ಗೋಣಿಕೊಪ್ಪಲು, ಆ. 2: ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ನ ಗೋಣಿಕೊಪ್ಪಲು ಸ್ಥಾನೀಯ ಸಮಿತಿಯು ಗೋಣಿಕೊಪ್ಪಲು ಟ್ರೇಡರ್ಸ್ ಚಾರಿಟೇಬಲ್ ಟ್ರಸ್ಟ್ ಹೆಸರಿನಲ್ಲಿ ಈಗಾಗಲೇ ವರ್ತಕರ ಶ್ರೇಯೋಭಿವೃದ್ಧಿಗಾಗಿ ಸ್ವಂತ ಕಟ್ಟಡವೊಂದನ್ನು ನಿರ್ಮಿಸುತ್ತಿದೆ. ಅದರ ಎರಡನೇ ಅಂತಸ್ತಿನಲ್ಲಿ ಚೇಂಬರ್ನ ಕಚೇರಿ ಮತ್ತು ಸಮುದಾಯ ಭವನವನ್ನು ನಿರ್ಮಿಸಲು ಆಯೋಜಿಸಿದ್ದು, ಸಾರ್ವಜನಿಕ ದೇಣಿಗೆ ಮತ್ತು ಸರಕಾರದ ಅನುದಾನದೊಂದಿಗೆ ಕಟ್ಟಡ ಕಾಮಗಾರಿ ಮುಂದುವರೆಸುವಂತೆ ತೀರ್ಮಾನಿಸಿದ್ದು ಅದರಂತೆ ಅಧ್ಯಕ್ಷ ಸುನಿಲ್ ಮಾದಪ್ಪ ಮತ್ತು ಉಪಾಧ್ಯಕ್ಷ ಪೊನ್ನಿಮಾಡ ಸುರೇಶ್ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರನ್ನು ಭೇಟಿ ಮಾಡಿ ಅನುದಾನ ಕೋರಿ ಮನವಿ ನೀಡಲಾಯಿತು. ಜಿಲ್ಲೆಯಲ್ಲಿ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ 30 ಸ್ಥಾನೀಯ ಸಮಿತಿಗಳನ್ನು ಹೊಂದಿದ್ದು, ಗೋಣಿಕೊಪ್ಪಲು ಸ್ಥಾನೀಯ ಸಮಿತಿಯೇ ಸ್ವಂತ ಕಟ್ಟಡ ಹೊಂದುವದರಲ್ಲಿ ಮೊದಲಿನದು ಎಂದು ಅವರಿಗೆ ಮನವರಿಕೆ ಮಾಡಿಕೊಟ್ಟರು. ತಾನೂ ಕೂಡ ಚೇಂಬರ್ನ ನಿರ್ದೇಶಕನಾಗಿ ಸೇವೆ ಸಲ್ಲಿಸಿದ್ದು ತನ್ನಿಂದಾದ ಸಹಕಾರ ನೀಡುವದಾಗಿ ಭರವಸೆ ನೀಡಿದರು.