ಸೋಮವಾರಪೇಟೆ, ಆ. 3: ಸ್ಥಳೀಯ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸರಬರಾಜಾಗುವ ಕುಡಿಯುವ ನೀರನ್ನು ಶುದ್ಧೀಕರಣಗೊಳಿಸುವ ಘಟಕದಲ್ಲಿ ನೂತನವಾಗಿ ಜನರೇಟರ್ ಅಳವಡಿಸಲಾಗಿದ್ದು, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟನೆ ಮಾಡಿದರು.ಬರಪರಿಹಾರ ನಿಧಿಯಡಿ ರೂ. 11 ಲಕ್ಷ ವೆಚ್ಚದಲ್ಲಿ 125 ಕೆ.ವಿ. ಸಾಮಥ್ರ್ಯದ ನೂತನ ಜನರೇಟರ್ ಘಟಕ ನಿರ್ಮಿಸಲಾಗಿದ್ದು, ಇದರಿಂದಾಗಿ ವಿದ್ಯುತ್ ಸ್ಥಗಿತಗೊಳ್ಳುವ ಸಂದರ್ಭವೂ ಸಹ ನಗರದ ಬಸವೇಶ್ವರ ರಸ್ತೆ, ಕರ್ಕಳ್ಳಿ, ತಾಲೂಕು ಕಚೇರಿಯ ಬಳಿಯಿರುವ ನೀರಿನ ಟ್ಯಾಂಕ್‍ಗಳಿಗೆ ನೀರು ಹಾಯಿಸಬಹುದಾಗಿದೆ. ಆ ಮೂಲಕ ಪಂಚಾಯಿತಿ ವ್ಯಾಪ್ತಿಯ ಮನೆಗಳಿಗೆ ಕುಡಿಯುವ ನೀರು ಒದಗಿಸಲು ಸಹಕಾರಿಯಾಗಲಿದೆ ಎಂದು ಶಾಸಕ ರಂಜನ್ ತಿಳಿಸಿದರು. ಈ ಸಂದರ್ಭ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಷ್ಮಾ, ಸದಸ್ಯರುಗಳಾದ ಶೀಲಾ ಡಿಸೋಜ, ಸುಶೀಲ, ಲೀಲಾ ನಿರ್ವಾಣಿ, ಇಂದ್ರೇಶ್, ಉದಯಕುಮಾರ್, ನಾಗರಾಜ್, ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ, ಆರೋಗ್ಯ ನಿರೀಕ್ಷಕ ಉದಯಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.