ಕೂಡಿಗೆ, ಜು. 31: ನೈಸರ್ಗಿಕವಾಗಿ ದೊರೆಯುವ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಉತ್ತಮ ಗಾಳಿ ಸೇವನೆಯ ಮೂಲಕ ಆರೋಗ್ಯಕರ ಜೀವನ ನಡೆಸಲು, ಪ್ರತಿಯೊಬ್ಬರು ಪರಿಸರ ಸಂರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವದು ಅನಿವಾರ್ಯವಾಗಿದೆ ಎಂದ ಶಾಸಕ ಅಪ್ಪಚ್ಚುರಂಜನ್ ಹೇಳಿದರು. ಕೂಡಿಗೆಯ ಸರಕಾರಿ ಸಮುದಾಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡುತ್ತಾ, ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಿದ್ದು, ಆರೋಗ್ಯ ಸಮತೋಲನವನ್ನು ಕಾಪಾಡಿಕೊಳ್ಳಲು ಇತ್ತೀಚಿನ ದಿನಗಳಲ್ಲಿ ಪರಿಸರ ಅವಶ್ಯ ವಾಗಿರುತ್ತದೆ ಎಂದರು.
ಬಿಜೆಪಿ ವಿಸ್ತಾರಕ್ ಅಭಿಯಾನದ ಜೊತೆಗೆ ವನಮಹೋತ್ಸವವನ್ನು ಆಯಾ ವ್ಯಾಪ್ತಿಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಅದರಂತೆ ಕೂಡಿಗೆ, ಕೂಡುಮಂಗಳೂರು ವ್ಯಾಪ್ತಿಯ ಬಿಜೆಪಿ ವಿಸ್ತಾರಕ್ ಅಭಿಯಾನದ ವತಿಯಿಂದ ಗಿಡಗಳನ್ನು ನೆಡಲಾಗುತ್ತಿದೆ ಎಂದರು.
ಈ ಸಂದರ್ಭ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಗಣಿ ಪ್ರಸಾದ್, ತಾಲ್ಲೂಕು ಬಿಜೆಪಿ ಉಪಾಧ್ಯಕ್ಷ ಕೆ.ಕೆ.ಭೋಗಪ್ಪ, ತಾಲೂಕು ಯುವ ಮೋರ್ಚದ ಕಾರ್ಯದರ್ಶಿ ಎಂ.ಡಿ.ಕೃಷ್ಣಪ್ಪ, ಕೂಡುಮಂಗಳೂರು ಬಿಜೆಪಿ ಬೂತ್ ಸಮಿತಿಯ ಅಧ್ಯಕ್ಷ ಮಂಜುನಾಥ್ ಗುರುಲಿಂಗಪ್ಪ, ಯುವಮೋರ್ಚದ ಅಧ್ಯಕ್ಷ ಶಶಿಕಿರಣ್, ತಾಲ್ಲೂಕು ಎಸ್‍ಟಿ ಮೋರ್ಚದ ಕಾರ್ಯದರ್ಶಿ ಕುಮಾರಸ್ವಾಮಿ, ತಾ.ಪಂ ಸದಸ್ಯ ಗಣೇಶ್, ಕೂಡುಮಂಗಳೂರು ಗ್ರಾ.ಪಂ ಸದಸ್ಯರುಗಳಾದ ಸಾವಿತ್ರಿ ರಾಜನ್, ಜ್ಯೋತಿ ಪ್ರಮೀಳ, ಜಯಮ್ಮ, ಬಾಸ್ಕರ್‍ನಾಯಕ್, ಮಹಿಳಾ ಘಟಕದ ಅಧ್ಯಕ್ಷೆ ಇಂದಿರಾ, ಪದಾಧಿಕಾರಿಗಳಾದ ನಿರ್ಮಲ ಸುರೇಶ್, ಆರ್.ಎಂ.ಸಿ.ಮಾಜೀ ಅಧ್ಯಕ್ಷ ಎಂ.ಬಿ.ಜಯಂತ್, ಎಸ್.ಟಿ.ಘಟಕದ ಪದಾಧಿಕಾರಿಗಳು ಕುಶಾಲನಗರ ಬಿಜೆಪಿ ಘಟಕದ ಪದಾಧಿಕಾರಿಗಳು ಮತ್ತಿತರರು ಇದ್ದರು.