ವೀರಾಜಪೇಟೆ, ಆ. 2: ಕಳೆದ ಮೂರು ತಿಂಗಳ ಹಿಂದೆ ನಡೆದ ಸೆಸ್ಕಾಂ ಗ್ರಾಹಕರ ಕುಂದು ಕೊರತೆ ಸಭೆಯಲ್ಲಿ ಗ್ರಾಹಕರಿಂದ ಬಂದ ಸಮಸ್ಯೆಗಳ ಪೈಕಿ ಶೇಕಡ 90ರಷ್ಟಕ್ಕೆ ಪರಿಹಾರ ಒದಗಿಸಲಾಗಿದೆ. ಇನ್ನು ಶೇಕಡ 10ರಷ್ಟು ಸಮಸ್ಯೆಗಳಿಗೂ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಚೆಸ್ಕಾಂನ ಅಧೀಕ್ಷಕ ಕೆ.ರಾಮಚಂದ್ರಪ್ಪ ತಿಳಿಸಿದರು.

ವೀರಾಜಪೇಟೆ ಸೆÉಸ್ಕಾಂ ಉಪ ವಿಭಾಗದಿಂದ ಕಚೇರಿಯ ಸಭಾಂಗಣ ದಲ್ಲಿ ಇಂದು ಆಯೋಜಿಸಲಾಗಿದ್ದ ಸೆÉಸ್ಕಾಂ ಗ್ರಾಹಕರ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿದ್ದ ರಾಮಚಂದ್ರಪ್ಪ ಅವರು ಗ್ರಾಹಕರ ಸಮಸ್ಯೆಗಳಿಗೆ ನೇರವಾಗಿ ಸ್ಪಂದಿಸುವ ಸಲುವಾಗಿ ಕೊಡಗು, ಚಾಮರಾಜನಗರದ ಜಿಲ್ಲೆಗಳ ಉಪ ವಿಭಾಗಗಳಲ್ಲಿ ಗ್ರಾಹಕರಿಗಾಗಿ ಜನಸ್ಪಂದನ ಹಾಗೂ ಕುಂದು ಕೊರತೆ ಸಭೆ ಆಯೋಜಿಸಲಾಗುತ್ತಿದೆ. ಗ್ರಾಹಕರ ಸಮಸ್ಯೆಗಳನ್ನು ಖುದ್ದು ಪರಿಶೀಲಿಸಿ ಪರಿಹಾರ ಒದಗಿಸುವದು ಸಭೆಯ ಉದ್ದೇಶ. ಈಗ ಕೇಂದ್ರ ಸರಕಾರದ ಸುಮಾರು ಐದು ಕೋಟಿ ವೆಚ್ಚದ ಇಂಟಿಗ್ರೇಟೆಡ್ ಪವರ್ ಡೆವೆಲಪ್ ಮೆಂಟ್ (ಐ.ಪಿ.ಡಿ.ಎಸ್) ಯೋಜನೆ ಹಾಗೂ ಗ್ರಾಮಾಂತರ ಪ್ರದೇಶ ದೀನ ದಯಾಳ್ ಉಪಾಧ್ಯಾಯ ವಿದ್ಯುತ್ ಯೋಜನೆಯಿಂದ (ಆರ್.ಪಿ.ಡಿ.ಎಸ್.) ಪಟ್ಟಣ, ಗ್ರಾಮಗಳಿಗೆ ಎಲ್ಲ ರೀತಿಯ ಸೌಲಭ್ಯಗಳು ದೊರೆಯಲಿವೆ. ಯೋಜನೆಗಳಿಂದ ವಿದ್ಯುತ್ ಸಂಪರ್ಕ ಇನ್ನು ಪ್ರಗತಿ ಹಾಗೂ ಅಭಿವೃದ್ಧಿಯತ್ತ ಸಾಗಲಿದ್ದು ಗ್ರಾಹಕರಿಗೆ ಉತ್ತಮ ಸೇವೆ ದೊರೆಯಲಿದೆ ಎಂದರು.

ಕಾಫಿ ತೋಟಗಳಲ್ಲಿ ಕಾಡಾನೆಗಳು ದಾಳಿ ಮಾಡುವ ಸಂದರ್ಭದಲ್ಲಿ ವಿದ್ಯುತ್ ತಗಲಿ ಸಾವನ್ನಪ್ಪುತ್ತಿರುವ ಕುರಿತು ಗ್ರಾಹಕರುಗಳÀ ಸಮಸ್ಯೆಗೆ ಪ್ರತಿಕ್ರಿಯಿಸಿದ ರಾಮಚಂದ್ರಪ್ಪ ಅವರು ಆನೆಗಳು ತೋಟದಲ್ಲಿ ಶಿಬಿರ ಹೂಡುವ ಸಮಯದಲ್ಲಿ ಗ್ರಾಹಕರಿಂದ ದೂರು ಬಂದರೆ ತಕ್ಷಣ ಆ ವಿಭಾಗದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವದು. ಈಗಾಗಲೇ ಸೆಸ್ಕಾಂ ಕೊಡಗಿನಲ್ಲಿ, ಆನೆಗಳಿಗೆ ತೋಟದಲ್ಲಿ ಹಾದು ಹೋಗಿ ರುವ ಕಂಬಕ್ಕೆ ಅಳವಡಿಸಿರುವ ಹೈಟೆನ್ಶನ್ ವಿದ್ಯುತ್ ತಗುಲಿ ಬಲಿಯಾಗುತ್ತಿರು ವದನ್ನು ತಡೆಯಲು ಸಂಸ್ಥೆ ಚಿಂತನೆ ನಡೆಸಿದೆ. ಕೇಂದ್ರ ಸರಕಾರದ ಈಗಿನ ಯೋಜನೆಗಳಿಂದ ಗ್ರಾಹಕರಿಗೆ ಸಮರ್ಪಕ ವಿದ್ಯುತ್ ಸಂಪರ್ಕ ದೊರೆ ಯಲಿರುವದಾಗಿಯೂ ಹೇಳಿದರು.

ವೀರಾಜಪೇಟೆ ಪಟ್ಟಣದ ವಿದ್ಯಾನಗರ, ಬಿಟ್ಟಂಗಾಲ ಬಳಿಯ ನಾಂಗಾಲ ಗ್ರಾಮ, ವಿ.ಬಾಡಗ ಸೇರಿದಂತೆ ಅಗತ್ಯವಿರುವೆಡೆಗಳಲ್ಲಿ ಟ್ರಾನ್ಸ್ ಫಾರ್ಮರ್ ಅಳವಡಿಕೆ, ಆಯ್ದ ವಿದ್ಯುತ್ ಕಂಬಗಳಲ್ಲಿರುವ ಹಳೆ ತಂತಿಗಳನ್ನು ಬದಲಿಸಿ ತಾಮ್ರದ ತಂತಿ ಅಳವಡಿಸು ವದು, ದುರಸ್ತಿಗೊಳಗಾದ ಕಂಬಗಳ ಬದಲಾವಣೆ, ಕಂಬದಲ್ಲಿ ತುಕ್ಕು ಹಿಡಿದಿರುವ ಉಪಕರಣಗಳನ್ನು ಬದಲಿಸುವದು, ಗ್ರಾಹಕರ ಮನವಿ ಮೇರೆ ಬಿಟ್ಟಂಗಾಲದಲ್ಲಿ ಸೆಸ್ಕಾಂ ಉಪ ಕಚೇರಿ ಪ್ರಾರಂಭಿಸಲು ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವದು ಎಂದು ವೀರಾಜಪೇಟೆ ಉಪ ವಿಭಾಗದ ಸಹಾಯಕ ಅಭಿಯಂತರ ಸುರೇಶ್ ಸಭೆಯಲ್ಲಿ ತಿಳಿಸಿದರು.

ಮುಖ್ಯರಸ್ತೆ ಬದಿಯ ವಿದ್ಯುತ್ ಕಂಬಗಳ ದುರಸ್ತಿ, ತಂತಿ ಹಾಗೂ ಕಂಬಗಳ ಬದಲಾವಣೆಯ ಸಂದರ್ಭ ದಲ್ಲಿ ಗ್ರಾಮಸ್ತರು, ಸಾರ್ವಜನಿಕರು ಸಂಸ್ಥೆಯ ಸಿಬ್ಬಂದಿಗಳೊಂದಿಗೆ ಸಹಕರಿಸುವಂತೆ ಮಡಿಕೇರಿಯ ಸೆಸ್ಕಾಂ ಅಭಿಯಂತರ ಈ. ಸೋಮಶೇಖರ್ ಸಭೆಯಲ್ಲಿ ವಿನಂತಿಸಿಕೊಂಡರು.

ಕುಂದು ಕೊರತೆ ಸಭೆಯಲ್ಲಿ ಮೈಸೂರು ಸೆಸ್ಕಾಂ ವೃತ್ತದ ಸಹಾಯಕ ಅಭಿಯಂತರ ತಾರಾ, ವೀರಾಜಪೇಟೆ ಉಪ ವಿಭಾಗದ ಕಿರಿಯ ಅಭಿಯಂತರರು, ಇತರ ಸಿಬ್ಬಂದಿಗಳು ಹಾಜರಿದ್ದರು.