*ಗೋಣಿಕೊಪ್ಪಲು, ಜು. 31 : 8 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ತಾ.ಪಂ. ವಾಣಿಜ್ಯ ಸಂಕೀರ್ಣವನ್ನು ಶಾಸಕ ಕೆ.ಜಿ. ಬೋಪಯ್ಯ ಲೋಕಾರ್ಪಣೆಗೊಳಿಸಿದರು. ಪೊನ್ನಂಪೇಟೆ ಗ್ರಾ.ಪಂ. ಸಮೀಪದಲ್ಲಿ ಒಂದು ಅಂತಸ್ತಿನ ವಾಣಿಜ್ಯ ಸಂಕೀರ್ಣ ನಿರ್ಮಾಣ ಗೊಂಡಿದ್ದು, 2014-15ನೇ ಸಾಲಿನ ತಾ. ಪಂ. ಅನುದಾನದಲ್ಲಿ ಮೇಲಂತಸ್ತನ್ನು ನಿರ್ಮಿಸಲಾಗಿದೆ. ಒಟ್ಟು ಕೆಳಭಾಗ ಹಾಗೂ ಮೇಲ್ಭಾಗದಲ್ಲಿ ಆರು ಕೊಠಡಿಗಳನ್ನು ಹೊಂದಿರುವ ವ್ಯವಸ್ಥಿತ ವಾಣಿಜ್ಯ ಸಂಕೀರ್ಣ ಇದಾಗಿದೆ. ಈ ಸಂಧರ್ಭ ತಾ.ಪಂ. ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್, ಉಪಾಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ಗ್ರಾ.ಪಂ. ಅಧ್ಯಕ್ಷೆ ಮೂಕಳೇರ ಸುಮಿತಾ, ಜಿ.ಪಂ. ಸದಸ್ಯ ಅಚ್ಚಪಂಡ ಮಹೇಶ್, ತಾ.ಪಂ. ಸದಸ್ಯರುಗಳಾದ ಆಶಾ ಪೂಣಚ್ಚ, ಕುಟ್ಟಂಡ ಅಜಿತ್ ಕರುಂಬಯ್ಯ, ಗಣೇಶ್ ಸುಮಾ, ಕಾವೇರಮ್ಮ, ಜಿನೀಶ್, ಆಶಾ ಜೇಮ್ಸ್, ಗ್ರಾ.ಪಂ. ಸದಸ್ಯರಾದ ಅಮ್ಮತ್ತಿರ ಸುರೇಶ್, ಕಾವ್ಯ ಮಧು, ತಾಲೂಕು ಬಿ.ಜೆ.ಪಿ. ಮಂಡಲ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ಪೊನ್ನಂಪೇಟೆ ಬಿ.ಜೆ.ಪಿ. ಸ್ಥಾನೀಯ ಸಮಿತಿ ಅಧ್ಯಕ್ಷ ಮುದ್ದಿಯಡ ಮಂಜು, ಆರ್.ಎಂ.ಸಿ. ಸದಸ್ಯ ವಿನು ಚಂಗಪ್ಪ, ತಾಲೂಕು ಪೆಡರೇಷನ್ ಉಪಾಧ್ಯಕ್ಷ ಮಲ್ಲಂಡ ಮಧು ದೇವಯ್ಯ, ಕಾರ್ಯನಿರ್ವಹಣಾಧಿಕಾರಿ ಕಿರಣ್ ಪೆಡ್ನೇಕರ್, ಪಿ.ಡಿ.ಒ ಅಬ್ದುಲ್ಲಾ ಹಾಜರಿದ್ದರು.