್ಕೂ ಅಧಿಕ ಮದರಸ ಮತ್ತು ಶಾಲಾ ವಿದ್ಯಾರ್ಥಿಗಳು ಓಡಾಡುತ್ತಿದ್ದಾರೆ. ಕೆಸರಿನ ಕಾರಣದಿಂದ ಅವರಿಗೂ ಓಡಾಡಲು ಸಾಧ್ಯವಾಗುತ್ತಿಲ್ಲ. ಈ ಸಂದರ್ಭದಲ್ಲಿ ವಾಹನ ಬಂದರಂತೂ ವಿದ್ಯಾರ್ಥಿಗಳು ಕೆಸೆರಿನ ಓಕುಳಿಯಲ್ಲಿ ಮೀಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅನಾಹುತ ಸಂಭವಿಸುವ ಮುನ್ನ ಸಂಬಂಧಪಟ್ಟವರು ಸೂಕ್ತ ಕ್ರಮಕೈಗೊಳ್ಳಬೇಕು ಎಂದರು.

ಕಾಂಕ್ರೀಟ್ ರಸ್ತೆಯಲ್ಲಿಯೂ ನೀರು : ಈ ರಸ್ತೆಯಲ್ಲಿ ಕೆಲವು ಕಿ.ಮೀ.ಗಳಷ್ಟು ದೂರವನ್ನು ಕಾಂಕ್ರೀಟ್ ರಸ್ತೆಯಾಗಿ ಪರಿವರ್ತಿಸಲಾಗಿದೆ. ಆದರೆ ರಸ್ತೆಯ ಕಾಮಗಾರಿ ಸರಿಯಾಗಿಲ್ಲದ ಕಾರಣ ರಸ್ತೆಯ ಮೇಲೆಯೇ ನೀರು ನಿಂತು ಕೆರೆಯ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಸಂದರ್ಭದಲ್ಲಿ ಈ ನೀರು ಸಮೀಪದ ಮನೆಯೊಳಗೆ ನುಗ್ಗುತ್ತಿದೆ ಎಂದು ಸಾರ್ವಜನಿಕರು ದೂರಿದರು.

ಕೈಚೆಲ್ಲಿದ ಗ್ರಾ.ಪಂ: ಈ ರಸ್ತೆ ಬದಿಯಲ್ಲೇ ನಾಪೆÇೀಕ್ಲು ಗ್ರಾಮ ಪಂಚಾಯಿತಿ ಸದಸ್ಯರು ವಾಸಿಸುತ್ತಿದ್ದಾರೆ. ಅವರಲ್ಲಿ ಈ ಬಗ್ಗೆ ಮನವಿ ಸಲ್ಲಿಸಿದಾಗ ಇದು ಜಿಲ್ಲಾ ಪಂಚಾಯಿತಿ ರಸ್ತೆ ಎಂಬುದಾಗಿ ತಮ್ಮ ಜವಾಬ್ದಾರಿಯಿಂದ ನುಣಿಚಿಕೊಳ್ಳುತ್ತಿದ್ದಾರೆ. ಈ ವ್ಯಾಪ್ತಿಯಲ್ಲಿ 4 ಜನ ಗ್ರಾಮ ಪಂಚಾಯಿತಿ ಸದಸ್ಯರಿದ್ದರೂ ಯಾವದೇ ಫಲ ದೊರೆತಿಲ್ಲ ಎಂದು ತಮ್ಮ ಅಸಹಾಯಕತೆ ಪ್ರದರ್ಶಿಸಿದರು.

ಆದುದರಿಂದ ಸಂಬಂಧಪಟ್ಟವರು ರಸ್ತೆ ದುರಸ್ಥಿಗೆ ಹಾಗೂ ಬಸ್ ಸಂಚಾರ ವ್ಯವಸ್ಥೆಗೆ ಕೂಡಲೇ ಕ್ರಮಕೈಗೊಳ್ಳದಿದ್ದರೆ ಮುಖ್ಯ ರಸ್ತೆ ತಡೆ ನಡೆಸಿ ಉಗ್ರ ಪ್ರತಿಭಟನೆ ನಡೆಸಲಾಗುವದು ಎಂದು ಅವರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸಾರ್ವಜನಿಕರಾದ ಜಬ್ಬರ್, ಬಶೀರ್, ಚೇನಂಡ ದೇವಿ, ಅಬೀದ್, ಸಾಲಿಯ, ಜಾಫರ್, ಗಫೂರ್, ಲತೀಫ್, ಸಮ್ಮದ್, ಇಬ್ರಾಹಿಂ, ಸರ್ಪೂದ್ದೀನ್, ಮತ್ತಿತರರು ಇದ್ದರು.