ಮೂರ್ನಾಡು, ಜು. 30: ವಿದ್ಯಾಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಪ್ರೊಫೇಸರ್ ಪಿ.ಎ. ಭಾಗೀರಥಿ ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಎ.ಎಸ್. ರಶ್ಮಿ ಗಿಡ ನೆಡುವದರ ಮೂಲಕ ವನಮೋತ್ಸವಕ್ಕೆ ಚಾಲನೆ ನೀಡಿದರು. ವಿದ್ಯಾಸಂಸ್ಥೆ ಆಟದ ಮೈದಾನದ ಸುತ್ತಲು ವಿವಿಧ ಬಗೆಯ ಗಿಡಗಳನ್ನು ನೆಡಲಾಯಿತು. ಈ ಸಂದರ್ಭ ವಿದ್ಯಾಸಂಸ್ಥೆ ಕಾರ್ಯದರ್ಶಿ ಚೌರೀರ ಎಂ. ಪೆಮ್ಮಯ್ಯ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪಿ.ಎಂ. ದೇವಕಿ, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಎಸ್.ಡಿ. ಪ್ರಶಾಂತ್, ಪ್ರೌಢಶಾಲೆ ವೃತ್ತಿ ಶಿಕ್ಷಕ ಎಚ್.ಬಿ. ಕೃಷ್ಣಪ್ಪ ಹಾಗೂ ವಿದ್ಯಾಸಂಸ್ಥೆ ಶಿಕ್ಷಕ ವೃಂದದವರು ಹಾಜರಿದ್ದರು.
ಕುಶಾಲನಗರ: ಕುಶಾಲನಗರ ಸಂತ ಸೆಬಾಸ್ಟಿಯನ್ ಚರ್ಚ್ ಆವರಣದಲ್ಲಿ ರೋಟರಿ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ನಡೆಯಿತು.
ಚರ್ಚ್ ಧರ್ಮಗುರುಗಳಾದ ಫಾ.ಮೈಕಲ್ ಮರಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರೋಟರಿ ಅಧ್ಯಕ್ಷರಾದ ಪ್ರಕಾಶ್, ಕಾರ್ಯದರ್ಶಿ ಹರೀಶ್, ಸದಸ್ಯರುಗಳಾದ ಡಾ. ಹರಿ ಎ ಶೆಟ್ಟಿ, ಡಾ.ಧರಣೇಂದ್ರ, ಪ್ರೇಮ್‍ಚಂದ್ರನ್, ರಂಗಸ್ವಾಮಿ, ಕ್ರಿಜ್ವಲ್ ಕೋಟ್ಸ್ ಮತ್ತಿತರರು ಇದ್ದರು.
ಕುಶಾಲನಗರ: ಗುಮ್ಮನಕೊಲ್ಲಿಯ ಯುರೋ ಕಿಡ್ಸ್ ವಿದ್ಯಾಸಂಸ್ಥೆ ಆಶ್ರಯದಲ್ಲಿ ಮುಳ್ಳುಸೋಗೆಯ ಪಂಚಾಯ್ತಿ ಆವರಣದ ಹಾಗೂ ರಸ್ತೆ ಬದಿಗಳಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು.
ಸಂಸ್ಥೆಯ ಅಧ್ಯಕ್ಷರಾದ ರಾಕಿವಾಸ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ತಳಿಯ ಗಿಡಗಳನ್ನು ನೆಡಲಾಯಿತು. ಸಂಸ್ಥೆಯ 50 ಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು ಪೋಷಕರು ಗಿಡ ನೆಡುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಪರಿಸರ ಹಾಗೂ ವನಮಹೋತ್ಸವದ ಕುರಿತಾಗಿ ವಿದ್ಯಾರ್ಥಿಗಳಾದ ತನಿಷ, ಶಿವಾನಿ ಹಾಗೂ ಭಗತ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಪಂಚಾಯ್ತಿ ಸದಸ್ಯೆ ಕೆ.ಪಿ.ಚಂದ್ರಕಲಾ, ಮುಳ್ಳುಸೋಗೆ ಗ್ರಾಮಪಂಚಾಯ್ತಿ ಅಧ್ಯಕ್ಷೆ ಭವ್ಯ ಹಾಗೂ ಸದಸ್ಯರು, ವಿದ್ಯಾಸಂಸ್ಥೆ ಪ್ರಾಂಶುಪಾಲರಾದ ದಾರ್ತಿ ವಾಸ್, ಶಿಕ್ಷಕರಾದ ಸುನಿತಾ, ಸಿಂಧು, ಹೇಮ, ಪವಿತ್ರಾ, ಆದರ್ಶ್ ಮತ್ತಿತರರು ಪಾಲ್ಗೊಂಡಿದ್ದರು.