ಮಡಿಕೇರಿ, ಆ. 3: ನಿನ್ನೆಯಿಂದ ಆರಂಭಗೊಂಡಿರುವ ಆಶ್ಲೇಷ ಮಳೆಯು ಕೊಡಗಿನ ಹಲವೆಡೆ ಇದುವರೆಗೆ ಎದುರಾಗಿರುವ ಭರದ ಛಾಯೆ ದೂರಗೊಳಿಸುವ ಆಶಯವನ್ನು ಅನ್ನದಾತನಲ್ಲಿ ಮೂಡಿಸಿದೆ.
ಜಿಲ್ಲೆಯ ಬಹುತೇಕ ಮಾನಿಗದ್ದೆಗಳಲ್ಲಿ ಮುಂಗಾರು ಕ್ಷೀಣಗೊಂಡ ಪರಿಣಾಮ ಕೃಷಿ ಚಟುವಟಿಕೆಗೆ ತೀವ್ರ ಹಿನ್ನೆಡೆ ಕಂಡುಬಂದಿದೆ. ಅಲ್ಲಲ್ಲಿ ಗದ್ದೆಗಳಲ್ಲಿ ನೀರಿಲ್ಲದೆ ಕೃಷಿ ಕಾರ್ಯ ಅಪೂರ್ಣಗೊಂಡಿದ್ದು, ಪ್ರಸಕ್ತ ಆಶ್ಲೇಷ ಮಳೆÀ ಈ ಕೊರತೆ ನೀಗಿಸುವ ಆಶಯ ವ್ಯಕ್ತಗೊಂಡಿದೆ. ವೀರಾಜಪೇಟೆ ತಾಲೂಕು ಪೊದ್ದಮಾನಿ ಎಂಬಲ್ಲಿ ಮಳೆ ಕೊರತೆಯ ಭೀಕರತೆಯನ್ನು ಮೇಲಿನ ಚಿತ್ರದಲ್ಲಿ ಕಾಣಬಹುದು. ನಾಟಿ ಗದ್ದೆಯಲ್ಲಿ ನೀರಿಲ್ಲದೆ ಗದ್ದೆ ಬಿರುಕು ಬಿಟ್ಟಿದ್ದು, ಕೃಷಿ ಕಾರ್ಯ ಅರ್ಧಕ್ಕೆ ನಿಂತಿರುವ ದೃಶ್ಯವಿದು.