ಮಡಿಕೇರಿ, ಆ. 1: ಇಲ್ಲಿನ ಬ್ರಹ್ಮಗಿರಿ ವಾರಪತ್ರಿಕೆ ಕಚೇರಿ ಸಭಾಂಗಣದಲ್ಲಿ ‘ತಿರಿ ಬೊಳ್‍ಚ’ ಸಂಘದ ಉದ್ಘಾಟನಾ ಸಮಾರಂಭ, ‘ಕೊಡವರ ಮದುವೆಯಲ್ಲಿ ಗಂಗಾ ಪೂಜೆ’ ವಿಷಯ ಕುರಿತು ಪ್ರಬಂಧ ಮಂಡನೆ ಹಾಗೂ ಸಂವಾದ ಕಾರ್ಯಕ್ರಮ ಜರುಗಿತು.ಸಂಘದ ಅಧ್ಯಕ್ಷೆ ಉಳ್ಳಿಯಡ ಡಾಟಿ ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಚೋಕಿರ ಅನಿತ ದೇವಯ್ಯ ಹಾಗೂ ಐತಿಚಂಡ ರಮೇಶ್ ಉತ್ತಪ್ಪ ಪ್ರಬಂಧ ಮಂಡಿಸಿದರು. ಮುಖ್ಯ ಅತಿಥಿಗಳಾಗಿ ಕುಕ್ಕೇರ ಜಯಚಿಣ್ಣಪ್ಪ, ಉಳ್ಳಿಯಡ ವಿನು ಪೂವಯ್ಯ, ಕಾಳೇಗಂಡ ಟಿ. ಮುತ್ತಪ್ಪ ಭಾಗವಹಿಸಿ ಮಾತನಾಡಿದರು. ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮಂಡೇಪಂಡ ರತನ್ ಕುಟ್ಟಯ್ಯ, ಮಾದೇಟಿರ ಬೆಳ್ಯಪ್ಪ, ಬೊಳ್ಳಜಿರ ಅಯ್ಯಪ್ಪ, ಕೂಪದಿರ ಸುಂದರಿಮಾಚಯ್ಯ, ಮುಕ್ಕಾಟಿರ ಪೊನ್ನಮ್ಮ, ಕನ್ನಂಡ ಕವಿತ ಬೊಳ್ಳಪ್ಪ, ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ, ಕಲಿಯಂಡ ಜೀಜಾ ಅಚ್ಚಪ್ಪ, ಪಳಂಗಂಡ ಸಬಿತ ಪ್ರಸಾದ್ ಅವರುಗಳು ಅಭಿಪ್ರಾಯಗಳನ್ನು ಮಂಡಿಸಿದರು.

ಗಂಗಾ ಪೂಜೆಯ ಸಮಯವನ್ನು 2 ಗಂಟೆಯ ಅವಧಿಗೆ ನಿಗದಿ ಮಾಡಬೇಕು. ಪ್ರತಿಯೊಂದು ಕುಟುಂಬದವರು ಈ ನಿಟ್ಟಿನಲ್ಲಿ ದೃಢ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಮನವಿ ಮಾಡುವಂತೆ ಸಂಘ ತೀರ್ಮಾನ ಕೈಗೊಂಡಿತು. ತೆನ್ನೀರ ರಾಧ ಪೊನ್ನಪ್ಪ, ಕೂಪದಿರ ಜೂನಾ ವಿಜಯ, ಬೊಟ್ಟೋಳಂಡ ನಿವ್ಯ ಸಚಿನ್ ಪ್ರಾರ್ಥಿಸಿದರೆ, ಕಾಳೇಂಗಡ ಸಾವಿತ್ರಿ ಮುತ್ತಪ್ಪ ವಂದಿಸಿ, ಕೂಪದಿರ ಶಾರಾದ ನಂಜಪ್ಪ ಕಾರ್ಯಕ್ರಮ ನಿರೂಪಿಸಿದರು.