ಪೊನ್ನಂಪೇಟೆ, ಆ. 3: ಹಿಮಾಚ¯ ಪ್ರದೇಶದಲ್ಲಿರುವ ಅತೀ ಎತ್ತರದ ಪರ್ವತ ‘ಹನುಮಾನ್ ಡಿಬ’್ಬಕ್ಕೆ ಕೊಡಗಿನ ಇಬ್ಬರು ಯುವಕರು ಸಾಹಸಮಯ ಪರ್ವತಾರೋಹಣ ನಡೆಸಿ ಇತಿಹಾಸ ಸೃಷ್ಟಿಸಿದ್ದಾರೆ. ಕೊಡಗಿನ ಕಂಡಂಗಾಲದ ನಂಬುಡುಮಾಡ ಜಿ. ಸೋಮಣ್ಣ ಮತ್ತು ಅರಪಟ್ಟು ಗ್ರಾಮದ ಮುಕ್ಕಾಟಿರ ಎಲ್. ಬೋಪಣ್ಣ ಎಂಬವರೇ ಸಮುದ್ರ ಮಟ್ಟದಿಂದ 19161 ಅಡಿ ಎತ್ತರದಲ್ಲಿರುವ ಹನುಮಾನ್ ಡಿಬ್ಬಕ್ಕೆ ಏರಿ ಸಾಹಸ ಮೆರೆದರಾಗಿದ್ದಾರೆ.
ಹಿಮಾಚಲ ಪ್ರದೇಶದ ಮನಾಲಿಯ ಮೇಲ್ಭಾಗದಲ್ಲಿರುವ ಈ ಪರ್ವತಕ್ಕೆ ಕಳೆದ ತಿಂಗಳ 1 ರಿಂದ 10 ರವರೆಗೆ ನಡೆದ ಒಟ್ಟು 10 ದಿನಗಳ ಪರ್ವತಾರೋಹಣದಲ್ಲಿ ದೇಶದಿಂದ ಪಾಲ್ಗೊಂಡಿದ್ದ ಒಟ್ಟು 6 ಸಾಹಸಿಗರ ಪೈಕಿ ಕೊಡಗಿನಿಂದ ಇಬ್ಬರು ಭಾಗವಹಿಸಿದ್ದು ವಿಶೇಷವಾಗಿದೆ. ಜುಲೈ 1 ರಿಂದ ಇವರು ಆರಂಭಿಸಿದ ಪರ್ವತಾರೋಹಣ ಜುಲೈ 8 ರಂದು ಪರ್ವತದ ತುತ್ತ ತುದಿಗೆ ಏರಿ ಸಂಭ್ರಮಿಸಿದ ಈ ಸಾಹಸಿಗರ ತಂಡ ಪರ್ವತಾರೋಹಣದಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.
ಪರ್ವತ ಏರುವಲ್ಲಿ ಭಾರತದ ಅತ್ಯಂತ ಕ್ಲಿಷ್ಟಕರವಾದ ಎತ್ತರದ ಪರ್ವತವಾಗಿರುವ ಹನುಮಾನ್ ಡಿಬ್ಬಕ್ಕೆ ಪರ್ವತಾರೋಹಣ ಕೈಗೊಳ್ಳುವದು ಅಪರೂಪಗಳಲ್ಲಿ ಅಪರೂಪ ಎಂದು ತಜ್ಞರು ಬಣ್ಣಿಸುತ್ತಾರೆ. ಕೊಡಗಿನ ಇಬ್ಬರು ಸೇರಿದಂತೆ ಒಟ್ಟು 6 ಜನ ಪರ್ವತಾರೋಹಿ ತಂಡದ ಜೊತೆಗೆ ಮಾರ್ಗದರ್ಶಕರು, ಅಡುಗೆಗಾರರು, ಸರಕು ಹೊರುವವರು ಸೇರಿದಂತೆ ಒಟ್ಟು 7 ಜನ ಅನುಭವಿಗಳು ಸಾಥ್ ನೀಡಿದ್ದರು.
29 ವರ್ಷ ಪ್ರಾಯದ ನಂಬುಡುಮಾಡ ಸೋಮಣ್ಣ ಅವರು ಕಂಡಂಗಾಲದ ಗಣಿ ಗಣಪತಿ ಮತ್ತು 34 ವರ್ಷ ಪ್ರಾಯದ ಮುಕ್ಕಾಟಿರ ಬೋಪಣ್ಣ ಅವರು ಅರಪಟ್ಟು ಗ್ರಾಮದ ದಿ. ಮುಕ್ಕಾಟಿರ ಲವ ಅವರ ಪುತ್ರರಾಗಿದ್ದಾರೆ.